ಹಣಕಾಸು ಸಚಿವಾಲಯ
azadi ka amrit mahotsav

ಉತ್ಪಾದನೆ ಹೆಚ್ಚಳಕ್ಕೆ ಮತ್ತು ಹವಾಮಾನ ಬದಲಾವಣೆ ಸ್ಥಿತಿಸ್ಥಾಪಕ ತಳಿಗಳನ್ನು ಅಭಿವೃದ್ಧಿಪಡಿಸಲು ಕೃಷಿ ಸಂಶೋಧನಾ ವ್ಯವಸ್ಥೆಗೆ ಗಮನ


ಹೆಚ್ಚು ಇಳುವರಿಯ 109 ತಳಿಗಳ ಮತ್ತು 32 ಹವಾಮಾನ ಸ್ಥಿತಿಸ್ಥಾಪಕ ಬೆಳೆ ತಳಿಗಳ ಬಿಡುಗಡೆ ಘೋಷಣೆ

ಮುಂದಿನ ಎರಡು ವರ್ಷಗಳಲ್ಲಿ ನೈಸರ್ಗಿಕ ಕೃಷಿಯತ್ತ ಒಂದು ಕೋಟಿ ರೈತರು

ಗ್ರಾಮೀಣ ಆರ್ಥಿಕತೆ ಕ್ಷಿಪ್ರ ಪ್ರಗತಿ ಮತ್ತು ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಯು ಗುರಿಯ ನೀತಿ

Posted On: 23 JUL 2024 12:58PM by PIB Bengaluru

ಕೃಷಿ ಸಂಶೋಧನೆಗೆ ದೃಢವಾದ ಉತ್ತೇಜನ, ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ಮತ್ತು ರಾಷ್ಟ್ರೀಯ ಸಹಕಾರ ನೀತಿ ಸೇರಿದಂತೆ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ಮತ್ತು ಸ್ಥಿತಿಸ್ಥಾಪಕತ್ವದ ಕ್ರಮಗಳ ಭಾಗವಾಗಿ ಅನೇಕ ಕ್ರಮಗಳನ್ನು ಕೇಂದ್ರ ಬಜೆಟ್ 2024-25 ಘೋಷಿಸಿದೆ.

ಕೃಷಿ ಸಂಶೋಧನಾ ಪರಿವರ್ತನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಮತ್ತು ಹವಾಮಾನ ಸ್ಥಿತಿಸ್ಥಾಪಕ ತಳಿಗಳ ಅಭಿವೃದ್ಧಿಗೆ ಗಮನಹರಿಸಲು ಸರ್ಕಾರವು ಕೃಷಿ ಸಂಶೋಧನಾ ವ್ಯವಸ್ಥೆಯ ಬಗ್ಗೆ ಸಮಗ್ರ ಪರಾಮರ್ಶೆಯನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅವರು ಕೇಂದ್ರ ಬಜೆಟ್ 2024-2025 ಅನ್ನು ಸಂಸತ್ತಿನಲ್ಲಿಂದು ಮಂಡಿಸುತ್ತಾ, ಖಾಸಗಿ ವಲಯ ಸೇರಿದಂತೆ ಕ್ಲಿಷ್ಟಕರ ಅಗತ್ಯಗಳಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಹೇಳಿದರು. ಸರ್ಕಾರ ಮತ್ತು ಬಾಹ್ಯ ತಜ್ಞರು ಈ ಸಂಶೋಧನೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ರೈತರ ಕೃಷಿಗೆ ಅನುಕೂಲವಾಗಲು ಹೆಚ್ಚಿನ ಇಳುವರಿಯ ಹೊಸ 109 ತಳಿಗಳು ಮತ್ತು ಹವಾಮಾನ ಸ್ಥಿತಿಸ್ಥಾಪಕ 32 ತೋಟಗಾರಿಕಾ ಬೆಳೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಬಜೆಟ್ ಘೋಷಿಸಿದೆ.

ನೈಸರ್ಗಿಕ ಕೃಷಿ

ದೇಶದ ಒಂದು ಕೋಟಿ ರೈತರು ಮುಂದಿನ ಎರಡು ವರ್ಷಗಳಲ್ಲಿ ಪ್ರಮಾಣೀಕರಣ ಮತ್ತು ಬ್ರಾಂಡಿಂಗ್ ಬೆಂಬಲದೊಂದಿಗೆ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ವೈಜ್ಞಾನಿಕ ಸಂಸ್ಥೆಗಳ ಮೂಲಕ ಮತ್ತು ಆಸಕ್ತ ಗ್ರಾಮ ಪಂಚಾಯಿತಿಗಳ ಮೂಲಕ ಇವುಗಳ ಅನುಷ್ಠಾನ ಮಾಡಲಾಗುವುದು ಮತ್ತು ಈ ಉದ್ದೇಶಕ್ಕಾಗಿ 10,000 ಅಗತ್ಯ ಆಧಾರಿತ ಜೈವಿಕ ಸಂಪನ್ಮೂಲ ಕೇಂದ್ರಗಳನ್ನು ತೆರೆಯಲಾಗುವುದು.  

ರಾಷ್ಟ್ರೀಯ ಸಹಕಾರ ನೀತಿ

ಸಹಕಾರ ವಲಯದ ವ್ಯವಸ್ಥಿತ, ಕ್ರಮಬದ್ಧ ಮತ್ತು ಸರ್ವತೋಮುಖ ಅಭಿವೃದ್ಧಿಗೆ ರಾಷ್ಟ್ರೀಯ ಸಹಕಾರ ನೀತಿಯನ್ನು ಜಾರಿಗೆ ತರಲಿದೆ ಎಂದು ಕೇಂದ್ರ ಸಚಿವರು ಘೋಷಿಸಿದ್ದಾರೆ. ಗ್ರಾಮೀಣ ಆರ್ಥಿಕತೆಯ ಕ್ಷಿಪ್ರ ಪ್ರಗತಿ ಮತ್ತು ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಯು ನೀತಿಯ ಗುರಿಯಾಗಿರಲಿದೆ ಎಂದು ಸಚಿವರು ತಿಳಿಸಿದರು.

 

*****
 




(Release ID: 2036288) Visitor Counter : 54