ಚುನಾವಣಾ ಆಯೋಗ

ಆರನೇ ಹಂತದ ಮತದಾನಕ್ಕೆ ನಾಳೆ ಸಕಲ ಸಿದ್ಧತೆ


ವ್ಯಾಪ್ತಿ: 58 ಲೋಕಸಭಾ ಕ್ಷೇತ್ರಗಳು, 11.13 ಕೋಟಿ ಮತದಾರರು, 1.14 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳು, 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಒಡಿಶಾದ  42 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ

ಚಂಡಮಾರುತದ ಯಾವುದೇ ಪ್ರತಿಕೂಲ ಪರಿಣಾಮವಿಲ್ಲ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ 

Posted On: 24 MAY 2024 2:33PM by PIB Bengaluru

ನಾಳೆ ನಡೆಯಲಿರುವ ಲೋಕಸಭೆಯ ಆರನೇ ಹಂತದ ಚುನಾವಣಾ ಮತದಾನಕ್ಕೆ ಚುನಾವಣಾ ಆಯೋಗ ಸಜ್ಜಾಗಿದೆ. 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 58 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹರಿಯಾಣ ಮತ್ತು ದೆಹಲಿಯ ಎನ್ ಸಿಟಿ ಈ ಆರನೇ ಹಂತದಲ್ಲಿ ಮತದಾನಕ್ಕೆ ಸಜ್ಜಾಗಿವೆ. ಬಿಹಾರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ, ಇವು ಈ ಹಂತದಲ್ಲಿ ಮತದಾನಕ್ಕೆ ಸಿದ್ದವಾಗಿರುವ ಇತರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು.  ಒಡಿಶಾ ವಿಧಾನಸಭೆಯ 42  ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ.

ಬಿಸಿಗಾಳಿ ಹವಾಮಾನ ಅಥವಾ ಮಳೆಯ ಪ್ರತಿಕೂಲ ಪರಿಣಾಮವನ್ನು ನಿರ್ವಹಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ರಾಜ್ಯದ ಇತರ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಸುಲಭ ಮತ್ತು ಸುರಕ್ಷಿತ ಮತದಾನ ನಡೆಯುವಂತೆ ನೋಡಿಕೊಳ್ಳಲು ಮತದಾರರಿಗೆ ಸಾಕಷ್ಟು ನೆರಳು, ಕುಡಿಯುವ ನೀರು, ಶೌಚಾಲಯಗಳು ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತದಾನ ಕೇಂದ್ರಗಳು ಸಿದ್ಧವಾಗಿವೆ. ಮತದಾನಕ್ಕೆ ಅವಶ್ಯಕವಾದ ಸಾಮಗ್ರಿಗಳನ್ನು ಆಯಾ ಮತಗಟ್ಟೆಗಳಿಗೆ ರವಾನಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳಿಗೆ ಬಂದು, ಜವಾಬ್ದಾರಿಯುತವಾಗಿ ಹೆಮ್ಮೆಯಿಂದ ಮತ ಚಲಾಯಿಸುವಂತೆ ಚುನಾವಣಾ ಆಯೋಗವು ಮತದಾರರಿಗೆ ಕರೆ ನೀಡಿದೆ. ದೆಹಲಿ, ಗುರ್ಗಾಂವ್, ಫರಿದಾಬಾದ್ ನಂತಹ ಕೇಂದ್ರಗಳಲ್ಲಿನ ಸಂಸದೀಯ ಕ್ಷೇತ್ರಗಳ ಮತದಾರರಿಗೆ ಮತದಾನದ ಹಕ್ಕು ಮತ್ತು ಕರ್ತವ್ಯದ ಬಗ್ಗೆ ವಿಶೇಷವಾಗಿ ನೆನಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಆಯೋಗವು ಈ ನಗರವಾಸಿಗಳಿಗೆ ಕರೆ ನೀಡಿದೆ.

ಉಳಿದ 57 ಸಂಸದೀಯ ಕ್ಷೇತ್ರಗಳಿಗೆ ಜೂನ್ 1ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಸಾರ್ವತ್ರಿಕ ಚುನಾವಣೆಯ ಮೊದಲ ಐದು ಹಂತಗಳಲ್ಲಿ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮತ್ತು 428 ಸಂಸದೀಯ ಕ್ಷೇತ್ರಗಳಿಗೆ ಮತದಾನ ಸುಗಮ ಮತ್ತು ಶಾಂತಿವಾಗಿ ಪೂರ್ಣಗೊಂಡಿದೆ.

ಆರನೇ ಹಂತದ ಮತದಾನದ ವಿವರಗಳು:

1. 2024ರ ಸಾರ್ವತ್ರಿಕ ಚುನಾವಣೆಯ ಆರನೇ ಹಂತದ ಮತದಾನವು 2024ರ ಮೇ 25ರಂದು 58 ಸಂಸದೀಯ ಕ್ಷೇತ್ರಗಳಿಗೆ (ಸಾಮಾನ್ಯ -49; ಎಸ್ ಟಿ -02; ಎಸ್ ಸಿ-07) 8 ರಾಜ್ಯಗಳು  ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಮತದಾನವು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ. ಮತದಾನದ ಮುಕ್ತಾಯ ಸಮಯವು ಸಂಸದೀಯ ಕ್ಷೇತ್ರಾವಾರು ಭಿನ್ನವಾಗಿರಬಹುದು.

2. ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಲ್ಲಿ (ಸಾಮಾನ್ಯ -31; ಎಸ್ ಟಿ-05; ಎಸ್ ಸಿ-06) ಒಡಿಶಾ ವಿಧಾನಸಭೆಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

3. 1.14 ಲಕ್ಷ ಮತಗಟ್ಟೆಗಳಲ್ಲಿ ಸುಮಾರು 11.13 ಕೋಟಿ ಮತದಾರರನ್ನು ನಿಭಾಯಿಸಲು 11.4 ಲಕ್ಷ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

4.  5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು ಮತ್ತು 5120 ತೃತೀಯ ಲಿಂಗೀಯ ಮತದಾರರು ಸೇರಿದಂತೆ 11.13 ಕೋಟಿ ಮತದಾರರು ಈ ಹಂತದಲ್ಲಿ ಮತದಾನ ಮಾಡಲಿದ್ದಾರೆ.

5. 85 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ 8.93 ಲಕ್ಷ ಮತದಾರರು, 100 ವರ್ಷಕ್ಕಿಂತ ಮೇಲ್ಪಟ್ಟ 23,659 ಮತದಾರರು ಈ ಆರನೇ ಹಂತದಲ್ಲಿ ನೋಂದಾಯಿತರಾಗಿದ್ದಾರೆ. 9.58 ಲಕ್ಷ ಅಂಗವಿಕಲ ಮತದಾರರಿಗೆ ಆರನೇ ಹಂತದ ಮತದಾನದಲ್ಲಿ ಸ್ವಯಂಪ್ರೇರಿತವಾಗಿ ಮನೆಯಿಂದ ಮತದಾನ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. ಮನೆಯಿಂದ ಮತದಾನ ಮಾಡುವ ಸೌಲಭ್ಯವು ಈಗಾಗಲೇ ಅಪಾರ ಮೆಚ್ಚುಗೆ ಮತ್ತು ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

6. 20 ವಿಶೇಷ ರೈಲುಗಳಲ್ಲಿ ಮತದಾನ ಮತ್ತು ಭದ್ರತಾ ಸಿಬ್ಬಂದಿಯನ್ನು ಸಾಗಿಸಲಾಗಿದೆ.

7. 184 ವೀಕ್ಷಕರು (66 ಸಾಮಾನ್ಯ ವೀಕ್ಷಕರು, 35 ಪೊಲೀಸ್ ವೀಕ್ಷಕರು, 83 ವೆಚ್ಚ ವೀಕ್ಷಕರು) ಮತದಾನಕ್ಕೆ ಕೆಲವು ದಿನಗಳ ಮೊದಲು ಈಗಾಗಲೇ ತಮ್ಮ ಕ್ಷೇತ್ರಗಳನ್ನು ತಲುಪಿದ್ದು, ಅವರು ಅತ್ಯಂತ ಜಾಗರೂಕತೆಯಿಂದ ಆಯೋಗದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಕೆಲವು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನು ನಿಯೋಜಿಸಲಾಗಿದೆ.

8. ಮತದಾರರಿಗೆ ಯಾವುದೇ ರೀತಿಯ ತೊಂದರೆಯಾದ ಸಂದರ್ಭದಲ್ಲಿ ಅದನ್ನು ಕಟ್ಟುನಿಟ್ಟಾಗಿ ಮತ್ತು ತ್ವರಿತವಾಗಿ ನಿವಾರಿಸುವ ಕ್ರಮವಾಗಿ ಒಟ್ಟು 2222 ಫ್ಲೈಯಿಂಗ್ ಸ್ಕ್ವಾಡ್ ಗಳು, 2295 ಸ್ಥಿರ ಕಣ್ಗಾವಲು ತಂಡಗಳು, 819 ವಿಡಿಯೋ ಕಣ್ಗಾವಲು ತಂಡಗಳು ಮತ್ತು 569 ವೀಡಿಯೊ ವೀಕ್ಷಣಾ ತಂಡಗಳು ದಿನದ 24 ಗಂಟೆಯೂ ಕಣ್ಗಾವಲಾಗಿ ಕಾಯುತ್ತಿವೆ.

9. ಒಟ್ಟು 257 ಅಂತರರಾಷ್ಟ್ರೀಯ ಗಡಿ ಚೆಕ್ ಪೋಸ್ಟ್ ಗಳು ಮತ್ತು 927 ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಗಳು ಮದ್ಯ, ಮಾದಕವಸ್ತುಗಳು, ನಗದು ಮತ್ತು ಉಚಿತ ವಸ್ತುಗಳ ಅಕ್ರಮ ಹರಿವಿನ ಮೇಲೆ ಕಟ್ಟುನಿಟ್ಟಾದ ನಿಗಾ ವಹಿಸುತ್ತಿವೆ. ಸಮುದ್ರ ಮತ್ತು ವಾಯು ಮಾರ್ಗಗಳಲ್ಲಿ ಕಟ್ಟುನಿಟ್ಟಾದ ಕಣ್ಗಾವಲು ಇಡಲಾಗಿದೆ.

10. ವೃದ್ಧರು ಮತ್ತು ವಿಕಲಚೇತನರು ಸೇರಿದಂತೆ ಪ್ರತಿಯೊಬ್ಬ ಮತದಾರರು ಸುಲಭವಾಗಿ ಮತ ಚಲಾಯಿಸಲು ಅನುವಾಗುವಂತೆ ನೀರು, ಶೆಡ್, ಶೌಚಾಲಯಗಳು, ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ವಿದ್ಯುತ್ ನಂತಹ ಕನಿಷ್ಠ ಸೌಲಭ್ಯಗಳನ್ನು ನಿಯೋಜಿಸಲಾಗಿದೆ.

11. ಎಲ್ಲಾ ನೋಂದಾಯಿತ ಮತದಾರರಿಗೆ ಮತದಾರರ ಮಾಹಿತಿ ಚೀಟಿಗಳನ್ನು ವಿತರಿಸಲಾಗಿದೆ. ಈ ಮಾಹಿತಿ ಚೀಟಿಗಳು ಮತದಾರರು ಅನುಕೂಲಕರವಾಗಿ ಮತ ಚಲಾಯಿಸಲು ಆಹ್ವಾನ ಪತ್ರಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ.

12.  ಮತದಾರರು ತಮ್ಮ ಮತದಾನ ಕೇಂದ್ರದ ವಿವರಗಳು ಮತ್ತು ಮತದಾನದ ದಿನಾಂಕವನ್ನು ಈ ಲಿಂಕ್ ಮೂಲಕ ಪರಿಶೀಲಿಸಬಹುದು - https://electoralsearch.eci.gov.in/.

13. ಮತದಾನ ಕೇಂದ್ರಗಳಲ್ಲಿ ಗುರುತಿನ ಪರಿಶೀಲನೆಗಾಗಿ ಮತದಾರರ ಗುರುತಿನ ಚೀಟಿ (ಎಪಿಕ್) ಹೊರತುಪಡಿಸಿ 12 ಪರ್ಯಾಯ ದಾಖಲೆಗಳನ್ನು ಆಯೋಗ ಒದಗಿಸಿದೆ. ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದ್ದರೆ, ಈ ಯಾವುದೇ ದಾಖಲೆಗಳನ್ನು ತೋರಿಸುವ ಮೂಲಕ ಮತದಾನ ಮಾಡಬಹುದು. ಪರ್ಯಾಯ ಗುರುತಿನ ದಾಖಲೆಗಳಿಗಾಗಿ ಇಸಿಐ ಆದೇಶಕ್ಕೆ ಈ ಲಿಂಕ್ ಅನ್ನು ನೋಡಿ -    https://www.eci.gov.in/eci-backend/public/api/download?http://url=LMAhAK6sOPBp%2FNFF0iRfXbEB1EVSLT41NNLRjYNJJP1KivrUxbfqkDatmHy12e%2FzBiU51zPFZI5qMtjV1qgjFsi8N4zYcCRaQ2199MM81QYarA39BJWGAJqpL2w0Jta9CSv%2B1yJkuMeCkTzY9fhBvw%3D%3D.

14. ಆರನೇ ಹಂತದ ಸಂಸದೀಯ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಮೇ 23, 2024ರ ಪತ್ರಿಕಾ ಟಿಪ್ಪಣಿ ಸಂಖ್ಯೆ 99ರ ಮೂಲಕ ಬಿಡುಗಡೆ ಮಾಡಲಾಗಿದೆ. ಆದೇಶಕ್ಕೆ ಈ ಲಿಂಕ್ ಅನ್ನು ನೋಡಿ - https://www.eci.gov.in/eci-backend/public/api/download?url=LMAhAK6sOPBp%2FNFF0iRfXbEB1EVSLT41NNLRjYNJJP1KivrUxbfqkDatmHy12e%2FztfbUTpXSxLP8g7dpVrk7%2FYMdYo4qvd6YLkLk2XBNde37QzVrkv3btzrRY%2FqfIjnfdOFtn933icz0MOeiesxvsQ%3D%3D.

15. ಲೋಕಸಭಾ ಚುನಾವಣೆ 2019ರ ಮತದಾನದ ಅಂಕಿಅಂಶಗಳು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: https://old.eci.gov.in/files/file/13579-13-pc-wise-voters-turn-out/ 

16. ವೋಟರ್ ಆ್ಯಪ್ ನಲ್ಲಿ ಪ್ರತಿ ಹಂತದ ಒಟ್ಟಾರೆ ಅಂದಾಜು ಮತದಾನವನ್ನು ಲೈವ್ ಆಗಿ ಪಡೆಯಬಹುದು. ಹಂತವಾರು / ರಾಜ್ಯವಾರು / ಅಸೆಂಬ್ಲಿ ಕ್ಷೇತ್ರಾವಾರು / ಸಂಸದೀಯ ಕ್ಷೇತ್ರಾವಾರು ಅಂದಾಜು ಮತದಾನದ ದತ್ತಾಂಶವು ಮತದಾನದ ದಿನದಂದು ಸಂಜೆ 7 ಗಂಟೆಯವರೆಗೆ ಎರಡು ಗಂಟೆಗಳಿಗೊಮ್ಮೆ ವೋಟರ್ ಆಪ್ ನಲ್ಲಿ ಲೈವ್ ಆಗಿ ಲಭ್ಯವಿದೆ.  ನಂತರ ಮತದಾನ ದತ್ತಾಂಶವನ್ನು ಆಗಮನದ ನಂತರ ನಿರಂತರವಾಗಿ ನವೀಕರಿಸಲಾಗುವುದು.

17. ಮತದಾನದ ಪ್ರವೃತ್ತಿಗಳು - ಹಂತವಾರು, ರಾಜ್ಯವಾರು, ಸಂಸದೀಯ ಕ್ಷೇತ್ರವಾರು (ವಿಧಾನಸಭಾ ಕ್ಷೇತ್ರಗಳಲ್ಲಿ ಸಂಸದೀಯ ಕ್ಷೇತ್ರವಾರು ಮತದಾನದೊಂದಿಗೆ) ವೋಟರ್ ಟರ್ನ್ ಔಟ್ ಅಪ್ಲಿಕೇಶನ್ ನಲ್ಲಿ ನಿರಂತರವಾಗಿ ಕಾಣಬಹುದು. ವೋಟರ್ ಟರ್ನ್ ಔಟ್ ಆಪ್ ಅನ್ನು ಈ ಕೆಳಗಿನ ಲಿಂಕ್ ಗಳಿಂದ ಡೌನ್ಲೋಡ್ ಮಾಡಬಹುದು:

ಆಂಡ್ರಾಯ್ಡ್: https://play.google.com/store/apps/details?id=in.gov.eci.pollturnout&hl=en_IN&pli=1

ಐಓಎಸ್:  https://apps.apple.com/in/app/voter-turnout-app/id1536366882

*****



(Release ID: 2021575) Visitor Counter : 28