ಪ್ರಧಾನ ಮಂತ್ರಿಯವರ ಕಛೇರಿ

ಹುಲ್‌ ದಿವಸ್‌ ಅಂಗವಾಗಿ ಪ್ರಧಾನಮಂತ್ರಿ ಅವರಿಂದ ಬುಡಕಟ್ಟು ವೀರರಿಗೆ ಗೌರವ ನಮನ 

Posted On: 30 JUN 2024 2:32PM by PIB Bengaluru

ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅವರು ಬ್ರಿಟಿಷ್‌ ಸಾಮ್ರಾಜ್ಯದ ದೌರ್ಜನ್ಯದ ವಿರುದ್ಧ ಸ್ವಾಭಿಮಾನ ಮತ್ತು ಧೈರ್ಯದಿಂದ ಹೋರಾಡಿ ಸಿಧು-ಕನ್ಹು, ಚಂದ್-ಭೈರವ್ ಮತ್ತು ಫೂಲೋ-ಝಾನೋರಂತಹ ಬುಡಕಟ್ಟು ವೀರರಿಗೆ ಗೌರವ ನಮನ ಸಲ್ಲಿಸಿದ್ದಾರೆ. ನಮ್ಮ ಬುಡಕಟ್ಟು ಸಮುದಾಯದ ಅನನ್ಯ ಶೌರ್ಯ, ಹೋರಾಟ ಮತ್ತು ತ್ಯಾಗಗಳಿಗೆ ಅರ್ಪಣೆಯಾಗಿರುವ ವಿಶೇಷ ಸಂದರ್ಭ ಹುಲ್‌ ದಿವಸ್‌ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್‌ ಪೋಸ್ಟ್‌ ಹೀಗಿದೆ:

“ಹೂಲ್‌ ದಿವಸ್‌, ನಮ್ಮ ಆದಿವಾಸಿ ಸಮುದಾಯದ ಅಪ್ರತಿಮ ಸಾಹಸ, ಸಂಘರ್ಷ ಮತ್ತು ಬಲಿದಾನಕ್ಕೆ ಸಮರ್ಪಿತವಾಗಿರುವ ಮಹತ್ವದ ದಿನವಾಗಿದೆ. ಈ ಶುಭ ದಿನದಂದು ಸಿದ್ಧೋ-ಕಾನ್ಹೂ, ಚಾಂದ್‌- ಭೈರವ್‌ ಮತ್ತು ಫೂಲೋ=ಝಾನೋರಂತಹ ಜಂಜಾತೀಯ ವೀರರು-ವೀರವನಿತೆಯರಿಗೆ ನನ್ನ ಗೌರವಪೂರ್ವಕ ನಮನಗಳು. ಬ್ರಿಟಿಷ್‌ ಸಾಮ್ರಾಜ್ಯದ ದೌರ್ಜ್ಯನ್ಯಗಳ ವಿರುದ್ಧ ಸ್ವಾಭಿಮಾನ ಮತ್ತು ಶೌರ್ಯದಿಂದ ಹೋರಾಡಿದ ಅವರ ಯಶೋಗಾಥೆ ದೇಶವಾಸಿಗಳಿಗೆ ಸದಾ ಪ್ರೇರಣಾದಾಯಕವಾಗಿರಲಿದೆ.”

 

 

*****



(Release ID: 2029816) Visitor Counter : 4