ಹಣಕಾಸು ಸಚಿವಾಲಯ
ಬಂಡವಾಳ ಲಾಭದ ತೆರಿಗೆ ಸರಳೀಕರಣ ಮತ್ತು ಏಕರೂಪಗೊಳಿಸುವುದು
ಅಲ್ಪಾವಧಿ ಆದಾಯಕ್ಕೆ ಶೇ.20ರಷ್ಟು ತೆರಿಗೆ ದರ ಮತ್ತು ದೀರ್ಘಾವಧಿಯ ಆದಾಯಕ್ಕೆ ಶೇ.12.5ಕ್ಕೆ ತೆರಿಗೆ
ಹಣಕಾಸಿನ ಸ್ವತ್ತುಗಳ ಮೇಲಿನ ದೀರ್ಘಾವಧಿಯ ಬಂಡವಾಳ ಲಾಭದ ವಿನಾಯಿತಿಯ ಮಿತಿ ವರ್ಷಕ್ಕೆ 1 ಲಕ್ಷ ರೂ.ಗಳಿಂದ 1.25 ಲಕ್ಷ ರೂ.ಗೆ ಹೆಚ್ಚಳ
Posted On:
23 JUL 2024 1:10PM by PIB Bengaluru
ಕ್ಯಾಪಿಟಲ್ ಗೇನ್ಸ್ ತೆರಿಗೆ ಸರಳೀಕರಣ ಮತ್ತು ಏಕರೂಪಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡುವ ಕೇಂದ್ರ ಬಜೆಟ್ 2024-25 ರಲ್ಲಿ ಕೇಂದ್ರದ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದರು.
ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದಂತೆ, ಕೆಲವು ಹಣಕಾಸಿನ ಸ್ವತ್ತುಗಳ ಮೇಲಿನ ಅಲ್ಪಾವಧಿಯ ಲಾಭಗಳು ಇನ್ನು ಮುಂದೆ ಶೇ. 20 ರಷ್ಟು ತೆರಿಗೆ ದರ ಅನ್ವಯವಾಗುತ್ತವೆ, ಆದರೆ ಎಲ್ಲಾ ಇತರ ಹಣಕಾಸು ಆಸ್ತಿಗಳು ಮತ್ತು ಎಲ್ಲಾ ಹಣಕಾಸೇತರ ಆಸ್ತಿಗಳು ಅನ್ವಯವಾಗುವ ತೆರಿಗೆ ದರ ಅನ್ವಯ ಮುಂದುವರಿಯುತ್ತದೆ.
ಎಲ್ಲಾ ಹಣಕಾಸು ಮತ್ತು ಹಣಕಾಸೇತರ ಆಸ್ತಿಗಳಿಂದ ದೀರ್ಘಾವಧಿಯವರಿಗೆ ಬರುವ ಆಸ್ತಿಗಳಿಗೆ ಶೇ.12.5 ರಷ್ಟು ತೆರಿಗೆ ಅನ್ವಯವಾಗುತ್ತದೆ ಎಂದು ಹಣಕಾಸು ಸಚಿವರು ಪ್ರಸ್ತಾಪಿಸಿದರು. ಮಧ್ಯಮ ಹಾಗೂ ಕೆಳ ಮಧ್ಯಮ ಆದಾಯ ವರ್ಗದವರ ಅನುಕೂಲಕ್ಕಾಗಿ ಅವರು, ಕೆಲವು ಹಣಕಾಸಿನ ಸ್ವತ್ತುಗಳ ಮೇಲಿನ ದೀರ್ಘಾವಧಿಯ ಬಂಡವಾಳ ಲಾಭದ ವಿನಾಯಿತಿಯ ಮಿತಿ ವರ್ಷಕ್ಕೆ 1 ಲಕ್ಷ ರೂ.ಗಳಿಂದ 1.25 ಲಕ್ಷ ರೂ.ಗೆ ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ.
ಒಂದು ವರ್ಷಕ್ಕೂ ಅಧಿಕ ಕಾಲ ಹೊಂದಿರುವ ಪಟ್ಟಿಮಾಡಿದ ಹಣಕಾಸು ಸ್ವತ್ತುಗಳನ್ನು ದೀರ್ಘಾವಧಿ ಎಂದು ವರ್ಗೀಕರಿಸಲಾಗುವುದು, ಆದರೆ ಪಟ್ಟಿಮಾಡದ ಹಣಕಾಸು ಸ್ವತ್ತುಗಳು ಮತ್ತು ಎಲ್ಲಾ ಹಣಕಾಸೇತರ ಆಸ್ತಿಗಳನ್ನು ದೀರ್ಘಾವಧಿ ಎಂದು ವರ್ಗೀಕರಿಸಲು ಕನಿಷ್ಠ ಎರಡು ವರ್ಷಗಳ ಕಾಲ ಹಿಡಿದಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಪಟ್ಟಿ ಮಾಡದ ಬಾಂಡ್‌ಗಳು ಮತ್ತು ಡಿಬೆಂಚರ್‌ಗಳು, ಸಾಲ ಮ್ಯೂಚುವಲ್ ಫಂಡ್‌ಗಳು ಮತ್ತು ಮಾರುಕಟ್ಟೆ ಸಂಬಂಧಿತ ಡಿಬೆಂಚರ್‌ಗಳು, ಹಿಡುವಳಿ ಅವಧಿಯನ್ನು ಲೆಕ್ಕಿಸದೆ, ಅನ್ವಯವಾಗುವ ದರಗಳಲ್ಲಿ ಬಂಡವಾಳ ಲಾಭದ ಮೇಲೆ ತೆರಿಗೆ ಅನ್ವಯವಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.
*****
(Release ID: 2035848)
Visitor Counter : 75
Read this release in:
English
,
Urdu
,
Hindi
,
Hindi_MP
,
Marathi
,
Bengali
,
Punjabi
,
Gujarati
,
Tamil
,
Telugu
,
Malayalam