ಪ್ರಧಾನ ಮಂತ್ರಿಯವರ ಕಛೇರಿ

ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ರವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ತೀವ್ರ ಸಂತಾಪ ಸೂಚನೆ

Posted On: 22 JUN 2024 2:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭ ಮತ್ತು ಕಾಶಿ ವಿಶ್ವನಾಥ ಧಾಮದ ಸಮರ್ಪಣೆಯ ಭಾಗವಾಗಿದ್ದ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಶ್ರೀ ನರೇಂದ್ರ ಮೋದಿಯವರು ಆಚಾರ್ಯರನ್ನು 'ಕಾಶಿ ವಿದ್ವಾಂಸ ಪರಂಪರೆಯ ಪ್ರಸಿದ್ಧ ವ್ಯಕ್ತಿ' ಎಂದಿದ್ದಾರೆ. 

ಪ್ರಧಾನಮಂತ್ರಿಯವರು X ನಲ್ಲಿ;

"ದೇಶದ ಅಗ್ರಗಣ್ಯ ವಿದ್ವಾಂಸರಲ್ಲಿ ಒಬ್ಬರು ಮತ್ತು ಸಂವೇದ ವಿಧ್ಯಾಲಯದ ಯಜುರ್ವೇದ ಶಿಕ್ಷಕರಾದ ಲಕ್ಷ್ಮಿಕಾಂತ್ ದೀಕ್ಷಿತ್ ಅವರ ನಿಧನದ ದುಃಖದ ಸುದ್ದಿ ನನಗೆ ತಿಳಿಯಿತು. ದೀಕ್ಷಿತ್ ಜೀ ಅವರು ಕಾಶಿಯ ವಿದ್ವಾಂಸ ಪರಂಪರೆಯ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಕಾಶಿ ವಿಶ್ವನಾಥ ಧಾಮ ಮತ್ತು ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ನಾನು ಅವರ ಉಪಸ್ಥಿತಿಯಲ್ಲಿದ್ದೆ. ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.

 

 

*****



(Release ID: 2028007) Visitor Counter : 19