ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ ಥೈಲ್ಯಾಂಡ್ ಪ್ರಧಾನಿ 


ಭಾರತ ಮತ್ತು ಥೈಲ್ಯಾಂಡ್ ನಡುವಿನ ಉತ್ಕೃಷ್ಟ ಬಹುಮುಖಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉಭಯ ನಾಯಕರ ಚರ್ಚೆ  

Posted On: 06 JUN 2024 2:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥೈಲ್ಯಾಂಡ್ ಸಾಮ್ರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಶ್ರೆತ್ತಾ ಥವಿಸಿನ್ ಅವರಿಗೆ 2024ರ ಜೂನ್ 6ರಂದು ಆತ್ಮೀಯ ಹಾಗೂ ಸೌಹಾರ್ದಯುತವಾಗಿ ದೂರವಾಣಿ ಕರೆ ಮಾಡಿದ್ದರು. ಇತ್ತೀಚೆಗೆ ಭಾರತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ  ಗೆಲುವು ಸಾಧಿಸಿರುವುದಕ್ಕೆ ಥೈಲ್ಯಾಂಡ್ ಪ್ರಧಾನಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು. 

ಇಬ್ಬರೂ ಪ್ರಧಾನಮಂತ್ರಿಗಳು ವ್ಯಾಪಾರ ಮತ್ತು ಬಂಡವಾಳ ಹೂಡಿಕೆ, ಸಂಸ್ಕೃತಿ ಮತ್ತು ಜನರ  ನಡುವಿನ ಸಂಬಂಧಗಳು ಸೇರಿದಂತೆ ಹಲವು ವಲಯಗಳಲ್ಲಿ ಉಭಯ ದೇಶಗಳ ನಡುವಿನ ಉತ್ಕೃಷ್ಟ ಹಾಗೂ ಬಹು ಆಯಾಮದ ಸಂಬಂಧವನ್ನು ಮತ್ತಷ್ಟು ಬೆಸೆಯುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

*****
 



(Release ID: 2023213) Visitor Counter : 25