ಪ್ರಧಾನ ಮಂತ್ರಿಯವರ ಕಛೇರಿ
ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರ 'ಪವರ್ ವಿಥಿನ್: ದಿ ಲೀಡರ್ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ' ಎಂಬ ಪುಸ್ತಕದ ಪ್ರತಿಗೆ ಪ್ರಧಾನಮಂತ್ರಿಯವರಿಂದ ಸಹಿ
ಪ್ರಕಟಣಾ ದಿನಾಂಕ:
17 JUL 2024 8:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ಭೇಟಿ ಮಾಡಿ, ಅವರು ರಚಿಸಿದ 'ಪವರ್ ವಿಥಿನ್: ದಿ ಲೀಡರ್ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ' ಎಂಬ ಪುಸ್ತಕದ ಪ್ರತಿಗೆ ಸಹಿ ಹಾಕಿದರು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಪ್ರಯಾಣವನ್ನು ಸೆರೆಹಿಡಿಯುವ ಪುಸ್ತಕವಾಗಿದ್ದು, ಪಾಶ್ಚಿಮಾತ್ಯ ಮತ್ತು ಭಾರತೀಯ ದೃಷ್ಟಿಕೋನಗಳ ಮೂಲಕ ನರೇಂದ್ರ ಮೋದಿಯವರ ನಾಯಕತ್ವವನ್ನು ವ್ಯಾಖ್ಯಾನಿಸಿ, ಸಾರ್ವಜನಿಕ ಸೇವೆಯ ಜೀವನವನ್ನು ಬಯಸುವ ಎಲ್ಲರಿಗೂ ಮಾರ್ಗಸೂಚಿಯನ್ನು ಒದಗಿಸುತ್ತದೆ.
ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರು Xನಲ್ಲಿ ಮಾಡಿದ ಪೋಸ್ಟ್ ಗೆ ಉತ್ತರಿಸುತ್ತಾ ಪ್ರಧಾನಮಂತ್ರಿಯವರು:
"ಇಂದು ಬೆಳಿಗ್ಗೆ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರನ್ನು ಭೇಟಿಯಾಗಿ, ಅವರ ಪುಸ್ತಕದ ಪ್ರತಿಗೆ ಸಹಿ ಹಾಕಿದ್ದು ಸಂತೋಷದ ಸಂಗತಿಯಾಗಿದೆ. ಅವರ ಭವಿಷ್ಯಕ್ಕೆ ನನ್ನ ಶುಭ ಹಾರೈಕೆಗಳು" ಎಂದು ಟ್ವೀಟ್ ಮಾಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2033989)
ವಿಸಿಟರ್ ಕೌಂಟರ್ : 99
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Hindi_MP
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam