ಚುನಾವಣಾ ಆಯೋಗ

ಲೋಕಸಭೆ ಚುನಾವಣೆ 2024 ರ 6 ನೇ ಹಂತದಲ್ಲಿ  8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 889 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ


6 ನೇ ಹಂತದ ಚುನಾವಣೆಗಾಗಿ 7 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಕ್ಷೇತ್ರಗಳಿಗಾಗಿ 1978 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು

Posted On: 18 MAY 2024 3:36PM by PIB Bengaluru

ಲೋಕಸಭೆ ಚುನಾವಣೆ 2024ರ 6 ನೇ ಹಂತದಲ್ಲಿ 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 889 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರದ 3-ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರದ ಮುಂದೂಡಲ್ಪಟ್ಟ ಚುನಾವಣೆಯ 20 ಅಭ್ಯರ್ಥಿಗಳನ್ನು ಒಳಗೊಂಡಿದೆ.

ಈ ಹಂತದಲ್ಲಿ ಚುನಾವಣೆ ನಡೆಯುವ 7 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 57 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 1978 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. 07 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 6ನೇ ಹಂತದ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು (ಲೋಕಸಭಾ ಕ್ಷೇತ್ರ 3- ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಾಜೌರಿಯಲ್ಲಿ ಮುಂದೂಡಲ್ಪಟ್ಟ ಮತದಾನವನ್ನು ಹೊರತುಪಡಿಸಿ) ಮೇ 06, 2024 ಕೊನೆಯ ದಿನವಾಗಿತ್ತು. ಸಲ್ಲಿಸಿದ ಎಲ್ಲಾ ನಾಮಪತ್ರಗಳ ಪರಿಶೀಲನೆಯ ನಂತರ, 900 ನಾಮಪತ್ರಗಳು ಸಿಂಧುವಾಗಿವೆ. 3-ಅನಂತನಾಗ್-ರಾಜೌರಿಯಲ್ಲಿ, 3 ನೇ ಹಂತದಲ್ಲಿ ಒಟ್ಟು 28 ನಾಮಪತ್ರಗಳು ಸಲ್ಲಿಕೆಯಾಗಿದ್ದವು, ಅವುಗಳಲ್ಲಿ 21 ನಾಮಪತ್ರಗಳು ಸಿಂಧುವಾಗಿವೆ.

6ನೇ ಹಂತದಲ್ಲಿ, ಉತ್ತರ ಪ್ರದೇಶದ 14 ಲೋಕಸಭಾ ಕ್ಷೇತ್ರಗಳಿಗೆ ಗರಿಷ್ಠ 470 ನಾಮಪತ್ರಗಳು ಸಲ್ಲಿಕೆಯಾಗಿದ್ದವು, ನಂತರ ಹರಿಯಾಣದ 10 ಲೋಕಸಭಾ ಕ್ಷೇತ್ರಗಳಿಂದ 370 ನಾಮಪತ್ರಗಳು ಬಂದಿದ್ದವು. ಜಾರ್ಖಂಡ್‌ನ 8-ರಾಂಚಿ ಲೋಕಸಭಾ ಕ್ಷೇತ್ರಕ್ಕಾಗಿ 70 ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು ಮತ್ತು ನಂತರ ದೆಹಲಿಯ ಎನ್‌ ಸಿ ಟಿ ಯಲ್ಲಿ 2-ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರಕ್ಕೆ 69 ನಾಮಪತ್ರಗಳು ಸಲ್ಲಿಕೆಯಾಗಿದ್ದವು, ಇದರೊಂದಿಗೆ 6ನೇ ಹಂತದಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸರಾಸರಿ ಸಂಖ್ಯೆ 15 ಆಗಿದೆ.

ಲೋಕಸಭೆ ಚುನಾವಣೆ 2024 ರ ಸಾರ್ವತ್ರಿಕ ಚುನಾವಣೆಯ 6 ನೇ ಹಂತದ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವರಗಳು:

ರಾಜ್ಯ/ಯುಟಿ

ಆರನೇ ಹಂತದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ

 

ಸ್ವೀಕರಿಸಿದ ನಾಮಪತ್ರಗಳು

ನಾಮಪತ್ರ ಪರಿಶೀಲನೆಯ ನಂತರ ಉಳಿದ ಅಭ್ಯರ್ಥಿಗಳು

ನಾಮಪತ್ರ ವಾಪಸ್‌ ಪಡೆದ ನಂತರ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು

ಬಿಹಾರ

8

246

89

86

ಹರಿಯಾಣ

10

370

239

223

ಜಮ್ಮು ಮತ್ತು ಕಾಶ್ಮೀರ*

1

-

-

20

ಜಾರ್ಖಂಡ್‌

4

245

96

93

ದೆಹಲಿಯ ಎನ್‌ ಸಿ ಟಿ

7

367

166

162

ಒಡಿಶಾ

6

130

65

64

ಉತ್ತರ ಪ್ರದೇಶ

14

470

164

162

ಪಶ್ಚಿಮ ಬಂಗಾಳ

8

150

81

79

ಒಟ್ಟು

58    

1978

900

889

*ಜಮ್ಮು ಮತ್ತು ಕಾಶ್ಮೀರದ ಲೋಕಸಭಾ ಕ್ಷೇತ್ರ 3-ಅನಂತನಾಗ್-ರಾಜೌರಿಯಲ್ಲಿ 3ನೇ ಹಂತದಿಂದ 6ನೇ ಹಂತಕ್ಕೆ ಮುಂದೂಡಲ್ಪಟ್ಟ ಮತದಾನ.

*****



(Release ID: 2021062) Visitor Counter : 111