ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿ 7 ಅಪುಲಿಯಾ ಶೃಂಗಸಭೆಗಾಗಿ ಇಟಲಿಗೆ ತೆರಳುವ ಮುನ್ನ ಪ್ರಧಾನಮಂತ್ರಿಯವರ ಹೇಳಿಕೆ

Posted On: 13 JUN 2024 5:36PM by PIB Bengaluru

ಪ್ರಧಾನಮಂತ್ರಿ ಜಿಯೋರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ನಾನು 2024ರ ಜೂನ್ 14ರಂದು ನಡೆಯಲಿರುವ ಜಿ7 ಔಟ್ರೀಚ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಯ ಅಪುಲಿಯಾ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದೇನೆ.

ಜಿ-7 ಶೃಂಗಸಭೆಗಾಗಿ ಸತತ ಮೂರನೇ ಅವಧಿಯಲ್ಲಿ ನನ್ನ ಮೊದಲ ಭೇಟಿ ಇಟಲಿಗೆ ಆಗಿರುವುದು  ನನಗೆ ಸಂತೋಷ ತಂದಿದೆ. 2021 ರಲ್ಲಿ ಜಿ 20 ಶೃಂಗಸಭೆಗಾಗಿ ಇಟೆಲಿಗೆ ಭೇಟಿ ನೀಡಿದ್ದನ್ನು ನಾನು ಆತ್ಮೀಯವಾಗಿ ನೆನಪಿಸಿಕೊಳ್ಳುತ್ತೇನೆ. ಕಳೆದ ವರ್ಷ ಪ್ರಧಾನಿ ಮೆಲೋನಿ ಅವರ ಭಾರತದ ಎರಡು ಭೇಟಿಗಳು ನಮ್ಮ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿ ವೇಗ ಮತ್ತು ತೀವ್ರತೆ/ಆಳವನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭಾರತ-ಇಟಲಿ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಇಂಡೋ-ಪೆಸಿಫಿಕ್ ಹಾಗು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. 

ಔಟ್ರೀಚ್ ಅಧಿವೇಶನದ ಚರ್ಚೆಗಳ ಸಮಯದಲ್ಲಿ, ಕೃತಕ ಬುದ್ಧಿಮತ್ತೆ, ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಮೇಲೆ ಗಮನ ಹರಿಸಲಾಗುವುದು. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗಸಭೆ ಮತ್ತು ಮುಂಬರುವ ಜಿ 7 ಶೃಂಗಸಭೆಯ ಫಲಿತಾಂಶಗಳ ನಡುವೆ ಹೆಚ್ಚಿನ ಸಂಯೋಜನೆಯನ್ನು ತರಲು ಮತ್ತು ಜಾಗತಿಕ ದಕ್ಷಿಣಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಬಗ್ಗೆ ಚರ್ಚಿಸಲು ಇದು ಒಂದು ಅವಕಾಶವಾಗಿದೆ.

ಶೃಂಗಸಭೆಯಲ್ಲಿ ಭಾಗವಹಿಸುವ ಇತರ ನಾಯಕರನ್ನು ಭೇಟಿ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ.

*****
 


(Release ID: 2025276) Visitor Counter : 75