ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆ


ವಿಶೇಷವಾಗಿ ನಿರ್ಣಾಯಕ ಮತ್ತು ಹೊರಹೊಮ್ಮುತ್ತಿರುವ ತಂತ್ರಜ್ಞಾನ ಉಪಕ್ರಮ (ಐಸಿಇಟಿ)ದಡಿ ದ್ವಿಪಕ್ಷೀಯ ಸಹಕಾರ ಪ್ರಗತಿ ಕುರಿತಂತೆ ಪ್ರಧಾನಿ ಅವರಿಗೆ ಸಲಹೆಗಾರರ ಜೇಕ್ ಸಲಾವನ್ ಅವರಿಂದ ಸಂಕ್ಷಿಪ್ತ ಮಾಹಿತಿ

ಹೊಸ ಆಡಳಿತಾವಧಿಯಲ್ಲಿ ಭಾರತ – ಅಮೆರಿಕ ಸಮಗ್ರ ಜಾಗತಿಕ ತಾಂತ್ರಿಕ ಪಾಲುದಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಬದ್ಧತೆ ಪುನರುಚ್ಚರಿಸಿದ ಪ್ರಧಾನಿ

Posted On: 17 JUN 2024 7:35PM by PIB Bengaluru

ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (ಎನ್‌ ಎಸ್ ಎ) ಶ್ರೀ.ಜೇಕ್‌ ಸಲಾವನ್ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು.

ಎನ್ ಎಸ್‌ ಎ ಸಲಾವನ್‌ ಅವರು, ವಿವಿಧ ವಲಯಗಳಲ್ಲಿನ ದ್ವಿಪಕ್ಷೀಯ ಸಹಕಾರದ ಪ್ರಗತಿಯ ಬಗ್ಗೆ ಅದರಲ್ಲೂ ಸೆಮಿಕಂಡಕ್ಟರ್‌, ಕೃತಕ ಬುದ್ಧಿಮತ್ತೆ, ದೂರಸಂಪರ್ಕ, ರಕ್ಷಣೆ, ನಿರ್ಣಾಯಕ ಖನಿಜಗಳು, ಬಾಹ್ಯಾಕಾಶ ಮೊದಲಾದ ವಲಯಗಳಲ್ಲಿನ ನಿರ್ಣಾಯಕ ಮತ್ತು ಹೊರಹೊಮ್ಮುತ್ತಿರುವ ತಂತ್ರಜ್ಞಾನಗಳ ಉಪಕ್ರಮ (ಐಸಿಇಟಿ) ಬಗ್ಗೆ ಪ್ರಧಾನಮಂತ್ರಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಿದರು. 

ಎಲ್ಲಾ ವಲಯಗಳಲ್ಲಿನ ದ್ವಿಪಕ್ಷೀಯ ಪಾಲುದಾರಿಕೆಯು ಪ್ರಗತಿ ಹೊಂದುತ್ತಿರುವ ವೇಗ ಮತ್ತು ಪ್ರಮಾಣದ ಬಗ್ಗೆ ಹಾಗೂ ಉಭಯ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ  ಕುರಿತಂತೆ ಸಮಾನ ಅಭಿಪ್ರಾಯಗಳ ಬಗ್ಗೆ ಪ್ರಧಾನಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. 

ಜಿ7 ಶೃಂಗಸಭೆಯಲ್ಲಿ ಅಧ್ಯಕ್ಷ ಬೈಡೆನ್‌ ಅವರೊಂದಿಗೆ ಸಕಾರಾತ್ಮಕ ಮಾತುಕತೆಯನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ನೆನಪು ಮಾಡಿಕೊಂಡರು. ಜಾಗತಿಕ ಒಳಿತಿಗಾಗಿ ಹೊಸ ಆಡಳಿತಾವಧಿಯಲ್ಲಿ ಪಾಲುದಾರಿಕೆಯನ್ನು ಇನ್ನಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಮಗ್ರ ಜಾಗತಿಕ ತಾಂತ್ರಿಕ ಪಾಲುದಾರಿಕೆಯನ್ನು ಬಲಪಡಿಸುವ ಬದ್ಧತೆಯನ್ನು ಮುಂದುವರಿಸುವುದಾಗಿ ಪ್ರಧಾನಮಂತ್ರಿ ಪುನರುಚ್ಚರಿಸಿದರು.



(Release ID: 2026343) Visitor Counter : 22