ಹಣಕಾಸು ಸಚಿವಾಲಯ
ಭಾರತದ ಆರ್ಥಿಕತೆಯು 2030 ರವರೆಗೆ ಕೃಷಿಯೇತರ ವಲಯದಲ್ಲಿ ವಾರ್ಷಿಕವಾಗಿ ಸುಮಾರು 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ
ಆರ್ಥಿಕ ಚಟುವಟಿಕೆಗಳ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬೇರೂರುತ್ತಿರುವುದರಿಂದ ಸಾಮೂಹಿಕ ಕಲ್ಯಾಣದ ಕಡೆಗೆ ತಾಂತ್ರಿಕ ಆಯ್ಕೆಗಳನ್ನು ಮುನ್ನಡೆಸುವುದು ಮುಖ್ಯವಾಗಿದೆ
ಅವರ ವ್ಯಾಪ್ತಿಯೊಂದಿಗೆ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರಿಗೆ ಸಾಮಾಜಿಕ ಸುರಕ್ಷಾ ಸಂಹಿತೆ (2020) ಅಡಿಯಲ್ಲಿ ಪರಿಣಾಮಕಾರಿ ಸಾಮಾಜಿಕ ಭದ್ರತಾ ಕ್ರಮಗಳನ್ನು ರಚಿಸಲಾಗಿದೆ
ಆರ್ಥಿಕ ವರ್ಷ 20 ಮತ್ತು ಆರ್ಥಿಕ ವರ್ಷ 23ರ ನಡುವೆ ನಾಲ್ಕು ಪಟ್ಟು ಲಾಭದೊಂದಿಗೆ ಆರ್ಥಿಕ ವರ್ಷ24 ರಲ್ಲಿ ಭಾರತದ ಕಾರ್ಪೊರೇಟ್ ವಲಯದ ಲಾಭವು 15 ವರ್ಷಗಳಲ್ಲಿ ಅತ್ಯಧಿಕವಾಗಿದೆ
ಕೃಷಿ-ಸಂಸ್ಕರಣೆ ಮತ್ತು ಆರೈಕೆ ಆರ್ಥಿಕತೆ, ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸಲು ಮತ್ತು ಸುಸ್ಥಿರಗೊಳಿಸಲು ಎರಡು ಭರವಸೆಯ ವಲಯಗಳಾಗಿವೆ
Posted On:
22 JUL 2024 3:19PM by PIB Bengaluru
ಇಂದು ಸಂಸತ್ತಿನಲ್ಲಿ 'ಆರ್ಥಿಕ ಸಮೀಕ್ಷೆ 2023-24' ಅನ್ನು ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಜಾಗತಿಕ ಕಾರ್ಮಿಕ ಮಾರುಕಟ್ಟೆಯು ಬದಲಾವಣೆಗಳ ನಡುವೆ ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಯಿಂದ ನಿರಂತರವಾಗಿ ಮರುರೂಪಿಸಲ್ಪಡುತ್ತಿರುವಾಗ, ಅದರ ಬದಲಾವಣೆಗಳಿಂದ ಭಾರತವೂ ಹೊರತಾಗಿರುವುದಿಲ್ಲ ಎಂದು ಹೇಳಿದರು.
2036 ರವರೆಗೆ ಉದ್ಯೋಗ ಸೃಷ್ಟಿಯ ಅವಶ್ಯಕತೆ
2023-24 ರ ಆರ್ಥಿಕ ಸಮೀಕ್ಷೆಯು ಭಾರತೀಯ ಆರ್ಥಿಕತೆಯು ಹೆಚ್ಚುತ್ತಿರುವ ಉದ್ಯೋಗಿಗಳನ್ನು ಪೂರೈಸಲು ಕೃಷಿಯೇತರ ವಲಯದಲ್ಲಿ 2030 ರವರೆಗೆ ವಾರ್ಷಿಕವಾಗಿ ಸುಮಾರು 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಹೇಳುತ್ತದೆ.
2024-2036ರ ಅವಧಿಯಲ್ಲಿ ಕೃಷಿಯೇತರ ಉದ್ಯೋಗ ಸೃಷ್ಟಿಗೆ ವಾರ್ಷಿಕ ಅವಶ್ಯಕತೆ
ಉತ್ಪಾದಕತೆ ಸಂಬಂಧಿತ ಉತ್ತೇಜನ (ಪಿಎಲ್ಐ) ಯೋಜನೆ (5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿ), ಮಿತ್ರ ಜವಳಿ ಯೋಜನೆ (20 ಲಕ್ಷ ಉದ್ಯೋಗ ಸೃಷ್ಟಿ), ಮುದ್ರಾ, ಇತ್ಯಾದಿಗಳ ಅನುಷ್ಠಾನವನ್ನು ಉತ್ತೇಜಿಸುವ ಮೂಲಕ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಪೂರಕವಾಗಿ ಅವಕಾಶವಿದೆ ಎಂದು ಸಮೀಕ್ಷೆಯು ಉಲ್ಲೇಖಿಸುತ್ತದೆ.
ಕೃತಕ ಬುದ್ಧಿಮತ್ತೆ (ಎಐ): ಅತಿ ದೊಡ್ಡ ಕ್ರಾಂತಿ
2023-24 ರ ಆರ್ಥಿಕ ಸಮೀಕ್ಷೆಯು ಭಾರತದ ವಿಶಾಲವಾದ ಜನಸಂಖ್ಯಾ ಲಾಭಾಂಶ ಮತ್ತು ಹೆಚ್ಚಿನ ಯುವ ಜನಸಂಖ್ಯೆಯೊಂದಿಗೆ ಅನನ್ಯವಾಗಿ ನೆಲೆಗೊಂಡು ಕೃತಕ ಬುದ್ಧಿಮತ್ತೆ (ಎಐ)ಯು ಅಪಾಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳುತ್ತದೆ. ಇದರಿಂದ ನಿರ್ದಿಷ್ಟವಾಗಿ ಭಾದೆ ಪಡುವುದು ಬಿಪಿಒ ಕ್ಷೇತ್ರವಾಗಿದೆ, ಅಲ್ಲಿ ಜೆನ್-ಎಐ ಚಾಟ್ ಬಾಟ್ ಗಳ ಮೂಲಕ ದಿನನಿತ್ಯದ ಅರಿವಿನ ಕಾರ್ಯಗಳ ಕಾರ್ಯಕ್ಷಮತೆಯಲ್ಲಿ ಕ್ರಾಂತಿ ತರುತ್ತಿದೆ ಮತ್ತು ಮುಂದಿನ ಹತ್ತು ವರ್ಷಗಳಲ್ಲಿ ಈ ವಲಯದಲ್ಲಿನ ಉದ್ಯೋಗವು ಗಣನೀಯವಾಗಿ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ.
ಆದಾಗ್ಯೂ, ಮುಂದಿನ ದಶಕದಲ್ಲಿ, ಕೃತಕ ಬುದ್ಧಿಮತ್ತೆಯ ಕ್ರಮೇಣ ಹರಡುವಿಕೆಯು ಉತ್ಪಾದಕತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದೊಂದಿಗೆ ತಂತ್ರಜ್ಞಾನದೊಂದಿಗೆ ಕೆಲಸ ಮಾಡಲು ಭಾರತದ ಜನಸಂಖ್ಯೆಯ ಸಂಬಂಧವನ್ನು ಗಮನಿಸಿದರೆ, ಸರ್ಕಾರ ಮತ್ತು ಉದ್ಯಮದ ಸಕ್ರಿಯ ಹಸ್ತಕ್ಷೇಪವು ಎಐ ಯುಗದಲ್ಲಿ ಭಾರತವನ್ನು ಪ್ರಮುಖ ಆಟಗಾರನನ್ನಾಗಿ ಇರಿಸಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಭಾರತದಲ್ಲಿ ಎಐನ ಹೆಚ್ಚು ಬಳಸುವಿಕೆ
ಈ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಅಗತ್ಯವನ್ನು ಎತ್ತಿ ತೋರಿಸುತ್ತಾ, ಕೃತಕ ಬುದ್ಧಿಮತ್ತೆಗಾಗಿ ಸಂಸ್ಥೆಗಳ ನಡುವೆ (ಇಂಟರ್-ಏಜೆನ್ಸಿ) ಸಮನ್ವಯ ಪ್ರಾಧಿಕಾರದ ಅವಶ್ಯಕತೆ ಇದೆ ಎಂದು ಆರ್ಥಿಕ ಸಮೀಕ್ಷೆ 2023-24 ಹೇಳಿದೆ, ಇದು ಸಂಶೋಧನೆ, ನಿರ್ಧಾರ ತೆಗೆದುಕೊಳ್ಳುವಿಕೆ, ಎಐ ಮತ್ತು ಉದ್ಯೋಗ ಸೃಷ್ಟಿಗೆ ಕೇಂದ್ರೀಯ ಸಂಸ್ಥೆಯಾಗಿ ಮಾರ್ಗದರ್ಶನ ನೀಡುತ್ತದೆ.
ಎಐ ಸಕ್ರಿಯಗೊಳಿಸುವ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಎಐ ಅನ್ನು ದೇಶದ ಯುವಕರೊಂದಿಗೆ ಸಂಪರ್ಕಿಸಲು ಸರ್ಕಾರವು ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಕೆಲವು ಫ್ಯೂಚರ್ ಸ್ಕಿಲ್ಸ್ ಪ್ರೈಮ್, ಯುವೈ ಯೂತ್ ಫಾರ್ ಉನ್ನತಿ ಮತ್ತು ಡೆವಲಪ್‌ಮೆಂಟ್ ವಿತ್ ಎಐ, ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಾರ್ಯಕ್ರಮ ಮತ್ತು ಯೂತ್ 2022 ರ ಜವಾಬ್ದಾರಿಯುತ ಎಐ ಯೋಜನೆಗಳು ಸೇರಿವೆ. 2024 ರಲ್ಲಿ ಭಾರತ ಎಐ ಮಿಷನ್‌ಗಾಗಿ 10,300 ಕೋಟಿ ರೂಪಾಯಿಗಳ ಬಜೆಟ್ ಅನ್ನು ಒದಗಿಸಲಾಗಿದೆ, ಇದು ಎಐ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಪ್ರಮುಖ ಹಂತವಾಗಿದೆ.
ಗಿಗ್ ಆರ್ಥಿಕತೆಯ ಕಡೆಗೆ ಬದಲಾವಣೆ
ರಾಷ್ಟ್ರೀಯ ಕಾರ್ಮಿಕ ಬಲ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿ ನೀತಿ ಆಯೋಗದ ಸೂಚಕ ಅಂದಾಜಿನ ಪ್ರಕಾರ, 2020–21ರಲ್ಲಿ 77 ಲಕ್ಷ (7.7 ದಶಲಕ್ಷ) ಕಾರ್ಮಿಕರು ಗಿಗ್ ಆರ್ಥಿಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಆರ್ಥಿಕ ಸಮೀಕ್ಷೆ 2023-24 ರ ಪ್ರಕಾರ, 2029-30ರ ವೇಳೆಗೆ ಭಾರತದಲ್ಲಿ ಗಿಗ್ ಕಾರ್ಯಪಡೆಯು 2.35 ಕೋಟಿ (23.5 ದಶಲಕ್ಷ) ವಿಸ್ತರಿಸುವ ನಿರೀಕ್ಷೆಯಿದ್ದು ಕೃಷಿಯೇತರ ಉದ್ಯೋಗಿಗಳ ಶೇಕಡಾ 6.7 ಅಥವಾ ಒಟ್ಟು ಜೀವನೋಪಾಯದ ಶೇಕಡಾ 4.1 ರಷ್ಟು ಆಗಲಿದೆ.
ಭಾರತದಲ್ಲಿ ಮತ್ತು ಜಾಗತಿಕವಾಗಿ ಮಹತ್ವದ ಕೊಡುಗೆ ಎಂದರೆ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರಿಗೆ ಪರಿಣಾಮಕಾರಿ ಸಾಮಾಜಿಕ ಭದ್ರತಾ ಉಪಕ್ರಮಗಳನ್ನು ರಚಿಸಲಾಗಿದೆ ಎಂದು ಸಮೀಕ್ಷೆಯು ಉಲ್ಲೇಖಿಸುತ್ತದೆ. ಸಾಮಾಜಿಕ ಭದ್ರತೆಯ ಸಂಹಿತೆ (2020) ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರನ್ನು ಒಳಗೊಳ್ಳಲು ಸಾಮಾಜಿಕ ಭದ್ರತೆ ಪ್ರಯೋಜನಗಳ ವ್ಯಾಪ್ತಿಯನ್ನು ವಿಸ್ತರಿಸುವ ಗಮನಾರ್ಹ ಪ್ರಗತಿಯಾಗಿದೆ.
ಹವಾಮಾನ ಬದಲಾವಣೆ ಮತ್ತು ಹಸಿರು ಶಕ್ತಿ ಪರಿವರ್ತನೆ
ಹವಾಮಾನ ಬದಲಾವಣೆ ಈಗಿನ ಕಠಿಣ ವಾಸ್ತವವಾಗಿದ್ದು ಇದರ ವಿಪರೀತ ಹವಾಮಾನ ದುರ್ಘಟನೆಗಳ ಪುನರಾವರ್ತನೆ ಮತ್ತು ತೀವ್ರತೆಯ ಹೆಚ್ಚಳದ ಕಡೆಗೆ ತೋರಿಸುವ ಲಕ್ಷಣಗಳನ್ನು ಗುರುತಿಸಿ, ಸಮೀಕ್ಷೆಯು ಅದರ ಮಿಶ್ರ ಫಲಿತಾಂಶವನ್ನು ಉದ್ಯೋಗಗಳು ಮತ್ತು ಉತ್ಪಾದಕತೆಯ ಸಂಭವನೀಯ ನಷ್ಟ ಎಂದು ಉಲ್ಲೇಖಿಸುತ್ತದೆ.
ಹವಾಮಾನ ಬದಲಾವಣೆಯ ಮತ್ತೊಂದು ಅಂಶವೆಂದರೆ ಹಸಿರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಹಸಿರು ಶಕ್ತಿಯ ಪರ್ಯಾಯಗಳಿಗೆ ಪರಿವರ್ತನೆ ಮಾಡುವ ಮೂಲಕ ಅದರ ಪರಿಣಾಮವನ್ನು ತಗ್ಗಿಸುವ ಪ್ರಯತ್ನಗಳನ್ನು ಮಾಡುವುದು. ಈ ಪ್ರವೃತ್ತಿಯು ವ್ಯವಹಾರಗಳ ಹಸಿರು ಪರಿವರ್ತನೆ ಮತ್ತು ಇಎಸ್ ಜಿ ಮಾನದಂಡಗಳ ಅನ್ವಯಕ್ಕೆ ಅನುಕೂಲವಾಗುವ ಹೂಡಿಕೆಗಳಿಂದ ನಡೆಸಲ್ಪಡುವ ಬಲವಾದ ಉದ್ಯೋಗ ಸೃಷ್ಟಿಯ ಪರಿಣಾಮಕ್ಕೆ ಉದ್ದಿಮೆಗಳು ಸಾಕ್ಷಿಯಾಗುವಂತೆ ಮಾಡುತ್ತಿದೆ.
ಭಾರತದ ಕಾರ್ಪೊರೇಟ್ ವಲಯದ ಉನ್ನತಿ
ಆರ್ಥಿಕ ವರ್ಷ 20 ಮತ್ತು ಆರ್ಥಿಕ ವರ್ಷ 23ರ ನಡುವೆ ನಾಲ್ಕು ಪಟ್ಟು ಲಾಭದೊಂದಿಗೆ ಆರ್ಥಿಕ ವರ್ಷ24 ರಲ್ಲಿ ಭಾರತದ ಕಾರ್ಪೊರೇಟ್ ವಲಯದ ಲಾಭವು 15 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ.
ಬಂಡವಾಳದ ನಿಯೋಜನೆ ಮತ್ತು ಕಾರ್ಮಿಕರ ನಿಯೋಜನೆಯ ನಡುವೆ ಸರಿಯಾದ ಸಮತೋಲನವನ್ನು ಹೊಂದಲು ಉದ್ದಿಮೆಗಳು ಜವಾಬ್ದಾರಿಯನ್ನು ಹೊಂದಿವೆ ಎಂದು ಅದು ಹೇಳುತ್ತದೆ. ಎಐ ಕಡೆಗಿನ ಆಕರ್ಷಣೆಯಿಂದಾಗಿ ಮತ್ತು ಸ್ಪರ್ಧಾತ್ಮಕ ಮೌಲ್ಯಗಳ ಕುಂದುವಿಕೆಯ ಭಯದಲ್ಲಿ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಸ್ಥಿರತೆಯ ಮೇಲೆ ಅದರ ಪ್ರಭಾವದ ಬಗ್ಗೆ ಉದ್ದಿಮೆಗಳು ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳುತ್ತದೆ.
ಗುಣಮಟ್ಟದ ಉದ್ಯೋಗಕ್ಕಾಗಿ ಕೃಷಿ-ಸಂಸ್ಕರಣೆ ಮತ್ತು ಆರೈಕೆ ಆರ್ಥಿಕತೆ
ಆರ್ಥಿಕ ಸಮೀಕ್ಷೆ 2023-24 ರಲ್ಲಿ ತಿಳಿಸಿರುವಂತೆ ಭಾರತವು ತನ್ನ ವಿವಿಧ ಕೃಷಿ-ಹವಾಮಾನ ವಲಯಗಳಿಂದ ನೀಡಲಾಗುವ ಉತ್ಪನ್ನಗಳ ಶ್ರೇಣಿಯನ್ನು ಬಳಸಿಕೊಳ್ಳಬಹುದು ಮತ್ತು ಗಣನೀಯವಾಗಿ ಗ್ರಾಮೀಣ ಉದ್ಯೋಗಿಗಳನ್ನು ಸಮರ್ಥವಾಗಿ ತೊಡಗಿಸಿಕೊಳ್ಳಬಹುದು, ಇದು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೃಷಿ ಸಂಸ್ಕರಣಾ ಘಟಕಗಳನ್ನು ನಿಭಾಯಿಸಲು ತಾಂತ್ರಿಕವಾಗಿ ಪರಿಣತಿಯನ್ನು ಹೊಂದಿರುವ ಅರೆಕಾಲಿಕ ಉದ್ಯೋಗವನ್ನು ಬಯಸುವ ಮಹಿಳೆಯರು ಮತ್ತು ವಿದ್ಯಾವಂತ ಯುವಕರನ್ನು ಒಳಗೊಂಡಿರುತ್ತದೆ.
ಎಂಜಿಎನ್ ಆರ್‌ಇಜಿಎಸ್ (MGNREGS) ಕಾರ್ಮಿಕರನ್ನು ಹೆಚ್ಚು ಉತ್ಪಾದಕ ಮತ್ತು ಕಡಿಮೆ ಆರ್ಥಿಕ ಒತ್ತಡವಿರುವ ಉದ್ಯಮಗಳಿಗೆ ವರ್ಗಾಯಿಸಲು ಸಾಕಷ್ಟು ಅವಕಾಶವಿದೆ. ಕೃಷಿಯಲ್ಲಿ ಕಡಿಮೆ ಮೌಲ್ಯವರ್ಧನೆ ಮತ್ತು ವೈವಿಧ್ಯಮಯ ಮತ್ತು ಸ್ಥಳೀಯ ಆಹಾರ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಈ ವಲಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಭಾರತಕ್ಕೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಕೃಷಿ-ಸಂಸ್ಕರಿಸಿದ ಉತ್ಪನ್ನದ ಬಂಧಿತ ಬೇಡಿಕೆಗೆ ಹೆಚ್ಚಿನ ಮಾರ್ಗಗಳಿವೆ ಮತ್ತು ಕಾರ್ಮಿಕರು, ಕ್ರೆಡಿಟ್ ಮತ್ತು ಮಾರ್ಕೆಟಿಂಗ್, ಸಾರಿಗೆಗಾಗಿ ಮೆಗಾ ಫುಡ್ ಪಾರ್ಕ್, ಸ್ಕಿಲ್ ಇಂಡಿಯಾ, ಮುದ್ರಾ, ಒಂದು ಜಿಲ್ಲೆಒಂದು ಉತ್ಪನ್ನ, ಇತ್ಯಾದಿಗಳಂತಹ ವಿವಿಧ ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳಿಂದ ವಲಯವು ಪ್ರಯೋಜನ ಪಡೆಯಬಹುದು.
ಭಾರತದಂತಹ ಯುವ ದೇಶಕ್ಕೆ ಆರೈಕೆ ಆರ್ಥಿಕತೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ, ಇದು ಜನಸಂಖ್ಯಾ ಮತ್ತು ಲಿಂಗ ಲಾಭಾಂಶದ ಪ್ರಯೋಜನವನ್ನು ಹೊಂದಿದೆ. ವಯಸ್ಸಾದ ಜನರ ಭವಿಷ್ಯದ ಆರೈಕೆಯ ಅಗತ್ಯತೆಗಳಿಗೆ ತಯಾರಾಗುವ ಅಗತ್ಯವನ್ನು ಎತ್ತಿ ತೋರಿಸುತ್ತಾ, 2023-24 ರ ಆರ್ಥಿಕ ಸಮೀಕ್ಷೆಯು ಆರೈಕೆ ಕೆಲಸವನ್ನು ವ್ಯಾಖ್ಯಾನಿಸುವುದು ಕಾಳಜಿಯನ್ನು 'ಕೆಲಸ' ಎಂದು ಒಪ್ಪಿಕೊಳ್ಳುವ ಮೊದಲ ಹೆಜ್ಜೆಯಾಗಿದೆ ಎಂದು ಹೇಳುತ್ತದೆ.
ಮಕ್ಕಳ ಜನಸಂಖ್ಯೆಯು ತುಲನಾತ್ಮಕವಾಗಿ ಗಣನೀಯವಾಗಿ ಉಳಿಯುವ ಸಂದರ್ಭದಲ್ಲಿ ವಯಸ್ಸಾದ ಜನಸಂಖ್ಯೆಯು ಪ್ರಸ್ತುತ ಜನಸಂಖ್ಯಾ ಸ್ಥಿತ್ಯಂತರವನ್ನು ಅನುಸರಿಸುವುದರಿಂದ, ಮುಂದಿನ 25 ವರ್ಷಗಳಲ್ಲಿ ಭಾರತದ ಆರೈಕೆಯ ಅಗತ್ಯಗಳನ್ನು ಗಮನಾರ್ಹವಾಗಿ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅದು ಉಲ್ಲೇಖಿಸುತ್ತದೆ. 2050ರ ವೇಳೆಗೆ, ಮಕ್ಕಳ ಪಾಲು ಶೇಕಡಾ 18 ಕ್ಕೆ (ಅಂದರೆ, 30 ಕೋಟಿ ಜನರು) ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ, ವಯಸ್ಸಾದ ವ್ಯಕ್ತಿಗಳ ಪ್ರಮಾಣವು ಶೇಕಡಾ 20.8 ಕ್ಕೆ (ಅಂದರೆ, 34.7 ಕೋಟಿ ಜನರು) ಏರುತ್ತದೆ. ಹೀಗಾಗಿ, 2022 ರಲ್ಲಿ 50.7 ಕೋಟಿ ಜನರಿಗೆ ಹೋಲಿಸಿದರೆ, 2050 ರಲ್ಲಿ ದೇಶವು 64.7 ಕೋಟಿ ಜನರಿಗೆ ಆರೈಕೆ ಅಥವಾ ಕಾಳಜಿ ವಹಿಸುವ ಅಗತ್ಯವಿದೆ.
ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕಡಿಮೆ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಫ್‌ಎಲ್‌ಎಫ್‌ಪಿಆರ್) ಯಿಂದ ಮಹಿಳೆಯರ ಮೇಲಿನ ಅಸಮಾನವಾದ ಕಾಳಜಿಯ ಹೊರೆಯನ್ನು ಗುರುತಿಸಿ, ಲಿಂಗ ಮತ್ತು ಪಾವತಿಸದ ಆರೈಕೆ ಕೆಲಸಗಳನ್ನು ಬೇರ್ಪಡಿಸುವ ಮೂಲಕ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳಲು ಸಮೀಕ್ಷೆಯು ಒತ್ತು ನೀಡುತ್ತದೆ.
ಆರೈಕೆ ವಲಯವನ್ನು ಅಭಿವೃದ್ಧಿಪಡಿಸುವ ಆರ್ಥಿಕ ಮೌಲ್ಯವು ಎರಡು ಪಟ್ಟಾಗಿರುತ್ತದೆ - ಎಫ್‌ಎಲ್‌ಎಫ್‌ಪಿಆರ್ ಅನ್ನು ಹೆಚ್ಚಿಸುವುದು ಮತ್ತು ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಭರವಸೆಯ ವಲಯವನ್ನು ಉತ್ತೇಜಿಸುವುದು. ಭಾರತದ ವಿಷಯದಲ್ಲಿ, ಜಿಡಿಪಿ ಯ 2 ಪ್ರತಿಶತಕ್ಕೆ ಸಮಾನವಾದ ನೇರ ಸಾರ್ವಜನಿಕ ಹೂಡಿಕೆಯು 11 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಮೀಕ್ಷೆಯು ಉಲ್ಲೇಖಿಸುತ್ತದೆ, ಅದರಲ್ಲಿ ಸುಮಾರು 70 ಪ್ರತಿಶತವು ಮಹಿಳೆಯರದಾಗಿರುತ್ತದೆ.
ಭಾರತದಲ್ಲಿ ಹಿರಿಯರ ಆರೈಕೆ ಸುಧಾರಣೆಗಳು
ಹೆಚ್ಚುತ್ತಿರುವ ವಯಸ್ಸಾದ ಜನಸಂಖ್ಯೆಯೊಂದಿಗೆ ಸಂಬಂಧಿಸಿದ ಕಾಳಜಿಯ ಜವಾಬ್ದಾರಿಯು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತದ ಮಾಡಬೇಕಾದ ಪಟ್ಟಿಯಲ್ಲಿ ಅಗ್ರ-ಶ್ರೇಣಿಯಲ್ಲಿ ಗುರುತು ಹಾಕಿರಬೇಕು ಎಂದು ಸಮೀಕ್ಷೆಯು ಕಾಳಜಿಯ ಆರ್ಥಿಕತೆಯನ್ನು ಉಲ್ಲೇಖಿಸುವುದರೊಂದಿಗೆ ಭವಿಷ್ಯಕ್ಕೆ ಸಿದ್ಧವಾಗಿರುವ ಆರೋಗ್ಯಕರ ಹಿರಿಯ ಆರೈಕೆ ನೀತಿಯನ್ನು ರೂಪಿಸುವ ಅಗತ್ಯವಿದೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ವರದಿಯ ಪ್ರಕಾರ, 60-69 ವರ್ಷ ವಯಸ್ಸಿನ ಜನಸಂಖ್ಯೆಯ ಬಳಕೆಯಾಗದ ಕೆಲಸದ ಸಾಮರ್ಥ್ಯದ ಈ 'ಬೆಳ್ಳಿ ಲಾಭಾಂಶ'ವನ್ನು ಬಳಸಿಕೊಳ್ಳುವುದರಿಂದ ಏಷ್ಯಾದ ಆರ್ಥಿಕತೆಗಳಿಗೆ ಸರಾಸರಿ 1.5 ಪ್ರತಿಶತದಷ್ಟು ಜಿಡಿಪಿ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
*****
(Release ID: 2035547)
Visitor Counter : 134
Read this release in:
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam