ನೌಕಾ ಸಚಿವಾಲಯ

ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವರಾಗಿ ಶ್ರೀ ಸರ್ಬಾನಂದ ಸೋನೋವಾಲ್ ಪ್ರದಗ್ರಹಣ


2047 ರ ಅಮೃತ ಕಾಲದ ದೃಷ್ಟಿಕೋನಕ್ಕೆ ಅನುಗುಣವಾಗಿ ಎಂಒಪಿಎಸ್ ಡಬ್ಲ್ಯು ಸಾಗರ ವಲಯವನ್ನು ಸಮಗ್ರವಾಗಿ ಸಶಕ್ತಗೊಳಿಸುವತ್ತ ತನ್ನ ಕೆಲಸ ಮುಂದುವರೆಸಲಿದೆ : ಸರ್ಬಾನಂದ ಸೋನೋವಾಲ್

“ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶ ಮೊದಲು ಚಿಂತನೆಯ ಮಾರ್ಗದರ್ಶನದಡಿ ಕೆಲಸ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಜನರಿಂದ ಮತ್ತೊಮ್ಮೆ ನಂಬಿಕೆ ವ್ಯಕ್ತವಾಗಿದೆ”: ಸರ್ಬಾನಂದ್ ಸೋನೋವಾಲ್

Posted On: 11 JUN 2024 6:30AM by PIB Bengaluru

ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವರಾಗಿ ಶ್ರೀ ಸರ್ಬಾನಂದ್ ಸೋನೋವಾಲ್ ಅವರು ನವದೆಹಲಿಯಲ್ಲಿ ಜೂನ್ 10 ರಂದು ಪದಗ್ರಹಣ ಮಾಡಿದರು. ನಂತರ ಸಿಬ್ಬಂದಿ ಮತ್ತು ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಿಗೆ ಸೇವೆ ಸಲ್ಲಿಸುವ ದ್ಯೇಯ ಮತ್ತು ಗುರಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ತಂಡದಲ್ಲಿ ವಿಶ್ವಾಸ ಮೂಡಿಸಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಈ ದೇಶಕ್ಕೆ ಸೇವೆ ಸಲ್ಲಿಸುವ ಬದ್ಧತೆ ಸಂಪೂರ್ಣವಾಗಿರುತ್ತದೆ. ಈ ನಿಟ್ಟಿನಲ್ಲಿ ತಮ್ಮ ಉತ್ತಮ ಕೆಲಸಗಳನ್ನು ಮುಂದುವರೆಸುವಂತೆ ತಮ್ಮ ತಂಡಕ್ಕೆ ಅವರು ಕರೆ ನೀಡಿದರು. 

 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸರ್ಬಾನಂದ ಸೋನೋವಾಲ್, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಬಂದರು, ಹಡಗು ಮತ್ತು ಜಲ ಮಾರ್ಗಗಳ ಸಚಿವಾಲಯವು ತನ್ನ ಪ್ರಯತ್ನದಲ್ಲಿ ಸಾಗರ ವಲಯವನ್ನು ಸಶಕ್ತಗೊಳಿಸಬೇಕು ಮತ್ತು ಅದರ ಸಮಗ್ರ ಅಭಿವೃದ್ಧಿಗೆ ಕೆಲವು ಅದ್ಭುತ ಕೆಲಸಗಳನ್ನು ಮಾಡುತ್ತಿದ್ದು, ದೇಶ ಆರ್ಥಿಕ ಶಕ್ತಿ ಕೇಂದ್ರವಾಗುಗತ್ತಿದೆ. ಅಂತಿಮವಾಗಿ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸುವ ನಿಟ್ಟಿನಲ್ಲಿ ದೇಶ ಮೊದಲು ಎಂಬ ಪರಿಕಲ್ಪನೆಯಡಿ ರಾಷ್ಟ್ರ ನಿರ್ಮಾಣದ ಕಾರಣಕ್ಕಾಗಿ ನಾವೆಲ್ಲರೂ ಬದ್ಧತೆಯಿಂದ ಕಾರ್ಯನಿರ್ವಹಿಸುವುದನ್ನು ಮುಂದುವರೆಸಬೇಕು. 2047 ರ ಅಮೃತ ಕಾಲದ ದೃಷ್ಟಿಕೋನಕ್ಕೆ ಅನುಗುಣವಾಗಿ ನಮ್ಮ ಸಚಿವಾಲಯ ಸಾಗರ ವಲಯವನ್ನು ಸಮಗ್ರವಾಗಿ ಸಶಕ್ತಗೊಳಿಸುವತ್ತ ತನ್ನ ಕೆಲಸ ಮುಂದುವರೆಸಲಿದೆ.” ಎಂದು ಹೇಳಿದರು. 

 

 

*****

 



(Release ID: 2024144) Visitor Counter : 27