ಹಣಕಾಸು ಸಚಿವಾಲಯ
ಕಸ್ಟಮ್ಸ್ ಸುಂಕಗಳಲ್ಲಿನ ಸುಧಾರಣೆಗಳು ದೇಶೀಯ ಉತ್ಪಾದನೆ ಬೆಂಬಲಿಸುತ್ತವೆ ಮತ್ತು ರಫ್ತು ಸ್ಪರ್ಧಾತ್ಮಕತೆಗೆ ಉತ್ತೇಜನ; ಹಣಕಾಸು ಸಚಿವರು
25 ನಿರ್ಣಾಯಕ ಖನಿಜಗಳು, ಮತ್ತೆ ಮೂರು ಕ್ಯಾನ್ಸರ್ ಔಷಧಗಳು ಕಸ್ಟಮ್ಸ್ ಸುಂಕದಿಂದ ವಿನಾಯಿತಿ
ಸಮುದ್ರಾಹಾರ ಮತ್ತು ಚರ್ಮದ ರಫ್ತಿನ ಸ್ಪರ್ಧಾತ್ಮಕತೆ ಹೆಚ್ಚಳಕ್ಕೆ ಕಸ್ಟಮ್ಸ್ ಸುಂಕ ಪರಿಷ್ಕರಣೆ
Posted On:
23 JUL 2024 1:12PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಸಂಸತ್ತಿನಲ್ಲಿ ಇಂದು ಮಂಡಿಸಿದ ತಮ್ಮ ಬಜೆಟ್ ಭಾಷಣದಲ್ಲಿ, ಕಸ್ಟಮ್ಸ್ ಸುಂಕದ ಬಜೆಟ್ ಪ್ರಸ್ತಾವನೆಗಳು ದೇಶೀಯ ಉತ್ಪಾದನೆ ಬೆಂಬಲಿಸಲು, ಸ್ಥಳೀಯ ಮೌಲ್ಯವರ್ಧನೆ ಮಾಡಲು, ರಫ್ತು ಸ್ಪರ್ಧಾತ್ಮಕತೆ ಉತ್ತೇಜಿಸಲು ಮತ್ತು ತೆರಿಗೆಯನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿದ್ದು, ಸಾಮಾನ್ಯ ಸಾರ್ವಜನಿಕರು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ಹೇಳಿದರು. ಜೀವ ಉಳಿಸುವ ಔಷಧಿಗಳಿಂದ ಅಪರೂಪದ ಭೂ ಖನಿಜಗಳವರೆಗೆ ಹಲವು ಸರಕುಗಳಿಗೆ ಹೊಸ ಕಸ್ಟಮ್ಸ್ ಡ್ಯೂಟಿ ದರಗಳನ್ನು ಪ್ರಸ್ತಾಪಿಸಲಾಗಿದೆ.
ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಪರಿಹಾರವನ್ನು ನೀಡಲಾಗಿದ್ದು, ಇನ್ನೂ ಮೂರು ಔಷಧಗಳು. TrastuzumabDeruxtecan, Osimertinib ಮತ್ತು Durvalumab ಗಳನ್ನು ಸಂಪೂರ್ಣವಾಗಿ ಕಸ್ಟಮ್ಸ್ ಸುಂಕಗಳಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ, ವೈದ್ಯಕೀಯ ಕ್ಷ-ಕಿರಣ ಯಂತ್ರಗಳಲ್ಲಿ ಬಳಸಲು ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನೆಲ್ ಡಿಟೆಕ್ಟರ್‌ಗಳ ಮೇಲಿನ ಬಿ.ಸಿ.ಡಿ.ಯನ್ನು ಸಹ ತಗ್ಗಿಸಲಾಗಿದೆ, ಇದರಿಂದಾಗಿ ಅವುಗಳನ್ನು ದೇಶೀಯ ಸಾಮರ್ಥ್ಯದ ಸೇರ್ಪಡೆಯೊಂದಿಗೆ ಸಿಂಕ್ರೊನೈಸ್ (ಸಂಯೋಜನೆ) ಮಾಡಲಾಗುತ್ತದೆ.
ಕಳೆದ ಆರು ವರ್ಷಗಳಲ್ಲಿ ಮೊಬೈಲ್ ಫೋನ್‌ಗಳ ದೇಶೀಯ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ ಮತ್ತು ಮೊಬೈಲ್ ಫೋನ್‌ಗಳ ರಫ್ತಿನಲ್ಲಿ ಸುಮಾರು ನೂರು ಪಟ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. "ಗ್ರಾಹಕರ ಹಿತಾಸಕ್ತಿಯಿಂದ, ನಾನು ಈಗ ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳಲ್ಲಿನ ಬಿ.ಸಿ.ಡಿ.ಯನ್ನು ಶೇಕಡ 15ಕ್ಕೆ ತಗ್ಗಿಸಲು ಪ್ರಸ್ತಾಪಿಸುತ್ತೇನೆ" ಎಂದು ಸಚಿವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಮಂಡನೆ ಮಾಡುವಾಗ ಹೇಳಿದರು.
ಅಲ್ಲದೆ, ಹಣಕಾಸು ಸಚಿವರು 25 ನಿರ್ಣಾಯಕ ಖನಿಜಗಳ ಮೇಲಿನ ಕಸ್ಟಮ್ಸ್ ಸುಂಕಗಳ ಸಂಪೂರ್ಣ ವಿನಾಯಿತಿಯನ್ನು ಘೋಷಿಸಿದರು ಮತ್ತು ಅವುಗಳಲ್ಲಿ ಎರಡರ ಮೇಲಿನ ಬಿ.ಸಿ.ಡಿ.ಯನ್ನು ತಗ್ಗಿಸಿದರು. ಈ ಅಪರೂಪದ ಭೂಮಿಯ ಖನಿಜಗಳು ನಿರ್ಣಾಯಕವಾಗಿರುವ ಬಾಹ್ಯಾಕಾಶ, ರಕ್ಷಣೆ, ದೂರಸಂಪರ್ಕ, ಹೈಟೆಕ್ ಎಲೆಕ್ಟ್ರಾನಿಕ್ಸ್, ಪರಮಾಣು ಶಕ್ತಿ ಮತ್ತು ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳಿಗೆ ಇದು ಪ್ರಯೋಜನವನ್ನು ನೀಡುತ್ತದೆ. ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ದೇಶದಲ್ಲಿ ಸೌರ ಕೋಶ(ಸೆಲ್) ಗಳು ಮತ್ತು ಪ್ಯಾನಲ್‌ಗಳ ತಯಾರಿಕೆಯಲ್ಲಿ ಬಳಸಲು ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯನ್ನು ವಿಸ್ತರಿಸುವುದಾಗಿ ಸಚಿವರು ಘೋಷಿಸಿದರು.” ಅಲ್ಲದೆ, ಸೋಲಾರ್ ಗ್ಲಾಸ್ ಮತ್ತು ಟಿನ್ಡ್ ತಾಮ್ರದ ಇಂಟರ್‌ಕನೆಕ್ಟ್‌ನ ಸಾಕಷ್ಟು ದೇಶೀಯ ಉತ್ಪಾದನಾ ಸಾಮರ್ಥ್ಯದ ದೃಷ್ಟಿಯಿಂದ, ಅವರಿಗೆ ಒದಗಿಸಲಾದ ಕಸ್ಟಮ್ಸ್ ಸುಂಕಗಳ ವಿನಾಯ್ತಿಯನ್ನು ವಿಸ್ತರಿಸದಿರಲು ನಾನು ಪ್ರಸ್ತಾಪಿಸುತ್ತೇನೆ" ಎಂದು ಸಚಿವರು ಹೇಳಿದರು.
ದೇಶದಿಂದ ಸಮುದ್ರ ಆಹಾರ ರಫ್ತಿನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಕೆಲವು ಸಂತತಿ, ಪಾಲಿಚೈಟ್ ಹುಳುಗಳು, ಸೀಗಡಿ ಮತ್ತು ಮೀನಿನ ಆಹಾರದ ಮೇಲಿನ ಬಿ.ಸಿ.ಡಿ.ಯನ್ನು ಶೇಕಡ 5ಕ್ಕೆ ಇಳಿಕೆ ಮಾಡುವುದಾಗಿ ಸಚಿವರು ಪ್ರಸ್ತಾಪಿಸಿದರು. ಅದರ ಹೊರತಾಗಿ, ಸೀಗಡಿ ಮತ್ತು ಮೀನಿನ ಆಹಾರ ತಯಾರಿಕೆಗೆ ವಿವಿಧ ವಸ್ತುಗಳನ್ನು ಸಮುದ್ರ ಅಹಾರ ರಫ್ತುಗಳನ್ನು ಮತ್ತಷ್ಟು ಹೆಚ್ಚಿಸಲು ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಚರ್ಮ ಮತ್ತು ಜವಳಿ ವಲಯಗಳಲ್ಲಿ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ವಿವಿಧ ಚರ್ಮದ ಕಚ್ಚಾ ವಸ್ತುಗಳಿಗೆ ಕಸ್ಟಮ್ಸ್ ಸುಂಕದಲ್ಲಿ ಇದೇ ರೀತಿಯ ಕಡಿತ ಮತ್ತು ವಿನಾಯಿತಿಯನ್ನು ಘೋಷಿಸಲಾಗಿದೆ. ಅಲ್ಲದೆ, ಕಚ್ಚಾ ಚರ್ಮ, ಚರ್ಮ ಮತ್ತು ಚರ್ಮದ ಮೇಲಿನ ರಫ್ತು ಸುಂಕದ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ಏಕರೂಪಗೊಳಿಸಲು ಪ್ರಸ್ತಾಪಿಸಲಾಗಿದೆ.
ದೇಶದಲ್ಲಿ ಚಿನ್ನ ಮತ್ತು ಅಮೂಲ್ಯ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವನ್ನು ಹೆಚ್ಚಿಸಲು ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.15 ರಿಂದ ಶೇ.6 ಕ್ಕೆ ಮತ್ತು ಪ್ಲಾಟಿನಂ ಮೇಲಿನ ಸುಂಕವನ್ನು ಶೇ.15.4 ರಿಂದ ಶೇ.6.4ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಉಕ್ಕು ಮತ್ತು ತಾಮ್ರದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಫೆರೋ ನಿಕಲ್ ಮತ್ತು ಬ್ಲಿಸ್ಟರ್ ತಾಮ್ರದ ಮೇಲಿನ ಬಿಸಿಡಿಯನ್ನು ತೆಗೆದುಹಾಕಲಾಗಿದೆ.
ಕಸ್ಟಮ್ಸ್ ಡ್ಯೂಟಿ ದರ ರಚನೆಯ ಸಮಗ್ರ ಪರಿಶೀಲನೆಯನ್ನು ಮುಂದಿನ ಆರು ತಿಂಗಳುಗಳಲ್ಲಿ ಏಕರೂಪಗೊಳಿಸಲು ಮತ್ತು ಸರಳಗೊಳಿಸಲು ವ್ಯಾಪಾರವನ್ನು ಸುಲಭಗೊಳಿಸಲು, ಸುಂಕದ ವಿಲೋಮವನ್ನು ತೆಗೆದುಹಾಕಲು ಮತ್ತು ವ್ಯಾಜ್ಯಗಳನ್ನು ತಗ್ಗಿಸಲು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
*****
(Release ID: 2035759)
Visitor Counter : 58