ಹಣಕಾಸು ಸಚಿವಾಲಯ

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡರು



ಸರ್ಕಾರವು ತನ್ನ ನಾಗರಿಕರಿಗೆ 'ಸುಗಮ ಜೀವನ'ವನ್ನು ಖಚಿತಪಡಿಸಲು ಸಂಪೂರ್ಣ ಬದ್ಧವಾಗಿದೆ ಮತ್ತು ಈ ದಿಕ್ಕಿನಲ್ಲಿ ಕ್ರಮಗಳನ್ನು ಮುಂದುವರಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು

Posted On: 12 JUN 2024 10:14AM by PIB Bengaluru

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

 

ಶ್ರೀಮತಿ ಸೀತಾರಾಮನ್ ಅವರನ್ನು ಹಣಕಾಸು ಕಾರ್ಯದರ್ಶಿ ಡಾ. ಟಿ ವಿ ಸೋಮನಾಥನ್ ಮತ್ತು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಇತರ ಕಾರ್ಯದರ್ಶಿಗಳು ನಾರ್ತ್ ಬ್ಲಾಕ್‌ ನಲ್ಲಿರುವ ಕಚೇರಿಯಲ್ಲಿ ಅಭಿನಂದಿಸಿದರು.

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಮತ್ತೊಮ್ಮೆ ಕೆಲಸ ಮಾಡಲು ಮತ್ತು ತಮ್ಮ ಮಾರ್ಗದರ್ಶನದಲ್ಲಿ ಭಾರತ ಮತ್ತು ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸಚಿವರು ತಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಕಳೆದ 10 ವರ್ಷಗಳಲ್ಲಿ ಬಲವಾದ ನಾಯಕತ್ವ ಮತ್ತು ಅಭಿವೃದ್ಧಿ ಆಧಾರಿತ ಆಡಳಿತವನ್ನು ಶ್ಲಾಘಿಸಿದ ಶ್ರೀಮತಿ ಸೀತಾರಾಮನ್, ಇದು ವಿವಿಧ ಕ್ಷೇತ್ರಗಳಲ್ಲಿ ಪರಿವರ್ತಕ ಬದಲಾವಣೆಗಳನ್ನು ತಂದಿದೆ ಮತ್ತು ದೃಢವಾದ ಮತ್ತು ಚೇತರಿಕೆಯ ಆರ್ಥಿಕತೆಯನ್ನು ಸೃಷ್ಟಿಸಿದೆ ಎಂದರು.

ಅಧಿಕಾರ ವಹಿಸಿಕೊಂಡ ನಂತರ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಕೇಂದ್ರ ಸಚಿವರಿಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಪ್ರಸ್ತುತ ನೀತಿ ಸಮಸ್ಯೆಗಳನ್ನು ಕುರಿತು ವಿವರಿಸಿದರು.

ಸರ್ಕಾರವು ತನ್ನ ನಾಗರಿಕರಿಗೆ 'ಸುಗಮ ಜೀವನ'ವನ್ನು ಖಾತ್ರಿಪಡಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ಈ ನಿಟ್ಟಿನಲ್ಲಿ ಕ್ರಮಗಳನ್ನು ಮುಂದುವರಿಸುತ್ತದೆ ಎಂದು ಸಚಿವರು ಹೇಳಿದರು.

2014 ರಿಂದ ಕೈಗೊಂಡ ಸುಧಾರಣೆಗಳು ಮುಂದುವರಿಯುತ್ತವೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು, ಇದು ಭಾರತಕ್ಕೆ ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ಮತ್ತಷ್ಟು ಒದಗಿಸುತ್ತದೆ ಎಂದರು. ಜಾಗತಿಕ ಸವಾಲುಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಶ್ಲಾಘನೀಯ ಬೆಳವಣಿಗೆಯ ಕಥೆಯನ್ನು ಅವರು ಎತ್ತಿ ತೋರಿಸಿದರು ಮತ್ತು ಮುಂಬರುವ ವರ್ಷಗಳಲ್ಲಿ ಆಶಾವಾದಿ ಆರ್ಥಿಕ ನೋಟವಿದೆ ಎಂದು ಹೇಳಿದರು.

ಎನ್‌ ಡಿ ಎ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಯನ್ನು ಹೊಸ ಹುರುಪಿನಿಂದ ಮುನ್ನಡೆಸುವಂತೆ ಮತ್ತು ಪ್ರಧಾನಮಂತ್ರಿಯವರ ‘ವಿಕಸಿತ ಭಾರತ’ದ ದೃಷ್ಟಿಕೋನವನ್ನು ಸಾಧಿಸಲು ಸ್ಪಂದಿಸುವ ನೀತಿ ನಿರೂಪಣೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಇಲಾಖೆಗಳಿಗೆ ಕರೆ ನೀಡಿದರು.

ಸರ್ಕಾರವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ನಲ್ಲಿ ನಂಬಿಕೆ ಇಟ್ಟಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. ಬಲವಾದ ಮತ್ತು ರೋಮಾಂಚಕ ಆರ್ಥಿಕತೆಯನ್ನು ಖಚಿತಪಡಿಸಿಕೊಳ್ಳಲು ಉದ್ಯಮದ ನಾಯಕರು, ನಿಯಂತ್ರಕರು ಮತ್ತು ನಾಗರಿಕರು ಸೇರಿದಂತೆ ಎಲ್ಲಾ ಭಾಗೀದಾರರ ನಿರಂತರ ಬೆಂಬಲ ಮತ್ತು ಸಹಕಾರಕ್ಕೆ ಸಚಿವರು ಕರೆ ನೀಡಿದರು.

*****



(Release ID: 2024654) Visitor Counter : 46