ಹಣಕಾಸು ಸಚಿವಾಲಯ

2023-24ನೇ ಆರ್ಥಿಕ ವರ್ಷದಲ್ಲಿ ಭಾರತದ ನೈಜ ಬೆಳವಣಿಗೆಯು ಶೇಕಡಾ 8.2 ಮತ್ತು ನಾಮಮಾತ್ರದ ಬೆಳವಣಿಗೆಯು ಶೇಕಡಾ 9.6 ಆಗಿದೆ


ಭಾರತೀಯ ರಿಸರ್ವ್ ಬ್ಯಾಂಕ್ 2024-25ನೇ ಸಾಲಿನಲ್ಲಿ ಶೇಕಡಾ 7.2 ರಷ್ಟು ಬೆಳವಣಿಗೆಯನ್ನು ಅಂದಾಜಿಸಿದೆ

ಸರಾಸರಿ ಚಿಲ್ಲರೆ ಹಣದುಬ್ಬರವು 2022-23 ರ ಆರ್ಥಿಕ ವರ್ಷದಲ್ಲಿ ಶೇಕಡಾ 6.7 ಕ್ಕೆ ಹೋಲಿಸಿದರೆ 2023-24 ರಲ್ಲಿ ಶೇಕಡಾ 5.4 ಕ್ಕೆ ಕಡಿಮೆಯಾಗಿದೆ

2024-25ರ ಬಜೆಟ್ ಅಂದಾಜಿನ ಪ್ರಕಾರ ಜಿಡಿಪಿಯ ಶೇಕಡಾ 4.9 ರಷ್ಟು ಹಣಕಾಸಿನ ಕೊರತೆಯನ್ನು ಅಂದಾಜಿಸಲಾಗಿದೆ

"ಮುಂದಿನ ವರ್ಷ ಶೇಕಡಾ 4.5 ಕ್ಕಿಂತ ಕಡಿಮೆ ಕೊರತೆಯನ್ನು ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ

2024-25ರ ಅವಧಿಯಲ್ಲಿ ಒಟ್ಟು ಮಾರುಕಟ್ಟೆ ಸಾಲವನ್ನು 14.01 ಲಕ್ಷ ಕೋಟಿ ರೂ. ಮತ್ತು ನಿವ್ವಳ ಮಾರುಕಟ್ಟೆ ಸಾಲ 11.63 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ

2017-18ನೇ ಸಾಲಿನಲ್ಲಿ ಅದರ ಗರಿಷ್ಠ ಶೇಕಡಾ 11.2 ರಿಂದ ಮಾರ್ಚ್ 2024 ರ ಅಂತ್ಯದ ವೇಳೆಗೆ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ ಗಳ ಒಟ್ಟು ಅನುತ್ಪಾದಕ ಆಸ್ತಿಗಳ ಅನುಪಾತವು ಶೇಕಡಾ 2.8 ಕ್ಕೆ ಕಡಿಮೆಯಾಗಿದೆ

ಒಟ್ಟು ತೆರಿಗೆ ಆದಾಯವು (ಜಿಟಿಆರ್) 2023-24 ರ ಪರಿಷ್ಕೃತ ಅಂದಾಜು (ಆರ್‌ ಇ) ಮೇಲೆ ಶೇಕಡಾ 11.7 ರಷ್ಟು ಮತ್ತು 2023-24 ರಲ್ಲಿ ಶೇ.10.8 ಅಂದಾಜು 38.40 ಲಕ್ಷ ಕೋಟಿ ರೂ. ಆಗಿರುತ್ತದೆ

ಪ್ರಮುಖ ಸಬ್ಸಿಡಿಗಳು 2023-24 ರ ಪರಿಷ್ಕೃತ ಅಂದಾಜಿನ ಜಿಡಿಪಿಯ ಶೇ.1.4 ನಿಂದ 2024-25 ರ ಹೊತ್ತಿಗೆ ಜಿಡಿಪಿಯ ಶೇ.1.2 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ

ಜಿ ಎಸ್‌ ಟಿ ಸ್ವೀಕೃತಿಗಳು 2023-24 ನೇ ಸಾಲಿನ ಆರ್‌ ಇ ಮತ್ತು ಪಿಇ ಗಳ ಮೇಲೆ 2024-25 ರಲ್ಲಿ ಶೇ. 11.0 ಬೆಳವಣಿಗೆಯೊಂದಿಗೆ 10.62 ಲಕ್ಷ ಕೋಟಿ ರೂ. ಇರಲಿದೆ

Posted On: 23 JUL 2024 12:42PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2024-25 ನೇ ಸಾಳಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು.

ಸ್ಥೂಲ-ಆರ್ಥಿಕ ಚೌಕಟ್ಟಿನ ವರದಿ ಮತ್ತು ಮಧ್ಯಮ ಅವಧಿಯ ಹಣಕಾಸಿನ ನೀತಿ ಮತ್ತು ಹಣಕಾಸಿನ ನೀತಿಯ ಕಾರ್ಯತಂತ್ರದ ವರದಿಯು ಭಾರತದ ಆರ್ಥಿಕತೆಯ ಪ್ರಮುಖ ಹಣಕಾಸಿನ ಸೂಚಕಗಳ ಪಕ್ಷಿನೋಟವನ್ನು ನೀಡುತ್ತದೆ, ಇದು ಅನಿಶ್ಚಿತ ಜಾಗತಿಕ ಆರ್ಥಿಕತೆಗೆ ಹೋಲಿಸಿದರೆ ನಿಸ್ಸಂದಿಗ್ಧವಾಗಿ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತದೆ. 2025-26 ನೇ ಆರ್ಥಿಕ ವರ್ಷದ ವೇಳೆಗೆ ಜಿಡಿಪಿಯ ಶೇ.4.5 ಕ್ಕಿಂತ ಕಡಿಮೆಯಿರುವ ವಿತ್ತೀಯ ಕೊರತೆಯ ಮಟ್ಟವನ್ನು ಸಾಧಿಸಲು ಸರ್ಕಾರವು ವಿತ್ತೀಯ ಬಲವರ್ಧನೆಯ ವಿಶಾಲ ಮಾರ್ಗವನ್ನು ಅನುಸರಿಸುತ್ತದೆ ಮತ್ತು ಇದರ ಪರಿಣಾಮವಾಗಿ ಸಾಲ ಮತ್ತು ಜಿಡಿಪಿ ಅನುಪಾತದ ಕ್ರೋಢೀಕರಣದೊಂದಿಗೆ ಅದರ ಪ್ರಯತ್ನಗಳನ್ನು ಮುಂದುವರೆಸುವ ಮೂಲಕ ವಿಶಾಲ ಆಧಾರಿತ ಒಳಗೊಳ್ಳುವಿಕೆಯ ಆರ್ಥಿಕ ಬೆಳವಣಿಗೆ ಮತ್ತು ಜನರ ಕಲ್ಯಾಣವನ್ನು ಮುಂದುವರಿಸುತ್ತದೆ.

2023-24ನೇ ಆರ್ಥಿಕ ವರ್ಷದಲ್ಲಿ ಭಾರತದ ನೈಜ ಬೆಳವಣಿಗೆಯು 8.2 ಪ್ರತಿಶತ ಮತ್ತು ನಾಮಮಾತ್ರದ ಬೆಳವಣಿಗೆಯು ಶೇ.9.6 ಆಗಿದೆ. 2023-24ರಲ್ಲಿ ಖಾಸಗಿ ಬಳಕೆಯ ವೆಚ್ಚವು 4.0 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ಸ್ಥಿತಿಸ್ಥಾಪಕತ್ವದ ನಗರ ಬೇಡಿಕೆ ಮತ್ತು ಗ್ರಾಮೀಣ ಬೇಡಿಕೆಯ ಚೇತರಿಕೆಯಿಂದ ಸಾಧ್ಯವಾಗಿದೆ.

2024-25 ನೇ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 7.2 ಶೇಕಡಾ ಬೆಳವಣಿಗೆಯನ್ನು ಅಂದಾಜಿಸಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ನೈಋತ್ಯ ಮುಂಗಾರು ಮುನ್ಸೂಚನೆಯೊಂದಿಗೆ ಕೃಷಿ ವಲಯದಲ್ಲಿ ಭರವಸೆಯು ಮೂಡಿದೆ. ಬಲವಾದ ಕಾರ್ಪೊರೇಟ್ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ ಗಳು ಮತ್ತು ಬಂಡವಾಳ ವೆಚ್ಚದ ಮೇಲೆ ಸರ್ಕಾರದ ನಿರಂತರ ಗಮನವು ಬೆಳವಣಿಗೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ, ಹೆಚ್ಚಿನ ಸಾಮರ್ಥ್ಯದ ಬಳಕೆ ಮತ್ತು ವ್ಯಾಪಾರದ ಆಶಾವಾದವು ಹೂಡಿಕೆ ಚಟುವಟಿಕೆಗೆ ಅನುಕೂಲಕರವಾಗಿದೆ.

ಸರಾಸರಿ ಚಿಲ್ಲರೆ ಹಣದುಬ್ಬರವು 2022-23ನೇ ಹಣಕಾಸು ವರ್ಷದಲ್ಲಿನ 6.7 ಶೇಕಡಾಕ್ಕೆ ಹೋಲಿಸಿದರೆ 2023-24 ರಲ್ಲಿ 5.4 ಶೇಕಡಾಕ್ಕೆ ಕಡಿಮೆಯಾಗುತ್ತದೆ. ಗ್ರಾಹಕ ಬೆಲೆ ಸೂಚಕ ಹಣದುಬ್ಬರವು ಜೂನ್ 2024 ರಲ್ಲಿ ಶೇಕಡಾ 5.1 ರಷ್ಟಿತ್ತು, ಪ್ರಮುಖ ಹಣದುಬ್ಬರವು ಶೇಕಡಾ 3.1 ರಷ್ಟಿತ್ತು. ಒಟ್ಟಾರೆ ಚಿಲ್ಲರೆ ಹಣದುಬ್ಬರವು ಆರ್‌ಬಿಐ ನ 2 ರಿಂದ 6 ಪ್ರತಿಶತದ ಅಧಿಸೂಚಿತ ಪರಿಧಿಯಲ್ಲಿಯೇ ಇದೆ.

2024-25ನೇ ಸಾಲಿನಲ್ಲಿ ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚಗಳು ಕ್ರಮವಾಗಿ 32.07 ಲಕ್ಷ ಕೋಟಿ ರೂ. ಮತ್ತು 48.21 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ನಿವ್ವಳ ತೆರಿಗೆ ಸ್ವೀಕೃತಿಗಳು 25.83 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು ಜಿಡಿಪಿಯ ಶೇ.4.9 ಎಂದು ಅಂದಾಜಿಸಲಾಗಿದೆ. ಬಂಡವಾಳ ವೆಚ್ಚವನ್ನು 11,11,111 ಕೋಟಿ ರೂ. (ಜಿಡಿಪಿಯ ಶೇ 3.4) ಎಂದು ನಿಗದಿಪಡಿಸಲಾಗಿದೆ. ಇದು ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ 1,50,000 ಕೋಟಿ ರೂ. ಆರ್ಥಿಕ ನೆರವು ಒಳಗೊಂಡಿದೆ. ಬಜೆಟ್ ಬಂಡವಾಳ ವೆಚ್ಚವು 2019-20 ರಲ್ಲಿನ ಬಂಡವಾಳ ವೆಚ್ಚದ ಸುಮಾರು 3.3 ಪಟ್ಟು ಮತ್ತು ಬಜೆಟ್‌ ಅಂದಾಜು (ಬಿಇ) 2024-25 ರಲ್ಲಿನ ಒಟ್ಟು ವೆಚ್ಚದ 23 ಪ್ರತಿಶತವಾಗಿದೆ.

"2021 ರಲ್ಲಿ ನಾನು ಘೋಷಿಸಿದ ಹಣಕಾಸಿನ ಬಲವರ್ಧನೆಯ ಮಾರ್ಗವು ನಮ್ಮ ಆರ್ಥಿಕತೆಗೆ ಉತ್ತಮ ಫಲ ನೀಡಿದೆ ಮತ್ತು ಮುಂದಿನ ವರ್ಷ ಶೇಕಡಾ 4.5 ಕ್ಕಿಂತ ಕಡಿಮೆ ಕೊರತೆಯನ್ನು ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ." ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. “2026-27 ರಿಂದ, ಕೇಂದ್ರ ಸರ್ಕಾರದ ಸಾಲವು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಇಳಿಕೆಯ ಹಾದಿಯಲ್ಲಿ ಇರುವಂತೆ ಪ್ರತಿ ವರ್ಷ ವಿತ್ತೀಯ ಕೊರತೆಯನ್ನು ಉಳಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ” ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್  ಪ್ರಕಟಿಸಿದ 3 ತಾತ್ಕಾಲಿಕ ವಾಸ್ತವಿಕಗಳ (PA) ಪ್ರಕಾರ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಜಿಡಿಪಿಯ 5.6 ಪ್ರತಿಶತಕ್ಕೆ ಇಳಿಕೆಯಾಗಿದೆ, ಹಾಗೆಯೇ  2023-24 ರಲ್ಲಿ ಆದಾಯ ಕೊರತೆಯು ಜಿಡಿಪಿಯ ಶೇ.2.6ಕ್ಕೆ ಇಳಿದಿದೆ.

2024-25ನೇ ಹಣಕಾಸು ವರ್ಷದ ಬಜೆಟ್ ಅಂದಾಜುಗಳಿಗೆ (ಬಿಇ) ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಮುಖ ಹಣಕಾಸಿನ ಸೂಚಕಗಳು, ಜಿಡಿಪಿಯ ಶೇಕಡಾವಾರು ಕೆಳಗಿನ ಕೋಷ್ಟಕದಲ್ಲಿ ಸಂಕ್ಷೇಪಿಸಲಾಗಿದೆ.

ಹಣಕಾಸಿನ ಸೂಚಕಗಳು

2024-25ರ ಬಜೆಟ್ ಅಂದಾಜುಗಳು (ಶೇಕಡಾದಲ್ಲಿ)

1. ವಿತ್ತೀಯ ಕೊರತೆ

4.9

2. ಆದಾಯ ಕೊರತೆ

1.8

3. ಪ್ರಾಥಮಿಕ ಕೊರತೆ

1.4

4. ತೆರಿಗೆ ಆದಾಯ (ಒಟ್ಟು)

11.8

5. ತೆರಿಗೆಯೇತರ ಆದಾಯ

1.7

6. ಕೇಂದ್ರ ಸರ್ಕಾರದ ಸಾಲ

56.8

ಸೆಕ್ಯುರಿಟಿಗಳ ಮೂಲಕ ಒಟ್ಟು ಮಾರುಕಟ್ಟೆ ಸಾಲವನ್ನು 14.01 ಲಕ್ಷ ಕೋಟಿ ರೂ. ಮತ್ತು ನಿವ್ವಳ ಮಾರುಕಟ್ಟೆ ಸಾಲವನ್ನು 11.63 ಲಕ್ಷ ಕೋಟಿ ರೂ. ಎಂದು 2024-25 ರಲ್ಲಿ ಅಂದಾಜಿಸಲಾಗಿದೆ. ಇವೆರಡೂ 2023-24ರಲ್ಲಿ ಕಡಿಮೆ ಇರುತ್ತವೆ.

ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ ಗಳ ಒಟ್ಟು ಅನುತ್ಪಾದಕ ಆಸ್ತಿಗಳ ಅನುಪಾತವು 2017-18ನೇ ಆರ್ಥಿಕ ವರ್ಷದಲ್ಲಿದ್ದ ಗರಿಷ್ಠ 11.2 ಶೇಕಡಾದಿಂದ ಮಾರ್ಚ್ 2024 ರ ಅಂತ್ಯದ ವೇಳೆಗೆ 2.8 ಶೇಕಡಾಕ್ಕೆ ಕಡಿಮೆಯಾಗಿದೆ. ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು ಹೆಚ್ಚಿನ ಲಾಭದಿಂದ ಮೀಸಲುಗಳನ್ನು ಬಂಡವಾಳ ಮಾಡಿಕೊಳ್ಳುವ ಮೂಲಕ ಮತ್ತು ತಾಜಾ ಬಂಡವಾಳವನ್ನು ಹೆಚ್ಚಿಸುವ ಮೂಲಕ ತಮ್ಮ ಬಂಡವಾಳದ ಮೂಲವನ್ನು ಹೆಚ್ಚಿಸಿವೆ, ಅವುಗಳ ಬಂಡವಾಳದಿಂದ ಅಪಾಯದ ಆಸ್ತಿಯ ಅನುಪಾತವು ಮಾರ್ಚ್ 2024 ರಲ್ಲಿ 16.8 ರಷ್ಟು ಆಯಿತು, ಇದು ನಿಯಂತ್ರಕ ಕನಿಷ್ಠಕ್ಕಿಂತಲೂ ಮೇಲಿದೆ.

ಬಜೆಟ್‌ ಅಂದಾಜು 2024-25 ಕ್ಕಾಗಿ ಒಟ್ಟು ತೆರಿಗೆ ಆದಾಯ ಪರಿಷ್ಕೃತ ಅಂದಾಜು 2023-24 ಕ್ಕಿಂತ 11.7 ಶೇಕಡಾ ಮತ್ತು ತಾತ್ಕಾಲಿಕ ವಾಸ್ತವ 2023-24 ಕ್ಕಿಂತ 10.8 ಶೇಕಡಾದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಜಿ ಟಿ ಆರ್ 38.40 ಲಕ್ಷ ಕೋಟಿ ರೂ. (ಜಿಡಿಪಿಯ ಶೇ. 11.8) ಎಂದು ಅಂದಾಜಿಸಲಾಗಿದೆ. ನೇರ ಮತ್ತು ಪರೋಕ್ಷ ತೆರಿಗೆಗಳು ಜಿ ಟಿ ಆರ್‌ ಗೆ ಕ್ರಮವಾಗಿ ಶೇ 57.5 ಮತ್ತು ಶೇ 42.5 ರಷ್ಟು ಕೊಡುಗೆ ನೀಡುತ್ತವೆ ಎಂದು ಅಂದಾಜಿಸಲಾಗಿದೆ. ಬಜೆಟ್‌ ಅಂದಾಜು 2024-25 ರಲ್ಲಿ, ರಾಜ್ಯಗಳಿಗೆ ತೆರಿಗೆ ಹಂಚಿಕೆಯ ನಂತರ, ತೆರಿಗೆ ಆದಾಯ (ಕೇಂದ್ರಕ್ಕೆ ನಿವ್ವಳ) 25.83 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತೆರಿಗೆಯೇತರ ಆದಾಯವು 5.46 ಲಕ್ಷ ಕೋಟಿ ರೂ.ಗಳಷ್ಟಿರಲಿದೆ ಎಂದು ಅಂದಾಜಿಸಲಾಗಿದೆ, ಇದು ಪರಿಷ್ಕೃತ ಅಂದಾಜು 2023–24 ರ 3.76 ಲಕ್ಷ ಕೋಟಿ ರೂ.ಗಿಂತ 45.2 ರಷ್ಟು ಹೆಚ್ಚು.

ಜಿಡಿಪಿಯ ಶೇಕಡಾವಾರು ಪ್ರಮುಖ ಸಬ್ಸಿಡಿಗಳು 2023-24 ರ ಪರಿಷ್ಕೃತ ಅಂದಾಜಿನಲ್ಲಿ 1.4 ಶೇಕಡಾದಿಂದ 2024- 25 ರ ಬಜೆಟ್‌ ಅಂದಾಜಿನಲ್ಲಿ 1.2 ಶೇಕಡಾಕ್ಕೆ ಕುಸಿಯುವ ನಿರೀಕ್ಷೆಯಿದೆ. 3.81 ಲಕ್ಷ ಕೋಟಿ ರೂ.ಗಳ ಪ್ರಮುಖ ಸಬ್ಸಿಡಿಗಳು 2024-25ರ ಬಜೆಟ್‌ ಅಂದಾಜಿನಲ್ಲಿ ಆದಾಯ ವೆಚ್ಚದ ಸುಮಾರು 10.3 ಶೇಕಡವಾರು ಒಳಗೊಂಡಿರುತ್ತವೆ.

2024-25ರ ಬಜೆಟ್‌ ಅಂದಾಜಿನಲ್ಲಿ ಆದಾಯ ಸ್ವೀಕೃತಿಗಳು ಮತ್ತು ಆದಾಯ ವೆಚ್ಚಗಳ ನಡುವಿನ ಸಮತೋಲನವನ್ನು ಸಾಧಿಸಲು, ಆದಾಯ ಸ್ವೀಕೃತಿಗಳು ಮತ್ತು ಕೇಂದ್ರ ಸರ್ಕಾರದ ಆದಾಯ ವೆಚ್ಚಗಳು ಕ್ರಮವಾಗಿ 31.29 ಲಕ್ಷ ಕೋಟಿ ರೂ. ಮತ್ತು 37.09 ಲಕ್ಷ ಕೋಟಿರೂ. ಎಂದು ಅಂದಾಜಿಸಲಾಗಿದೆ.

ಜಿ ಎಸ್‌ ಟಿ ಸ್ವೀಕೃತಿಗಳು ಬಜೆಟ್‌ ಅಂದಾಜು 2024-25 ರಲ್ಲಿ 10.62 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ, 2023-24ನೇ ಆರ್ಥಿಕ ವರ್ಷಕ್ಕೆ ಆರ್‌ ಇ ಮತ್ತು ಪಿ ಇ ಗಿಂತ 11.0 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. 2023-24 ರಲ್ಲಿನ ಜಿ ಎಸ್‌ ಟಿ ಸಂಗ್ರಹಣೆಗಳು ಒಟ್ಟು 20.18 ಲಕ್ಷ ಕೋಟಿ ರೂ.ಗಳ ಒಟ್ಟು ಜಿಎಸ್‌ಟಿ ಸಂಗ್ರಹದೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ, ಇದು 2022-23ನೇ ಆರ್ಥಿಕ ವರ್ಷಕ್ಕಿಂತ 11.7 ಶೇಕಡಾ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

ಒಟ್ಟು ತೆರಿಗೆ ಆದಾಯವು ಶೇಕಡಾ 13.4 ರಷ್ಟು ಹೆಚ್ಚಾಗುತ್ತದೆ ಮತ್ತು ಕೇಂದ್ರಕ್ಕೆ ತೆರಿಗೆ ನಿವ್ವಳವು ಶೇಕಡಾ 10.9 ರಷ್ಟು ಹೆಚ್ಚಾಗುತ್ತದೆ. ಆದಾಯ ಸ್ವೀಕೃತಿಗಳು ಕಳೆದ ವರ್ಷಗಳಲ್ಲಿ ಮುಂದುವರಿದ ಬೆಳವಣಿಗೆಯನ್ನು ತೋರಿಸುತ್ತವೆ, ಇದು ತೆರಿಗೆ ಸಂಗ್ರಹದಲ್ಲಿನ ದೃಢವಾದ ಬೆಳವಣಿಗೆಯಿಂದ ಪ್ರೇರೇಪಿಸಲ್ಪಟ್ಟಿದೆ. ಕೇಂದ್ರ ಸರ್ಕಾರದ ಒಟ್ಟು ವೆಚ್ಚವು 2023-24 ನೇ ಹಣಕಾಸು ವರ್ಷದಲ್ಲಿ  5.9 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

 

*****

 

 

 

 



(Release ID: 2035656) Visitor Counter : 8