ಹಣಕಾಸು ಸಚಿವಾಲಯ
ಹೆಚ್ಚುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ ಭಾರತದ ಪ್ರಗತಿಯನ್ನು ಸುಸ್ಥಿರಗೊಳಿಸಲು ಮತ್ತು ವೇಗಗೊಳಿಸಲು ಸರ್ಕಾರದ ಆಡಳಿತ ಯಂತ್ರದಲ್ಲಿ ವಿಶೇಷ ಪ್ರಯತ್ನಗಳ ಅಗತ್ಯವಿದೆ: ಆರ್ಥಿಕ ಸಮೀಕ್ಷೆ- 2023-24
ಸಮೀಕ್ಷೆಯು ಕೇಂದ್ರ ಸಚಿವಾಲಯಗಳ ಹಿರಿಯ ಶ್ರೇಣಿಗಳಿಗೆ ಪಾರ್ಶ್ವ ಪ್ರವೇಶದ ಪ್ರಾರಂಭವನ್ನು ಸೂಚಿಸುತ್ತದೆ ಮತ್ತು ಅದರ ವಿಸ್ತರಣೆಗಾಗಿ
ನೀತಿ ಫಲಿತಾಂಶಗಳನ್ನು ಪ್ರಮಾಣ ಮತ್ತು ವೇಗ-ಸಮೀಕ್ಷೆಯಲ್ಲಿ ಖಚಿತಪಡಿಸಿಕೊಳ್ಳಲು ಉತ್ತರದಾಯಿತ್ವ ಕಾರ್ಯವಿಧಾನಗಳು ಮತ್ತು ಅಭ್ಯಾಸಗಳು ಅಗತ್ಯವಾಗುತ್ತವೆ ಎಂದು ಶಿಫಾರಸು ಮಾಡುತ್ತದೆ
Posted On:
22 JUL 2024 3:24PM by PIB Bengaluru
ಮಧ್ಯಮಾವಧಿಯ ದೃಷ್ಟಿಕೋನದಲ್ಲಿ ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಕಾರ್ಯತಂತ್ರವು ಫಲಪ್ರದವಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಆಡಳಿತ ಯಂತ್ರದ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು ನಿರ್ಣಾಯಕವಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2023-24ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಹೆಚ್ಚುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ಭಾರತದ ಪ್ರಗತಿಯನ್ನು ಸುಸ್ಥಿರಗೊಳಿಸಲು ಮತ್ತು ವೇಗಗೊಳಿಸಲು ಸರ್ಕಾರದ ಯಂತ್ರೋಪಕರಣಗಳಲ್ಲಿ ವಿಶೇಷ ಹೂಡಿಕೆಯ ಅಗತ್ಯವಿದೆ ಎಂದು ಸಮೀಕ್ಷೆ ಹೇಳಿದೆ. 2014 ರಿಂದ, ಭಾರತವು ನಿರ್ಣಾಯಕ ಮೂಲಸೌಕರ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಮತ್ತು ನಾಗರಿಕರ ಯೋಗಕ್ಷೇಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನೇರ ಪ್ರಯೋಜನ ಯೋಜನೆಗಳನ್ನು ಜಾರಿಗೆ ತರುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಆ ಮೂಲಕ ನಾಗರಿಕ ಸೇವೆಯು ಪ್ರಯತ್ನಗಳ ಪ್ರಧಾನ ಸ್ಥಾನವನ್ನು ಪಡೆದಿದೆ ಎಂದು ಎಂದು ಸಮೀಕ್ಷೆ ತಿಳಿಸಿದೆ.
ʻಮಿಷನ್ ಕರ್ಮಯೋಗಿʼ ಉಪಕ್ರಮವನ್ನು ಪ್ರಾರಂಭಿಸುವ ಮೂಲಕ ಆಡಳಿತ ಯಂತ್ರದ ಸಾಮರ್ಥ್ಯವನ್ನು ಹೆಚ್ಚಿಸುವ ಸವಾಲಿಗೆ ಸರ್ಕಾರ ಸ್ಪಂದಿಸಿದೆ. ಈ ಉಪಕ್ರಮವು ಸಮಸ್ಯೆಯತ್ತ ಹೆಚ್ಚು ನಿಗಾ ಇಡುವುದನ್ನು ಸಾಧ್ಯವಾಗಿಸುತ್ತದೆ ಮತ್ತು ಸಮಸ್ಯೆಯನ್ನು ಉಪ-ಘಟಕಗಳಾಗಿ ಮಾರ್ಪಡಿಸುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಈ ಕಾರ್ಯಕ್ರಮವು ಕೆಲಸದ ಸ್ಥಳದ ಪಾತ್ರಗಳು ಮತ್ತು ಕಾರ್ಮಿಕರ ಸಾಮರ್ಥ್ಯಗಳನ್ನು ಸಂಪರ್ಕಿಸುವ ಮೂಲಕ ಈ ಕಾರ್ಯಕ್ರಮವು ಸಾಮರ್ಥ್ಯ ವರ್ಧನೆ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಗಳ ನಡುವೆ ಹೆಚ್ಚು ಅಗತ್ಯವಾದ ಸೇತುವೆಯನ್ನು ನಿರ್ಮಿಸುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಸೇವಾಪೂರ್ವ ತರಬೇತಿ ಮತ್ತು ವೃತ್ತಿಪರತೆ ಸುಧಾರಣೆಗೆ ವಿಚಾರಗಳಲ್ಲಿ, ನಾಗರಿಕ ಸೇವಕರು ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲು ಅಗತ್ಯವಿರುವ ನಿರ್ದಿಷ್ಟ ಸಾಮರ್ಥ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಬಹುದು ಎಂದು ಸಮೀಕ್ಷೆ ಹೇಳುತ್ತದೆ. ʻಐಜಿಒಟಿ ಕರ್ಮಯೋಗಿʼ ವೇದಿಕೆಯು ತ್ವರಿತವಾಗಿ ಕೇಂದ್ರಸ್ಥಾನವಾಗಿ ರೂಪುಗೊಳ್ಳುತ್ತಿದೆ, ಇದು ನಾಗರಿಕ ಸೇವಕರಿಗೆ ಸೂಕ್ತವಾದ ಮತ್ತು ಅಗತ್ಯ ಆಧಾರಿತ ಸಾಮರ್ಥ್ಯ-ವರ್ಧನೆ ಮಾಡ್ಯೂಲ್‌ಗಳನ್ನು ಪ್ರವೇಶಿಸಲು, ಅವರ ಸಾಮರ್ಥ್ಯದ ಅವಶ್ಯಕತೆಗಳು ಮತ್ತು ಅಂತರಗಳನ್ನು ಪತ್ತೆಹಚ್ಚಲು ಹಾಗೂ ಇಲಾಖೆಗಳಾದ್ಯಂತ ಜ್ಞಾನ ಮತ್ತು ಕಲಿಕೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಪಾರದರ್ಶಕ ಪ್ರಕ್ರಿಯೆಯ ಮೂಲಕ ಕೇಂದ್ರ ಸಚಿವಾಲಯಗಳ ಹಿರಿಯ ಶ್ರೇಣಿ ಹುದ್ದೆಗಳಿಗೆ ʻಮಧ್ಯಂತರ ಪ್ರವೇಶʼಕ್ಕೆ ಅವಕಾಶ ಕಲ್ಪಿಸುವ ಮೂಲಕ ಸರ್ಕಾರವು ಈ ನಿಟ್ಟಿನಲ್ಲಿ ಗಮನಾರ್ಹ ಆರಂಭ ಮಾಡಿದೆ. ಇದನ್ನು ಗಣನೀಯವಾಗಿ ವಿಸ್ತರಿಸುವ ಅಗತ್ಯವಿದೆ ಎಂದು ಸಮೀಕ್ಷೆ ಶಿಫಾರಸು ಮಾಡಿದೆ. ಕೌಶಲ್ಯಗಳು, ಪ್ರವೃತ್ತಿ ಮತ್ತು ಸ್ವಭಾವಗಳ ಮರುಕೌಶಲ್ಯಕ್ಕಾಗಿ ಎಲ್ಲಾ ವಿಭಾಗಗಳಲ್ಲಿ ನಾಗರಿಕ ಸೇವಕರಿಗೆ ಪ್ರಾಥಮಿಕ ಮತ್ತು ವೃತ್ತಿಜೀವನದ ಮಧ್ಯಂತರ ತರಬೇತಿಯನ್ನು ಮರು ರೂಪಿಸಬೇಕು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಹಿರಿಯ ಹುದ್ದೆಗಳ ಬೇಡಿಕೆಗಳಿಗೆ ತಕ್ಕಂತೆ ಬೆಳೆಯಲು, ಉತ್ಪಾದಕವಾಗಿರಲು ಮತ್ತು ಉದ್ದೇಶಪೂರ್ವಕವಾಗಿರಲು ಅಧಿಕಾರಾವಧಿಯೂ ನಿರ್ಣಾಯಕವಾಗಿದೆ. ನೀತಿಯ ಫಲಿತಾಂಶಗಳು ಅಗಾಧವಾಗಿ ಮತ್ತು ವೇಗವಾಗಿ ಇರುವಂತೆ ಖಚಿತಪಡಿಸಿಕೊಳ್ಳಲು ಉತ್ತರದಾಯಿತ್ವ ಕಾರ್ಯವಿಧಾನಗಳು ಮತ್ತು ಅಭ್ಯಾಸಗಳು ಅಗತ್ಯವಾಗುತ್ತವೆ. ವರ್ಷದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಹಿರಿಯ ಮಟ್ಟದಲ್ಲಿ ವಾರ್ಷಿಕ ಸಭೆಗಳನ್ನು ನಡೆಸಿ, ಗುರಿಗಳು ಮತ್ತು ಮೌಲ್ಯಮಾಪನ ಬಗ್ಗೆ ಸಮಾಲೋಚನೆ ಮಾಡುವುದರಿಂದ ವೃತ್ತಿಪರತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಬಹುದು ಎಂದು ಸಮೀಕ್ಷೆ ಉಲ್ಲೇಖಿಸಿದೆ.
*****
(Release ID: 2036756)
Visitor Counter : 70