ಹಣಕಾಸು ಸಚಿವಾಲಯ
azadi ka amrit mahotsav

ಕೃಷಿ ಆದಾಯ ಸುಧಾರಣೆಗೆ ಭಾರತೀಯ ಕೃಷಿ ಸಂಬಂಧಿತ ವಲಯಗಳು ಭರವಸೆಯ ಮೂಲವಾಗಿ ಹೊರಹೊಮ್ಮಿವೆ : ಆರ್ಥಿಕ ಸಮೀಕ್ಷೆ


2014-15 ರಿಂದ 2022-23ರ ಅವಧಿಯಲ್ಲಿ ಜಾನುವಾರು ವಲಯ ಸಿಎಜಿಆರ್‌ ನ ಶೇ.7.38 ರಷ್ಟು ಬೆಳವಣಿಗೆ; ಮೀನುಗಾರಿಎಕ ವಲಯ ಸಿಎಜಿಆರ್‌ ನ ಶೇ.8.9ರಷ್ಟು ಪ್ರಗತಿ

ಆಹಾರ ಸಂಸ್ಕರಣಾ ವಲಯದ ಒಟ್ಟು ಮೌಲ್ಯವರ್ಧನೆ (ಜಿವಿಎ) 2013-14ರ ರೂ.1.30 ಲಕ್ಷ ಕೋಟಿ ಪ್ರಮಾಣದಿಂದ 2022-23 ರಲ್ಲಿ ರೂ.1.92 ಲಕ್ಷ ಕೋಟಿ ಗೆ ಏರಿಕೆ

Posted On: 22 JUL 2024 2:57PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಆರ್ಥಿಕ ಸಮೀಕ್ಷೆ 2023-24 ಮಂಡಿಸಿದರು. ಭಾರತೀಯ ಕೃಷಿಯ ಸಂಬಂಧಿತ ವಲಯಗಳು ಕೃಷಿ ಆದಾಯ ಸುಧಾರಣೆಗೆ ನಿರಂತರವಾಗಿ ಸದೃಢ ಪ್ರಗತಿಯ ಕೇಂದ್ರಗಳಾಗಿ ಮತ್ತು ಭರವಸೆಯ ಮೂಲವಾಗಿ ಹೊರಹೊಮ್ಮುತ್ತಿವೆ ಎಂಬುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. 2014-15 ರಿಂದ 2022-23ರವರೆಗೆ ಜಾನುವಾರು ವಲಯ ಸಂಯೋಜಿತ ವಾರ್ಷಿಕ ಪ್ರಗತಿ ದರ (ಸಿಎಜಿಆರ್)ನ ಶೇಕಡ 7.38 ರಷ್ಟು  ಸ್ಥಿರ ಪ್ರಗತಿ ಸಾಧಿಸಿದ್ದು  ಭರವಸೆಯ ಬೆಳವಣಿಗೆ ಕಂಡಿದೆ.  ಕೃಷಿಮತ್ತು ಸಂಬಂಧಿತ ವಲಯದಲ್ಲಿ ಒಟ್ಟು ಮೌಲ್ಯವರ್ಧನೆ ಜಿವಿಎಗೆ (ಸ್ಥಿರ ಬೆಲೆಗಳಲ್ಲಿ) ಜಾನುವಾರುಗಳ ಕೊಡುಗೆ ಪ್ರಮಾಣವು 2014-15 ರಲ್ಲಿ ಶೇಕಡ 24.32 ರಷ್ಟಿದ್ದು, 2022-23 ರಲ್ಲಿ ಶೇಕಡ 30.38 ಕ್ಕೆ ಏರಿಕೆಯಾಗಿದೆ. 2022-23 ರಲ್ಲಿ ಜಾನುವಾರು ವಲಯ ಒಟ್ಟು ಜಿವಿಎ ಗೆ ಶೇಕಡ 4.66 ರಷ್ಟು ಕೊಡುಗೆ ನೀಡಿದ್ದು, ತಲಾವಾರು ಹಾಲು, ಮೊಟ್ಟೆ ಮತ್ತು ಮಾಂಸದ ಲಭ್ಯತೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಭಾರತದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ವಲಯವಾದ ಮೀನುಗಾರಿಕೆಯು ಕೃಷಿ ಜಿವಿಎದ ಶೇಕಡ 6.72 ರಷ್ಟಿದ್ದು, 2014-15 ಮತ್ತು 2022-23ರ ಅವಧಿಯಲ್ಲಿ (ಸ್ಥಿರ ಬೆಲೆಗಳಲ್ಲಿ) ಸಂಯೋಜಿತ ವಾರ್ಷಿಕ ದರ ಶೇಕಡ 8.9 ರಷ್ಟು ಏರಿಕೆ ಕಂಡಿದೆ. ಈ “ಸೂರ್ಯೋದಯ ವಲಯ”ವು ಸುಮಾರು 30 ದಶಲಕ್ಷ ಜನರಿಗೆ ಅದರಲ್ಲೂ ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳಿಗೆ ಬೆಂಬಲವಾಗಿದೆ.

ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಎಚ್‌ಐಡಿಎಫ್) ಯು ವೈಯಕ್ತಿಕ ಉದ್ಯಮಿಗಳು, ಖಾಸಗಿ ಕಂಪೆನಿಗಳು, ಕೃಷಿ ಉತ್ಪನ್ನ ಸಂಸ್ಥೆ (ಎಫ್ ಪಿ ಒ)ಗಳು ಮತ್ತು ಸೆಕ್ಷನ್‌ 8 ಕಂಪೆನಿಗಳು (ಲಾಭರಹಿತ ಸಂಸ್ಥೆಗಳು) ಹಾಗೂ ಡೈರಿ ಸಂಸ್ಕರಣೆ, ಮಾಂಸ ಸಂಸ್ಕರಣೆ, ಪಶು ಆಹಾರ ಮತ್ತು ತಳಿ ಸುಧಾರಣಾ ತಂತ್ರಜ್ಞಾನದಂತಹ ಪ್ರಮುಖ ವಲಯಗಳಲ್ಲಿ ಹೈನುಗಾರಿಕೆ ಸಹಕಾರ (ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ಎಎಚ್‌ಐಡಿಎಫ್‌ ನಲ್ಲಿ ವಿಲೀನಗೊಳಿಸಿ ಸೇರ್ಪಡೆ ಮಾಡಲಾಗಿದೆ) ಸಂಸ್ಥೆಗಳಿಂದ ಹೂಡಿಕೆಗೆ ಅನುವು ಮಾಡಿಕೊಟ್ಟಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಸಾಲ ಪಡೆದವರಿಗೆ ಸರ್ಕಾರ ಶೇ.3 ರಷ್ಟು ಧನ ಸಹಾಯ ನೀಡಲಿದ್ದು, ಒಟ್ಟು ಸಾಲ ಮೊತ್ತದ ಶೇಕಡ 25 ರಷ್ಟರವರೆಗೆ ಸಾಲ ಖಾತರಿಯನ್ನೂ ನೀಡುತ್ತಿದೆ. ಮೇ 2024ರ ವೇಳೆಗೆ, ಸಾಲದಾತ ಬ್ಯಾಂಕ್‌ ಗಳು/ ನಬಾರ್ಡ್‌ / ಎನ್‌ ಡಿ ಡಿ ಬಿ ಗಳಿಂದ ₹13.861 ಕೋಟಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, 40,000 ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದು, 42 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ.

ಭಾರತ 2022-23 ರಲ್ಲಿ 17.54 ದಶಲಕ್ಷ ಟನ್‌ ಗಳನ್ನು ದಾಖಲೆಯ ಮೀನು ಉತ್ಪಾದನೆ ಮಾಡಿದ್ದು, ಇದು ಒಟ್ಟು ಜಾಗತಿಕ ಉತ್ಪಾದನೆಯ ಶೇಕಡ 8 ರಷ್ಟಿದ್ದು ಜಾಗತಿಕವಾಗಿ ಮೂರನೇ ಸ್ಥಾನ ಪಡೆದಿತ್ತು. ಈ ವಲಯದ ಉತ್ತೇಜನಕ್ಕೆ, ಬೀಜ ಮತ್ತು ಮೀನು ಉತ್ಪಾದನೆ ಹೆಚ್ಚಳ ಮತ್ತು ಇತರ ವಿಸ್ತೃತ ಸೇವೆಗಳ ಗುರಿಯೊಂದಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ ಎಂ ಎಂ ಎಸ್‌ ವೈ) ಸಮಗ್ರ ಮಧ್ಯಸ್ಥಿಕೆಯನ್ನು ಅಭಿವೃ‍ದ್ಧಿಪಡಿಸಲಾಗಿದೆ. ಈ ವಲಯದ ಮೂಲಸೌಕರ್ಯ ಅಗತ್ಯಗಳಿಗೆ ಪರಿಹಾರವಾಗಿ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್‌ ಐ ಡಿ ಎಫ್)‌ ಅನ್ನು 2018-19 ರಲ್ಲಿ ಪರಿಚಯಿಸಲಾಯಿತು. ಒಟ್ಟ ನಿಧಿಯ ಗಾತ್ರ ₹7.52 ಸಾವಿರ ಕೋಟಿಯಷ್ಟಿದ್ದು, ಈವರೆಗೆ ರಿಯಾಯಿತಿ ದರವಾಗಿ ₹5.59 ಸಾವಿರ ಕೋಟಿಯಷ್ಟು ಮೊತ್ತಕ್ಕೆ 121 ಪ್ರಸ್ತಾವನೆಗಳನ್ನು ಶಿಫಾರಸ್ಸು ಮಾಡಲಾಗಿದೆ. 

ಆಹಾರ ಸಂಸ್ಕರಣಾ ವಲಯ:

ಆರ್ಥಿಕ ಸಮೀಕ್ಷೆ ಪ್ರಕಾರ, ಭಾರತ ಹಾಲಿನ ಅತಿ ದೊಡ್ಡ ಉತ್ಪಾದಕ ರಾಷ್ಟ್ರ ಹಾಗೂ ಹಣ್ಣು, ತರಕಾರಿ ಮತ್ತು ಸಕ್ಕರೆಯ ಎರಡನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಸಂಘಟಿತ ವಲಯದ ಒಟ್ಟು ಉದ್ಯೋಗಗಳ ಪೈಕಿ ಶೇಕಡ 12.02 ರಷ್ಟು ಪಾಲನ್ನು ಹೊಂದಿರುವ ಆಹಾರ ಸಂಸ್ಕರಣಾ ವಲಯವು ಭಾರತದ ಸಂಘಟಿತ ವಲಯದ ಅತಿ ದೊಡ್ಡ ಉದ್ಯೋಗದಾತ ವಲಯವಾಗಿದೆ. ಸಂಸ್ಕರಿತ ಆಹಾರ ರಫ್ತು ಸೇರಿದಂತೆ 2022-23 ರಲ್ಲಿ ಕೃಷಿ-ಆಹಾರ ರಫ್ತು ಪ್ರಮಾಣ 46.44 ಶತಕೋಟಿ ಅಮೆರಿಕನ್‌ ಡಾಲರ್‌ ನಷ್ಟಿದ್ದು ಭಾರತದ ಒಟ್ಟು ರಫ್ತುಗಳ ಪೈಕಿ ಶೇಕಡ 11.7 ರಷ್ಟಿದೆ. 2017-18 ರಲ್ಲಿ ಶೇಕಡ 14.9 ರಷ್ಟಿದ್ದ ಸಂಸ್ಕರಿತ ಆಹಾರ ರಫ್ತುಗಳ ಪಾಲು 2022-23 ರಲ್ಲಿ ಶೇಕಡ 23.4 ಕ್ಕೆ ಏರಿಕೆಯಾಗಿದೆ.

ಆಹಾರ ಸಂಸ್ಕರಣಾ ವಲಯದಲ್ಲಿ 2013-14 ರಲ್ಲಿ ರೂ.1.30 ಲಕ್ಷ ಕೋಟಿ ಯಷ್ಟಿದ್ದ ಒಟ್ಟು ಮೌಲ್ಯವರ್ಧನೆಯು 2022-23 ರಲ್ಲಿ ರೂ.1.92 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ವಲಯವು2022-23ರ ತಯಾರಿಕಾ ವಲಯದಲ್ಲಿ 2011-12ರ ದರಗಳೊಂದಿಗೆ ಜಿವಿಎದ ಶೇಕಡ 7.66 ರಷ್ಟಿತ್ತು ಎಂಬ ಬಗ್ಗೆ ಆರ್ಥಿಕ ಸಮೀಕ್ಷೆಯು ಬೆಳಕು ಚೆಲ್ಲಿದೆ.

 

*****
 


(Release ID: 2035587) Visitor Counter : 66