ಹಣಕಾಸು ಸಚಿವಾಲಯ
ಸಾಮಾಜಿಕ ಸೇವೆಗಳ ವೆಚ್ಚವನ್ನು 2017-18ರಲ್ಲಿ ಇದ್ದ ಜಿಡಿಪಿಯ 6.7 %ರಿಂದ 2023-24ರಲ್ಲಿ ಜಿಡಿಪಿಯ 7.8 %ಗೆ ಹೆಚ್ಚಿಸಲಾಗಿದೆ
2015-16 ಮತ್ತು 2019-21ರ ನಡುವೆ 13.5 ಕೋಟಿ ಭಾರತೀಯರು ಬಹು ಆಯಾಮದ ಬಡತನದಿಂದ ಪಾರಾಗಿದ್ದಾರೆ ಎಂದು ಅಂದಾಜಿಸಲಾಗಿದೆ
Posted On:
22 JUL 2024 2:50PM by PIB Bengaluru
ಇತ್ತೀಚಿನ ವರ್ಷಗಳಲ್ಲಿ ಭಾರತದ ಸಾಮಾಜಿಕ ಮತ್ತು ಸಾಂಸ್ಥಿಕ ಪ್ರಗತಿಯನ್ನು ಕಲ್ಯಾಣದ ಸಬಲೀಕರಣ ಕಾರ್ಯ ವಿಧಾನದ ಮೂಲಕ ಸಾಧಿಸಲಾಗಿದೆ. ಏಕೆಂದರೆ ಈ ಹೊಸ ಕಾರ್ಯವಿಧಾನವು ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಮತ್ತು ವೆಚ್ಚದ ಪರಿಣಾಮಕಾರಿತ್ವವನ್ನು ಪರಿವರ್ತಿಸುವತ್ತ ಗಮನ ಹರಿಸುತ್ತದೆ. ಈ ವಿಧಾನವು ಅಟಲ್ ಪಿಂಚಣಿ ಯೋಜನೆ (ಎಪಿವೈ)ಯಂತಹ ಕಾರ್ಯಕ್ರಮಗಳ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಕೊನೆಯ ದೂರದವರೆಗೆ ಸೇವಾ ವಿತರಣೆ ಮತ್ತು ಕೈಗೆಟುಕುವ ಬೆಲೆಗೆ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಸುಧಾರಣೆಗಳನ್ನು ತರುವ ಗುರಿ ಹೊಂದಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ ಆರ್ಥಿಕ ಸಮೀಕ್ಷೆ 2023-24 ಇದನ್ನು ಒತ್ತಿ ಹೇಳಿದೆ.
ತಗ್ಗಿದ ಬಹು ಆಯಾಮದ ಬಡತನ
ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ ಪ್ರಮಾಣ 2017-18ರಲ್ಲಿ ಇದ್ದ ಜಿಡಿಪಿಯ 6.7%ನಿಂದ 2023-24ರಲ್ಲಿ ಜಿಡಿಪಿಯ 7.8%ಗೆ ಹೆಚ್ಚಾಗಿದೆ. ಕಾರ್ಯಕ್ರಮಗಳ ಉತ್ತಮ ಅನುಷ್ಠಾನದ ಜತೆಗೆ, ರಾಷ್ಟ್ರದ ಆರ್ಥಿಕತೆಯ ಚೇತರಿಕೆಯು ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ(ಎಂಪಿಐ) 2015-16ರಲ್ಲಿ ಇದ್ದ 0.117 ರಿಂದ 2019-21ರಲ್ಲಿ 0.066ಕ್ಕೆ ಅಂದರೆ ಸುಮಾರು ಅರ್ಧದಷ್ಟು ಇಳಿಕೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ, 2015-16 ಮತ್ತು 2019-21ರ ನಡುವೆ 13.5 ಕೋಟಿ ಭಾರತೀಯರು ಬಹುಆಯಾಮದ ಬಡತನದಿಂದ ಪಾರಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂಬುದನ್ನು ಆರ್ಥಿಕ ಸಮೀಕ್ಷೆ 2023-24 ಗಮನಿಸಿದೆ.
ಈ ಪ್ರವೃತ್ತಿಯು ಗ್ರಾಮೀಣ ಭಾರತದಲ್ಲಿ ಗೋಚರಿಸಿದೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಒಡಿಶಾ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಅತ್ಯಂತ ಮಹತ್ವದ ಸುಧಾರಣೆಗಳು ಕಂಡುಬಂದಿವೆ. 2015-16 ಮತ್ತು 2019-21ರ ನಡುವೆ 3.43 ಕೋಟಿ ಜನರು ಬಹುಆಯಾಮದ ಬಡತನದಿಂದ ಪಾರಾಗುವುದರೊಂದಿಗೆ ಉತ್ತರ ಪ್ರದೇಶದಲ್ಲಿ ಬಡವರ ಸಂಖ್ಯೆ ಅತ್ಯಂತ ಗಮನಾರ್ಹ ಪ್ರಮಾಣದಲ್ಲಿ ಕುಸಿದಿದೆ.
ಕಡಿಮೆಯಾದ ಅಸಮಾನತೆ, ಗ್ರಾಮೀಣ-ನಗರ ಕಂದಕ ಕುಸಿತ
ಸಾಮಾಜಿಕ ವಲಯದಲ್ಲಿನ ವಿವಿಧ ಉಪಕ್ರಮಗಳ ಫಲಿತಾಂಶಗಳು ಬದುಕಿನ ಅಸಮಾನತೆಯನ್ನು ಕಡಿಮೆಗೊಳಿಸಿವೆ ಎಂದು ಆರ್ಥಿಕ ಸಮೀಕ್ಷೆ ಗಮನ ಸೆಳೆದಿದೆ. ಕಳೆದ ದಶಕದಲ್ಲಿ ಗ್ರಾಮೀಣ ವಲಯದಲ್ಲಿ ಗಿನಿ ಗುಣಾಂಕ ಅಥವಾ ಸೂಚ್ಯಂಕವು 0.283ರಿಂದ 0.266ಕ್ಕೆ ಮತ್ತು ನಗರ ವಲಯದಲ್ಲಿ 0.363ರಿಂದ 0.314ಕ್ಕೆ ಇಳಿದಿದೆ.
ಅದೇ ರೀತಿ, ಗ್ರಾಮೀಣ ಮತ್ತು ನಗರ ಭಾಗದ ಮಾಸಿಕ ತಲಾದಾಯ ಬಳಕೆಯ ವೆಚ್ಚದ (ಎಂಪಿಸಿಇ) ನಡುವಿನ ವ್ಯತ್ಯಾಸವು 2011-12ರಲ್ಲಿ ಇದ್ದ 83.9%ನಿಂದ 2022-23ರಲ್ಲಿ 71.2%ಗೆ ಇಳಿದಿದ್ದರಿಂದ ಗ್ರಾಮೀಣ-ನಗರ ನಡುವಿನ ಕಂದಕ ಗಣನೀಯವಾಗಿ ಕಡಿಮೆಯಾಗಿದೆ.
*****
(Release ID: 2036483)
Visitor Counter : 44
Read this release in:
Assamese
,
Tamil
,
English
,
Urdu
,
Hindi
,
Hindi_MP
,
Marathi
,
Punjabi
,
Gujarati
,
Odia
,
Malayalam