ಪ್ರಧಾನ ಮಂತ್ರಿಯವರ ಕಛೇರಿ

ಕ್ರಿಕೆಟ್ ಕ್ಷೇತ್ರಕ್ಕೆ ರವೀಂದ್ರ ಜಡೇಜಾ ಅವರ ಕೊಡುಗೆಯನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ

Posted On: 30 JUN 2024 7:14PM by PIB Bengaluru

ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಹಲವು ವರ್ಷಗಳಿಂದ ಕ್ರಿಕೆಟ್ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ತೋರಿದ ಸಾಧನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಶಂಸಿಸಿದ್ದಾರೆ. 

ತಮ್ಮ ವೃತ್ತಿಜೀವನದಲ್ಲಿ ತೋರಿದ ಆಕರ್ಷಕ T-20 ಪ್ರದರ್ಶನಗಳಿಗಾಗಿ ಶ್ರೀ ಮೋದಿಯವರು ಅವರನ್ನು ಶ್ಲಾಘಿಸಿದ್ದಾರೆ. 

ಆಲ್ರೌಂಡರ್ ರವೀಂದ್ರ ಜಡೇಜಾ ಅವರು T-20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ. 

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ: 

"ಪ್ರಿಯ @imjadeja,

ಆಲ್ರೌಂಡರ್ ಆಗಿ ನೀವು ಕ್ರಿಕೆಟ್ ಆಟದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದೀರಿ. ಕ್ರಿಕೆಟ್ ಪ್ರೇಮಿಗಳು ನಿಮ್ಮ ಸ್ಟೈಲಿಶ್ ಸ್ಟ್ರೋಕ್, ಸ್ಪಿನ್ ಮತ್ತು ಅದ್ಭುತ ಫೀಲ್ಡಿಂಗ್ ಅನ್ನು ಮೆಚ್ಚಿದ್ದಾರೆ. ಹಲವು ವರ್ಷಗಳಲ್ಲಿ ನೀವು ತೋರಿದ ಅದ್ಭುತ T-20 ಪ್ರದರ್ಶನಕ್ಕಾಗಿ ಧನ್ಯವಾದಗಳು. ನಿಮ್ಮ ಮುಂದಿನ ಜೀವನಕ್ಕೆ ನನ್ನ ಶುಭ ಹಾರೈಕೆಗಳು" ಎಂದು ಟ್ವೀಟ್ ಮಾಡಿದ್ದಾರೆ".

 

 

*****



(Release ID: 2029813) Visitor Counter : 9