ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕುಡುಗೋಲು ರಕ್ತಕೋಶ ರೋಗವನ್ನು ಜಯಿಸಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ: ಪ್ರಧಾನಿ

प्रविष्टि तिथि: 19 JUN 2024 12:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶ್ವ ಕುಡಗೋಲು ಕೋಶ ದಿನದಂದು ತಮ್ಮ ಸರ್ಕಾರವು ಈ ರೋಗವನ್ನು ನಿವಾರಿಸಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. 

ರಾಷ್ಟ್ರೀಯ ಕುಡಗೋಲು ಕೋಶ ರಕ್ತಹೀನತೆ ನಿರ್ಮೂಲನೆ ಯೋಜನೆ ಕುರಿತು ಪ್ರಸ್ತಾಪಿಸಿದ ಅವರು, ಈ ಅನುವಂಶಿಕ ರಕ್ತದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಇತರ ಅಂಶಗಳ ವಿಚಾರವಾಗಿಯೂ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. 

ಪ್ರಧಾನ ಮಂತ್ರಿಯವರು ಎಕ್ಸ್ ವೇದಿಕೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

"ವಿಶ್ವ ಕುಡಗೋಲು ಕೋಶ ದಿನದಂದು, ಈ ರೋಗವನ್ನು ಜಯಿಸಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಕಳೆದ ವರ್ಷ, ನಾವು ರಾಷ್ಟ್ರೀಯ ಕುಡಗೋಲು ಕೋಶ ರಕ್ತಹೀನತೆ ನಿರ್ಮೂಲನೆ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಜೊತೆಗೆ, ಜಾಗೃತಿ ಮೂಡಿಸುವುದು, ಸಾರ್ವತ್ರಿಕ ತಪಾಸಣೆ, ಆರಂಭಿಕ ಪತ್ತೆ ಮತ್ತು ಸರಿಯಾದ ಆರೈಕೆಯಂತಹ ಅಂಶಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ವಿಷಯದಲ್ಲಿ ತಂತ್ರಜ್ಞಾನದ ಶಕ್ತಿಯನ್ನು ಸಹ ಬಳಸಿಕೊಳ್ಳಲಾಗುತ್ತಿದೆ."

 

 

*****

 


(रिलीज़ आईडी: 2026935) आगंतुक पटल : 84
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Hindi_MP , Manipuri , Bengali , Punjabi , Gujarati , Odia , Tamil , Telugu , Malayalam