ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಪ್ರಧಾನಮಂತ್ರಿಯಾಗಿ ಮೂರನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಶ್ರೀ ನರೇಂದ್ರ ಮೋದಿ ಅವರಿಗೆ ವಿಶ್ವ ನಾಯಕರುಗಳಿಂದ ಶುಭ ಹಾರೈಕೆಗಳ ಮುಂದುವರಿಕೆ


ಅಭಿನಂದನಾ ಸಂದೇಶ ತಿಳಿಸಿದ ವಿಶ್ವನಾಯಕರಿಗೆ ಪ್ರಧಾನಿ ಧನ್ಯವಾದ

Posted On: 11 JUN 2024 5:47PM by PIB Bengaluru

ಭಾರತದ ಪ್ರಧಾನಮಂತ್ರಿಯಾಗಿ ಮೂರನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಶ್ರೀ ನರೇಂದ್ರ ಮೋದಿ ವಿಶ್ವ ನಾಯಕರ ಅಭಿನಂದನಾ ಸಂದೇಶಗಳಿಗೆ ಧನ್ಯವಾದ ತಿಳಿಸಿದ್ದಾರೆ. ಶ್ರೀ ಮೋದಿ ಅವರಿಗೆ ವಿಶ್ವ ನಾಯಕರು ಸಂದೇಶಗಳು ಮತ್ತು ದೂರವಾಣಿ ಕರೆ ಮೂಲಕ ಅಭಿನಂದನೆ ತಿಳಿಸಿದ್ದು, ಪ್ರಧಾನಮಂತ್ರಿಗಳು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕ್ಯೂಬಾ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಮಿಗುಯೆಲ್ ಡಿಯಾಜ್ ಕೆನಲ್ ಬರ್ಮುಡೆಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿಗಳು:

“ಅಧ್ಯಕ್ಷ ಡಿಯಾಜ್ – ಕೆನಲ್, ನಿಮ್ಮ ಶುಭ ಹಾರೈಕೆಗಳಿಗೆ ಕೃತಜ್ಞನಾಗಿದ್ದೇನೆ.
ಜನರನ್ನು ಜನರೊಂದಿಗೆ ಸಂಪರ್ಕಿಸುವ ಅನೇಕ ವರ್ಷಗಳಿಂದ ಬೇರೂರಿರುವ ಕ್ಯೂಬಾದೊಂದಿಗಿನ ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸಲು ನಾವು ಬದ್ಧರಾಗಿರಲಿದ್ದೇವೆ” ಎಂದು ಹೇಳಿದ್ದಾರೆ.

 

ಪರಾಗ್ವೆ ಅಧ್ಯಕ್ಷ ಶ್ರೀ ಸ್ಯಾಂಟಿಯಾಗೋ ಪೆನಾ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿಗಳು:

“ನಿಮ್ಮ ಶುಭ ಹಾರೈಕೆಗಳಿಗೆ ಪ್ರತಿಕ್ರಿಯೆ ನೀಡುತ್ತಾ, ನಮ್ಮ ಜನರ ಅನುಕೂಲಕ್ಕಾಗಿ ಭಾರತ-ಪರಾಗ್ವೆ ಬಾಂಧವ್ಯಗಳನ್ನು ವೃದ್ಧಿಸಲು ನಾವು ಮುಂದುವರಿಯುತ್ತೇವೆ” ಎಂದಿದ್ದಾರೆ.

 

ಪನಾಮಾ ಅಧ್ಯಕ್ಷ ಶ್ರೀ. ಲಾರೆಂಟಿನೋ ಕಾರ್ಟಿಜೋ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುತ್ತಾ, ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ :

“ಅಧ್ಯಕ್ಷ ಕಾರ್ಟಿಜೋರವರೇ ನಿಮಗೆ ಧನ್ಯವಾದ. ಪನಾಮಾ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಎಲ್ಲಾ ಆಯಾಮಗಳಲ್ಲೂ ನಮ್ಮ ಪರಸ್ಪರ ಹಿತಾಸಕ್ತಿಯ ಪಾಲುದಾರಿಕೆ ಬಲವರ್ಧನೆಗೆ ನಾವು ಒಟ್ಟಾಗಿ ಶ್ರಮಿಸೋಣ” ಎಂದಿದ್ದಾರೆ.

 

ಬಲ್ಗೇರಿಯಾ ಅಧ್ಯಕ್ಷ ಶ್ರೀ‌ ರುಮೆನ್ ರಾದೇವ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡುತ್ತಾ, ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ:

“ಅಧ್ಯಕ್ಷ ರುಮೆನ್ ರಾದೇವ್ ಅವರಿಗೆ ಧನ್ಯವಾದ. ಭಾರತ ಮತ್ತು ಬಲ್ಗೇರಿಯಾ ನಡುವಣ ಪಾಲುದಾರಿಕೆಯನ್ನು ಇನ್ನಷ್ಟು ಆಳವಾಗಿಸಲು ನಾವು ಕಾರ್ಯನಿರ್ವಹಿಸಲು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.

 

ಒಮನ್ ದೊರೆ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರೊಂದಿಗಿನ ದೂರವಾಣಿ ಮೂಲಕ ಮಾತನಾಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಮಂತ್ರಿಗಳು :

“ಒಮನ್ ದೊರೆ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ಕರೆಗೆ ಧನ್ಯವಾದ. ಅವರ ಆತ್ಮೀಯ ಅಭಿನಂದನೆ ಮತ್ತು ಸ್ನೇಹದ ಮಾತುಗಳು ಮನಮುಟ್ಟಿದೆ. ಶತಮಾನಗಳಷ್ಟು ಹಳೆಯದಾದ
ಭಾರತ-ಒಮನ್ ತಾಂತ್ರಿಕ ಬಂಧಗಳು ಹೊಸ ಎತ್ತರಕ್ಕೇರಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

*****

 



(Release ID: 2025019) Visitor Counter : 18