ಪ್ರಧಾನ ಮಂತ್ರಿಯವರ ಕಛೇರಿ

ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಮೋದಿಯವರು  ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದರು

Posted On: 30 JUN 2024 2:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೂರವಾಣಿ ಮೂಲಕ ಮಾತನಾಡಿ, ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಜಯಗಳಿಸಿದ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಅಭಿನಂದಿಸಿದರು. ಪಂದ್ಯಾವಳಿಯಲ್ಲಿ ತಂಡದ ಸದಸ್ಯರು ತೋರಿದ ಅನುಕರಣೀಯ  ಕೌಶಲ್ಯ ಮತ್ತು ಸ್ಪೂರ್ತಿಯನ್ನು ಶ್ರೀ ಮೋದಿಯವರು ಶ್ಲಾಘಿಸಿದರು.

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:

“ಭಾರತೀಯ ಕ್ರಿಕೆಟ್ ತಂಡದವರೊಂದಿಗೆ ಮಾತನಾಡಿದ್ದೇನೆ ಮತ್ತು ಟಿ 20 ವಿಶ್ವಕಪ್ನಲ್ಲಿ ಅವರ ಅಸಾಮಾನ್ಯ ಯಶಸ್ಸಿಗೆ ಅವರನ್ನು ಅಭಿನಂದಿಸಿದೆ. ಪಂದ್ಯಾವಳಿಯುದ್ದಕ್ಕೂ ಅವರು ಉತ್ತಮ ಕೌಶಲ್ಯ ಮತ್ತು ಉತ್ಸಾಹವನ್ನು ತೋರಿಸಿದ್ದಾರೆ. ಪ್ರತಿಯೊಬ್ಬ ಆಟಗಾರನ ಬದ್ಧತೆ ತುಂಬಾ ಸ್ಪೂರ್ತಿದಾಯಕವಾಗಿದೆ.

 

ತಂಡದ ನಾಯಕರಾದ ರೋಹಿತ್ ಶರ್ಮಾ, ಹಿರಿಯ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮತ್ತು ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಪ್ರಧಾನಮಂತ್ರಿಯವರು ಪ್ರತ್ಯೇಕವಾಗಿ ಬರೆದಿದ್ದು ಅವರ ಅತ್ಯುತ್ತಮ ಪ್ರದರ್ಶನ ಮತ್ತು ಅಚಲ ಬದ್ಧತೆಗಾಗಿ ಶ್ಲಾಘಿಸಿದ್ದಾರೆ.
 
“ಆತ್ಮೀಯ @ImRo45,

ನೀವು ಶ್ರೇಷ್ಠ ವ್ಯಕ್ತಿಯಾಗಿದ್ದೀರಿ. ನಿಮ್ಮ ಆಕ್ರಮಣಕಾರಿ ಮನಸ್ಥಿತಿ, ಬ್ಯಾಟಿಂಗ್ ಮತ್ತು ನಾಯಕತ್ವವು ಭಾರತ ತಂಡಕ್ಕೆ ಹೊಸ ಆಯಾಮವನ್ನು ನೀಡಿದೆ. ನಿಮ್ಮ ಟಿ20 ವೃತ್ತಿಜೀವನವು ಪ್ರೀತಿಯಿಂದ ನೆನಪಿನಲ್ಲಿ ಉಳಿಯುತ್ತದೆ. ಇಂದು ನಿಮ್ಮೊಂದಿಗೆ ಮಾತನಾಡಿದ್ದಕ್ಕಾಗಿ ಸಂತೋಷವಾಗಿದೆ. ”

 

“ಆತ್ಮೀಯ @imVkohli,

ನಿಮ್ಮೊಂದಿಗೆ ಮಾತನಾಡಿದ್ದಕ್ಕೆ ಖುಷಿಯಾಗಿದೆ. ಫೈನಲ್ನಲ್ಲಿನ ಇನ್ನಿಂಗ್ಸ್ನಂತೆ, ನೀವು ಭಾರತದ ಬ್ಯಾಟಿಂಗ್ ಅನ್ನು ಅದ್ಭುತವಾಗಿ ನಿಭಾಯಿಸಿದ್ದೀರಿ. ನೀವು ಎಲ್ಲಾ  ಮಾದರಿಯ ಆಟದಲ್ಲೂ ಮಿಂಚಿದ್ದೀರಿ.  ಟಿ 20 ಕ್ರಿಕೆಟಿಗೆ ಮುಂದೆ ನಿಮ್ಮ ಅನುಪಸ್ಥಿತಿಯ ಪ್ರಭಾವವಿರುತ್ತದೆ  ಆದರೆ ನೀವು ಹೊಸ ಪೀಳಿಗೆಯ ಆಟಗಾರರನ್ನು ಪ್ರೇರೇಪಿಸುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ.”

 

“ರಾಹುಲ್ ದ್ರಾವಿಡ್ ಅವರ ಅದ್ಭುತ ಕೋಚಿಂಗ್ ಪ್ರಯಾಣವು ಭಾರತದ ಕ್ರಿಕೆಟ್ನ ಯಶಸ್ಸನ್ನು ರೂಪಿಸಿದೆ.

ಅವರ ಅಚಲ ಬದ್ಧತೆ, ಕಾರ್ಯತಂತ್ರದ ಒಳನೋಟಗಳು ಮತ್ತು ಸರಿಯಾದ ಪ್ರತಿಭೆಯನ್ನು ಪೋಷಿಸುವುದು ತಂಡದಲ್ಲಿ  ಉತ್ತಮ ಬದಲಾವಣೆ ತಂದಿದೆ.

ಅವರ ಕೊಡುಗೆಗಳಿಗಾಗಿ ಮತ್ತು ಪೀಳಿಗೆಗೆ ಸ್ಫೂರ್ತಿ ನೀಡುವುದಕ್ಕಾಗಿ ಭಾರತ ಅವರಿಗೆ  ಋಣಿಯಾಗಿದೆ. ಅವರು ವಿಶ್ವಕಪ್ ಎತ್ತಿ ಹಿಡಿದಿದ್ದು ನಮಗೆ ಖುಷಿ ತಂದಿದೆ. ಅವರನ್ನು ಅಭಿನಂದಿಸಿದ್ದಕ್ಕಾಗಿ ಸಂತೋಷವಾಗಿದೆ. ”

 


*****



(Release ID: 2029817) Visitor Counter : 5