ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿಯಾಗಿ ಪುನರಾಯ್ಕೆಗೊಂಡ ನರೇಂದ್ರ ಮೋದಿಯವರಿಗೆ ಇಸ್ರೇಲ್ ಪ್ರಧಾನಿ ಅಭಿನಂದನೆ
ಭಾರತ-ಇಸ್ರೇಲ್ ಬಾಂಧವ್ಯವನ್ನು ಬಲಪಡಿಸುವಲ್ಲಿ ಪ್ರಧಾನಿ ನೆತನ್ಯಾಹು ಅವರ ಕೊಡುಗೆ ಶ್ಲಾಘಿಸಿದ ಪ್ರಧಾನಿ ಮೋದಿ
ಭಾರತ-ಇಸ್ರೇಲ್ ಕಾರ್ಯತಾಂತ್ರಿಕ ಪಾಲುದಾರಿಕೆ ಮತ್ತಷ್ಟು ಬಲಪಡಿಸುವ ಬದ್ಧತೆ ಪುನರುಚ್ಛರಿಸಿದ ಉಭಯ ನಾಯಕರು
प्रविष्टि तिथि:
06 JUN 2024 9:00PM by PIB Bengaluru
ಪ್ರಧಾನಮಂತ್ರಿಯಾಗಿ ಸತತ ಮೂರನೇ ಬಾರಿ ಅಧಿಕಾರ ಸ್ವೀಕರಿಸುತ್ತಿರುವ ನರೇಂದ್ರ ಮೋದಿಯವರಿಗೆ ಇಸ್ರೇಲ್ ಪ್ರಧಾನ ಮಂತ್ರಿ ಗೌರವಾನ್ವಿತ ಬೆಂಜಮಿನ್ ನೆತನ್ಯಾಹು ಕರೆ ಮಾಡಿ ಅಭಿನಂದನೆ ತಿಳಿಸಿದರು.
ತಮಗೆ ಶುಭಾಶಯ ತಿಳಿಸಿದ ಮತ್ತು ಭಾರತದ ಜನರಿಗೆ ಪ್ರೀತಿ, ಆಳವಾದ ಬಾಂಧವ್ಯ ತೋರಿಸಿದ ಇಸ್ರೇಲ್ ಪ್ರಧಾನ ಮಂತ್ರಿಗಳಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ಭಾರತ-ಇಸ್ರೇಲ್ ಬಾಂಧವ್ಯವನ್ನು ಕಳೆದ ಹಲವಾರು ವರ್ಷಗಳಿಂದ ಇನ್ನಷ್ಟು ಬಲವಾಗಿದೆ ಎಂದರು.
ಎಲ್ಲಾ ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಸಂಭಾಷಣೆ ವೇಳೆ ಪುನರುಚ್ಚರಿಸಿದರು.
ಮುಂದಿನ ದಿನಗಳಲ್ಲಿ ಪರಸ್ಪರ ಸಂಪರ್ಕದಲ್ಲಿರಲು ಒಪ್ಪಿಕೊಂಡರು.
*****
(रिलीज़ आईडी: 2023383)
आगंतुक पटल : 96
इस विज्ञप्ति को इन भाषाओं में पढ़ें:
Odia
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam