ಹಣಕಾಸು ಸಚಿವಾಲಯ
ವಿಶ್ವದ ಅತಿದೊಡ್ಡ ಏಕೀಕೃತ ವಿದ್ಯುತ್ ಗ್ರಿಡ್‌ಗಳಲ್ಲಿ ಭಾರತದ ಪವರ್ ಗ್ರಿಡ್ ಒಂದಾಗಿ ಹೊರಹೊಮ್ಮುತ್ತಿದೆ: ಆರ್ಥಿಕ ಸಮೀಕ್ಷೆ 2023-24
ಅಕ್ಟೋಬರ್ 2017 ರಲ್ಲಿ "ಸೌಭಾಗ್ಯ" ಯೋಜನೆ ಆರಂಭಿಸಿದಾಗಿನಿಂದ 2.86 ಕೋಟಿ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ
ಎನರ್ಜಿ ಮಿಕ್ಸ್‌ನಲ್ಲಿ ನಾನ್-ಫಾಸಿಲ್ ಇಂಧನದ ಕೊಡುಗೆಯನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ
ನವೀಕರಿಸಬಹುದಾದ ಇಂಧನ ವಲಯವು 2024 ಮತ್ತು 2030 ರ ನಡುವೆ ₹30.5 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸುವ ನಿರೀಕ್ಷೆ ಇದೆ
Posted On:
22 JUL 2024 2:23PM by PIB Bengaluru
“ಭಾರತದಲ್ಲಿ ವಿದ್ಯುತ್ ಪ್ರಸರಣವು 1,18,740 ಮೆಗಾವ್ಯಾಟ್‌ಗಳನ್ನು (MW) ವರ್ಗಾಯಿಸುವ ಅಂತರ-ಪ್ರಾದೇಶಿಕ ಸಾಮರ್ಥ್ಯದೊಂದಿಗೆ ಒಂದು ಆವರ್ತನದಲ್ಲಿ ಚಾಲನೆಯಲ್ಲಿರುವ ಒಂದು ಗ್ರಿಡ್‌ಗೆ ಸಂಪರ್ಕ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಏಕೀಕೃತ ವಿದ್ಯುತ್ ಗ್ರಿಡ್‌ಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ” ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2023-24ರಲ್ಲಿ ವಿವರಿಸಲಾಗಿದೆ.
31 ಮಾರ್ಚ್ 2024 ರವರೆಗೆ, ಪ್ರಸರಣ ವ್ಯವಸ್ಥೆಗಳು 4,85,544 ಸರ್ಕೀಟ್ ಕಿಲೋಮೀಟರ್ ಟ್ರಾನ್ಸ್‌ಮಿಷನ್ ಲೈನ್‌ಗಳಿಗೆ ಮತ್ತು 12,51,080 ಮೆಗಾ ವೋಲ್ಟ್ ಆಂಪ್ (ಎಂವಿಎ) ರೂಪಾಂತರ ಸಾಮರ್ಥ್ಯದವರೆಗೆ ವಿಸ್ತರಿಸಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರವು ಈ ಕ್ಷೇತ್ರವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ತನ್ನ ಪ್ರಯತ್ನಗಳಿಗೆ ಹೆಚ್ಚು ಒತ್ತು ನೀಡಿದೆ. ಆರ್ಥಿಕ ವರ್ಷ 2024ರಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯು 243 GW ಗೆ (13 ಪ್ರತಿಶತದಷ್ಟು) ಹೆಚ್ಚಾಗಿದೆ. ಆರ್ಥಿಕ ವರ್ಷ 2023 ಮತ್ತು ಆರ್ಥಿಕ ವರ್ಷ 2024 ರ ನಡುವೆ, ಯುಟಿಲಿಟಿಗಳಿಗಾಗಿ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಗರಿಷ್ಠ ಏರಿಕೆ ದಾಖಲಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.
ಆರ್ಥಿಕ ಸಮೀಕ್ಷೆಯ ಪ್ರಕಾರ, 2017 ರ ಅಕ್ಟೋಬರ್‌ನಲ್ಲಿ "ಸೌಭಾಗ್ಯ" ಯೋಜನೆಯನ್ನು ಪ್ರಾರಂಭಿಸಿದ ನಂತರ ಒಟ್ಟು 2.86 ಕೋಟಿ ಕುಟುಂಬಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇದಲ್ಲದೆ, ವಿದ್ಯುಚ್ಛಕ್ತಿ (ತಡವಾಗಿ ಪಾವತಿಯ ಹೆಚ್ಚುವರಿ ಶುಲ್ಕ ಮತ್ತು ಸಂಬಂಧಿತ ವಿಷಯಗಳು) ನಿಯಮಗಳು, 2022 ರ ಅನುಷ್ಠಾನದಂತೆ DISCOMಗಳು ಮತ್ತು ವಿದ್ಯುತ್ ಗ್ರಾಹಕರು ಮತ್ತು ಉತ್ಪಾದಕ ಕಂಪನಿಗಳಿಗೆ ಪರಿಹಾರವನ್ನು ನೀಡಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ನವೀಕರಿಸಬಹುದಾದ ವಲಯ
ಹವಾಮಾನ ಬದಲಾವಣೆ ಕುರಿತಂತೆ ವಿಶ್ವಸಂಸ್ಥೆಯ ಮಾರ್ಗಸೂಚಿ ಅಡಿಯಲ್ಲಿ ಭಾರತವು 2030 ರ ವೇಳೆಗೆ ನಾನ್-ಫಾಸಿಲ್ ಇಂಧನ-ಆಧಾರಿತ ಇಂಧನ ಸಂಪನ್ಮೂಲಗಳಿಂದ ಸುಮಾರು 50 ಪ್ರತಿಶತ ಸಂಚಿತ ವಿದ್ಯುತ್ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸಲು ಬದ್ಧವಾಗಿದೆ. ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 2030 ರ ವೇಳೆಗೆ ನಾನ್ ಫಾಸಿಲ್ ಮೂಲಗಳಿಂದ ಸ್ಥಾಪಿಸಲಾದ ವಿದ್ಯುತ್ ಸಾಮರ್ಥ್ಯವನ್ನು 500 ಗಿಗಾ ವ್ಯಾಟ್ (GW) ಸಾಧಿಸುವ ನಿಟ್ಟಿನಲ್ಲಿ ಕಾರ್ಯ ರೂಪಿಸಿದೆ.
31 ಮಾರ್ಚ್ 2024 ರಂತೆ, ದೇಶದಲ್ಲಿ ಒಟ್ಟು 190.57 GW ನವೀಕರಿಸಬಹುದಾದ ಇಂಧನ (RE) ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ದೇಶದಲ್ಲಿ ಒಟ್ಟು ಸ್ಥಾಪಿತ ಉತ್ಪಾದನಾ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನ ಪಾಲು ಶೇಕಡಾ 43.12 ರಷ್ಟಿದೆ ಎಂದು ಮಾಹಿತಿ ನೀಡಲಾಗಿದೆ.
ಭಾರತದಲ್ಲಿ ಶುದ್ಧ ಇಂಧನ ಕ್ಷೇತ್ರವು 2014 ಮತ್ತು 2023 ರ ನಡುವೆ ₹ 8.5 ಲಕ್ಷ ಕೋಟಿ ರೂ.ಗಳಷ್ಟು ಹೊಸ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ. ನವೀಕರಿಸಬಹುದಾದ ಇಂಧನ ವಲಯವು 2024 ಮತ್ತು 2030 ರ ನಡುವೆ ಭಾರತದಲ್ಲಿ ಸುಮಾರು ₹ 30.5 ಲಕ್ಷ ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ ಮತ್ತು ಇದು ಮೌಲ್ಯ ಸರಪಳಿಯಾದ್ಯಂತ ಗಮನಾರ್ಹ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರದ ರಾಷ್ಟ್ರೀಯ ವಿದ್ಯುತ್ ಯೋಜನೆಯ ಪ್ರಕಾರ, ನಾನ್ ಫಾಸಿಲ್ ಇಂಧನ (ಜಲ, ಪರಮಾಣು, ಸೌರ, ಗಾಳಿ, ಜೀವರಾಶಿ, ಸಣ್ಣ ಜಲ, ಪಂಪ್ ಶೇಖರಣಾ ಪಂಪ್‌ಗಳು) ಆಧಾರಿತ ಸಾಮರ್ಥ್ಯವು ಸುಮಾರು 203.4 GW (ಶೇ. 46) ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. 2023-24 ರಲ್ಲಿ ಒಟ್ಟು ಸ್ಥಾಪಿತ ಸಾಮರ್ಥ್ಯದ 441.9 GW, 2026-27 ರಲ್ಲಿ 349 GW (57.3%) ಮತ್ತು 2029-30 ರಲ್ಲಿ 500.6 GW (64.4%) ತಲುಪುವ ಸಾಧ್ಯತೆಯಿದೆ.
(Release ID: 2035026)
Visitor Counter : 78
Read this release in:
English
,
Urdu
,
Hindi
,
Hindi_MP
,
Marathi
,
Assamese
,
Punjabi
,
Gujarati
,
Tamil
,
Telugu
,
Malayalam