ಚುನಾವಣಾ ಆಯೋಗ

ನಾಳೆ 3ನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ


93 ಲೋಕಸಭಾ ಕ್ಷೇತ್ರಗಳು, 17.24 ಕೋಟಿ ಮತದಾರರು, 1.85 ಲಕ್ಷ ಮತಗಟ್ಟೆಗಳು, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಮನೆಯಿಂದ ಹೊರಬಂದು ಮತ ಚಲಾಯಿಸುವಂತೆ ಪ್ರೇರೇಪಿಸಲು ʻಎಸ್ಎಂಎಸ್ʼ ನೆನಪೋಲೆಗಳು ಮತ್ತು ವಾಟ್ಸಾಪ್ ಸಂದೇಶಗಳು

ರಾಜ್ಯವಾರು/ ಸಂಸದೀಯ ಕ್ಷೇತ್ರವಾರು/ ವಿಧಾನಸಭಾ ಕ್ಷೇತ್ರವಾರು ಅಂಕಿ-ಅಂಶಗಳ ಜೊತೆಗೆ ಒಟ್ಟು ಹಂತವಾರು ಮತದಾನವನ್ನು ತೋರಿಸಲು ʻವೋಟರ್ ಟರ್ನ್‌ಔಟ್‌ ಆಪ್‌ʼನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ

ಹವಾಮಾನ ಪರಿಸ್ಥಿತಿ ಸಾಮಾನ್ಯವಾಗಿರಬಹುದೆಂದು ಅಂದಾಜಿಸಲಾಗಿದೆ - ಅತಿಯಾದ ತಾಪಮಾನದಿಂದ ಪರಿಹಾರಕ್ಕಾಗಿ ಪ್ರತಿ ಮತಗಟ್ಟೆಯಲ್ಲಿ ನೀರು, ಒಆರ್‌ಎಸ್, ಶಾಮಿಯಾನದಂತಹ ವ್ಯವಸ್ಥೆ ಮಾಡಲಾಗಿದೆ


23 ದೇಶಗಳ 75 ಪ್ರತಿನಿಧಿಗಳು ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಲಿದ್ದಾರೆ

Posted On: 06 MAY 2024 8:45PM by PIB Bengaluru

ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನಕ್ಕೆ ಚುನಾವಣಾ ಆಯೋಗ ಸಂಪೂರ್ಣ ಸಜ್ಜಾಗಿದೆ. ಹವಾಮಾನ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಮತದಾರರ ಅನುಕೂಲಕ್ಕಾಗಿ, ಎಲ್ಲಾ ಮತದಾನ ಕೇಂದ್ರಗಳಲ್ಲಿ ನೀರು, ಶಾಮಿಯಾನ, ಫ್ಯಾನ್‌ಗಳಂತಹ ಸೌಲಭ್ಯಗಳು ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

 

ರಾಯ್‌ಪುರದಲ್ಲಿ ತುರ್ತು ವೈದ್ಯಕೀಯ ಕರ್ತವ್ಯಗಳಿಗಾಗಿ ʻಫಿಕ್ಸ್ಡ್‌ ವಿಂಗ್ ಏರ್ ಆಂಬ್ಯುಲೆನ್ಸ್ʼ ಮತ್ತು ʻಪವನ್ ಹನ್ಸ್ ಹೆಲಿಕಾಪ್ಟರ್ʼ

ಮತದಾನ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಹಾಗೂ ಜವಾಬ್ದಾರಿಯುತವಾಗಿ ಮತ್ತು ಹೆಮ್ಮೆಯಿಂದ ಮತ ಚಲಾಯಿಸುವಂತೆ ಆಯೋಗವು ಮತದಾರರಿಗೆ ಕರೆ ನೀಡಿದೆ. 3ನೇ ಹಂತದ ಚುನಾವಣೆಗೆ ಮುಂಚಿತವಾಗಿ, ಚುನಾವಣಾ ಆಯೋಗವು ನಾಲ್ಕು ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಾದ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼ, ʻಭಾರ್ತಿ ಏರ್ಟೆಲ್ ಲಿಮಿಟೆಡ್ʼ, ʻಜಿಯೋ ಟೆಲಿಕಮ್ಯುನಿಕೇಷನ್ʼ ಮತ್ತು ʻವೊಡಾಫೋನ್-ಐಡಿಯಾ ಲಿಮಿಟೆಡ್‌ʼನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಆಯೋಗವು ಎಲ್ಲಾ ಸಂಸ್ಥೆಗಳು, ನವೋದ್ಯಮಗಳು, ʻಯುನಿಕಾರ್ನ್‌ʼಳಿಗೆ ಜನಸಂಪರ್ಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಭಾರತ ಚುನಾವಣಾ ಆಯೋಗದ ರಾಯಭಾರಿಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳಾಗಲು ಮನವಿ ಮಾಡಿದೆ.

ಭಾರತ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಬಹಿರಂಗಪಡಿಸುವಿಕೆ ಮತ್ತು ಪಾರದರ್ಶಕತೆಯು ಪ್ರಮಾಣಿತ ಅಭ್ಯಾಸಗಳಾಗಿವೆ. ಶಾಸನಬದ್ಧ ಅಗತ್ಯಗಳ ಅನುಸಾರ, ಪ್ರತಿ ಮತಗಟ್ಟೆಯಲ್ಲಿ ಮತದಾನದ ಪ್ರಮಾಣವನ್ನು ʻನಮೂನೆ 17ಸಿʼಯಲ್ಲಿ ಸಂಪೂರ್ಣ ಸಂಖ್ಯೆಯಲ್ಲಿ ದಾಖಲಿಸಬೇಕು. ಪಾರದರ್ಶಕತೆಯ ಮತ್ತೊಂದು ಕ್ರಮವಾಗಿ, ʻಪ್ರಿಸೈಡಿಂಗ್ ಅಧಿಕಾರಿʼ ಮತ್ತು ಹಾಜರಿರುವ ಎಲ್ಲಾ ಮತಗಟ್ಟೆ ಏಜೆಂಟರು ಸಹಿ ಮಾಡಿದ ʻನಮೂನೆ 17 ಸಿʼ ಪ್ರತಿಗಳನ್ನು ಅಲ್ಲಿರುವ ಎಲ್ಲಾ ಮತಗಟ್ಟೆ ಏಜೆಂಟರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಹೀಗಾಗಿ, ಶಾಸನಬದ್ಧ ಅಗತ್ಯದ ಭಾಗವಾಗಿ ಚಲಾವಣೆಯಾದ ಮತಗಳ ನೈಜ ಸಂಖ್ಯೆಯ ಬೂತ್‌ವಾರು ದತ್ತಾಂಶವು ಅಭ್ಯರ್ಥಿಗಳ ಬಳಿ ಲಭ್ಯವಿರುತ್ತದೆ.

 

ʻಎಎಂಎಫ್ʼ ನೊಂದಿಗೆ ಸಜ್ಜುಗೊಂಡ ಮತದಾನ ಕೇಂದ್ರಗಳು

ಮಾಧ್ಯಮಗಳು ಮತ್ತು ಇತರೆ ಮಧ್ಯಸ್ಥಗಾರಿಗೆ ಮಾಹಿತಿ ಬಹಿರಂಗಪಡಿಸುವ ಉಪಕ್ರಮವಾಗಿ, ರಾಜ್ಯವಾರು / ಸಂಸದೀಯ ಕ್ಷೇತ್ರವಾರು/ ವಿಧಾನಸಭಾ ಕ್ಷೇತ್ರವಾರು ತಾತ್ಕಾಲಿಕ ಮತದಾನದ ಅಂಕಿ-ಅಂಶಗಳನ್ನು ಚುನಾವಣಾ ಆಯೋಗದ ʻವೋಟರ್‌ ಟರ್ನ್‌ಔಟ್‌ ಆಪ್‌ʼ ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತದೆ, ಇದು ಈ ಕೆಳಗಿನ ಲಿಂಕ್‌ನಲ್ಲಿ ಲಭ್ಯವಿದೆ:

https://play.google.com/store/apps/details?id=in.gov.eci.pollturnout&hl=en_IN

https://apps.apple.com/in/app/voter-turnout-app/id1536366882

ಪ್ರತಿ ಮತದಾನ ಕೇಂದ್ರದೊಳಗೆ ರಾಜ್ಯವಾರು / ಸಂಸದೀಯ ಕ್ಷೇತ್ರವಾರು/ ಪ್ರತಿ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಅಂದಾಜು ಮತದಾನದ ದತ್ತಾಂಶವು ʻವೋಟರ್‌ ಟರ್ನ್‌ಔಟ್‌ ಆಪ್‌ʼ ಲೈವ್‌ನಲ್ಲಿ ಲಭ್ಯವಿರುತ್ತದೆ ಎಂಬುದು ಗಮನಾರ್ಹ. ಇದನ್ನು ಮತದಾನದ ದಿನದಂದು ಪ್ರತಿ ಎರಡು ಗಂಟೆಗಳಿಗೊಮ್ಮೆ ಸಂಜೆ 7 ರವರೆಗೆ ನವೀಕರಿಸಲಾಗುತ್ತದೆ. ಮತದಾನ ಮುಗಿದ ನಂತರ, ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ಸಮಯಕ್ಕೆ ಸರತಿ ಸಾಲಿನಲ್ಲಿ ಬಂದ ಮತದಾರರಿಗೆ ಅನುವು ಮಾಡಿಕೊಡಲು ನಿಗದಿತ ಮತದಾನದ ಸಮಯವನ್ನು ವಿಸ್ತರಿಸಬಹುದು. ಚುನಾವಣಾ ಸಿಬ್ಬಂದಿಯು ಸ್ಟ್ರಾಂಗ್ ರೂಮ್‌ಗೆ ಹಿಂತಿರುಗಿ ಮತದಾನ ಯಂತ್ರಗಳು ಮತ್ತು ಶಾಸನಬದ್ಧ ಕಾಗದಪತ್ರಗಳನ್ನು ಇರಿಸುತ್ತಾರೆ. ಸಂಜೆ 7 ಗಂಟೆಯ ನಂತರ ಎರಡು ಗಂಟೆಗಳ ಮಿತಿಯನ್ನು ತೆಗೆದುಹಾಕಲಾಗುತ್ತದೆ ಮತ್ತು ಚುನಾವಣಾ ಸಿಬ್ಬಂದಿಯ ಆಗಮನದ ನಂತರ ದತ್ತಾಂಶವನ್ನು ನಿರಂತರವಾಗಿ ನವೀಕರಿಸಲಾಗುತ್ತದೆ.

 

 

1. ಗೋವಾದ ಸೆಹೋರ್ ಸಂಸದೀಯ ಕ್ಷೇತ್ರದಲ್ಲಿ ಹೊರಡಲು ಸಜ್ಜಾದ ಚುನಾವಣಾ ಸಿಬ್ಬಂದಿ     2. ಐಸಿಯು ಹಾಸಿಗೆ ಸೌಲಭ್ಯ,

ರಾಜ್ಯವಾರು / ಸಂಸದೀಯ ಕ್ಷೇತ್ರವಾರು/ ವಿಧಾನಸಭಾ ಕ್ಷೇತ್ರವಾರು ಅಂಕಿ-ಅಂಶಗಳ ಜೊತೆಗೆ ಒಟ್ಟು ಹಂತವಾರು ಮತದಾನವನ್ನು ತೋರಿಸಲು ಆಯೋಗವು ʻವೋಟರ್ ಟರ್ನ್‌ಔಟ್‌ ಆಪ್‌ʼನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರ್ಪಡೆಗೊಳಿಸಿದೆ. ವೈಯಕ್ತೀಕರಿಸಿದ ಮಾಹಿತಿಯ ಅಗತ್ಯವಿರುವ ಮಾಧ್ಯಮ ಮತ್ತು ಇತರ ಮಧ್ಯಸ್ಥಗಾರರ ಅನುಕೂಲಕ್ಕಾಗಿ ಇದನ್ನು ಮಾಡಲಾಗಿದೆ.

11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್-ರಾಜೌರಿ ಸಂಸದೀಯ ಕ್ಷೇತ್ರದ ಮತದಾನವನ್ನು ಆರನೇ ಹಂತಕ್ಕೆ ಮರು ನಿಗದಿಪಡಿಸಲಾಗಿದೆ. ಅಲ್ಲದೆ, ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಸೂರತ್ ಸಂಸದೀಯ ಕ್ಷೇತ್ರದಲ್ಲಿ ಯಾವುದೇ ಮತದಾನ ಇರುವುದಿಲ್ಲ. ಬೇಟುಲ್ ಸಂಸದೀಯ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿಯ ನಿಧನದಿಂದಾಗಿ ಹಂತ-2ರಲ್ಲಿ ನಡೆಯಬೇಕಾಗಿದ್ದ ಈ ಕ್ಷೇತ್ರದ ಮತದಾನವನ್ನು 3ನೇ ಹಂತಕ್ಕೆ ಮರುನಿಗದಿಪಡಿಸಿದ್ದರಿಂದ, ಈ ಕ್ಷೇತ್ರದಲ್ಲೂ ಈಗ ಮತದಾನ ನಡೆಯಲಿದೆ.

ಉಳಿದ 4 ಹಂತಗಳ ಮತದಾನ ಜೂನ್ 1ರವರೆಗೆ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ 189 ಸ್ಥಾನಗಳಿಗೆ ಮತದಾನ ಸುಗಮವಾಗಿ ಮತ್ತು ಶಾಂತಿಯುತವಾಗಿ ಪೂರ್ಣಗೊಂಡಿದೆ. ಮೂರನೇ ಹಂತದ ಮತದಾನದ ವೇಳೆ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರತಿನಿಧಿಗಳು ಭೇಟಿ ನೀಡಿ ಭಾರತದ ಮತದಾನ ಪ್ರಕ್ರಿಯೆ ಮತ್ತು ನಿರ್ವಹಣೆಯ ಅನುಭವವನ್ನು ಪಡೆಯಲಿದ್ದಾರೆ. ʻಅಂತಾರಾಷ್ಟ್ರೀಯ ಚುನಾವಣಾ ಸಂದರ್ಶಕ ಕಾರ್ಯಕ್ರಮʼದ ಭಾಗವಾಗಿ 23 ದೇಶಗಳ 75 ಪ್ರತಿನಿಧಿಗಳು ಆರು ರಾಜ್ಯಗಳ ಮತದಾನ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ.

 

ಆಲಿಯಾ ಬೆಟ್ , ಗುಜರಾತ್                       ಸುಪಾಲ್, ಬಿಹಾರ

ಚುನಾವಣಾ ಸಿಬ್ಬಂದಿಯನ್ನು ʻಇವಿಎಂʼಗಳು ಮತ್ತು ಮತದಾನ ಸಾಮಗ್ರಿಗಳೊಂದಿಗೆ ಆಯಾ ಮತಗಟ್ಟೆಗಳಿಗೆ ಕಳುಹಿಸಲಾಗಿದೆ. ಅಸ್ಸಾಂನಲ್ಲಿ, 3ನೇ ಹಂತದ ಚುನಾವಣೆ ವೇಳೆ ದಕ್ಷಿಣ ಸಲ್ಮಾರಾ ಮಂಕಾಚಾರ್ ಸಂಸತ್‌ ಕ್ಷೇತ್ರದ ಮತದಾನ ಕೇಂದ್ರಗಳ ಸುರಕ್ಷತೆಗಾಗಿ ದೋಣಿಗಳಲ್ಲಿ ʻಸಶಸ್ತ್ರ ಸೀಮಾ ಬಲʼ ಪಡೆಗಳನ್ನು ನಿಯೋಜಿಸಲಾಗಿದೆ. ಬಿಹಾರದಲ್ಲಿ, ಚುನಾವಣಾ ಸಿಬ್ಬಂದಿಯು ದೋಣಿಗಳಲ್ಲಿ ಕೋಸಿ ನದಿಯನ್ನು ದಾಟಿ ಸುಪಾಲ್‌ನ ಮತದಾನ ಕೇಂದ್ರಗಳನ್ನು ತಲುಪಿದ್ದಾರೆ.

ಹಂತ 3ರ ಸಂಗತಿಗಳು

  1. 2024ರ ಮೇ 7ರಂದು 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 93 ಸಂಸದೀಯ ಕ್ಷೇತ್ರಗಳಿಗೆ (ಸಾಮಾನ್ಯ - 72 ಎಸ್‌ಟಿ- 11; ಎಸ್‌ಸಿ-10) 2024ರ ಸಾರ್ವತ್ರಿಕ ಚುನಾವಣೆಯ 3ನೇ ಹಂತದ ಮತದಾನವು ನಡೆಯಲಿದೆ. ಮತದಾನವು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6 ಗಂಟೆಗೆ ಕೊನೆಗೊಳ್ಳುತ್ತದೆ (ಮತದಾನದ ಮುಕ್ತಾಯದ ಸಮಯವು ಕ್ಷೇತ್ರವಾರು ಭಿನ್ನವಾಗಿರಬಹುದು)
  2. ಸುಮಾರು 18.5 ಲಕ್ಷ ಮತಗಟ್ಟೆ ಅಧಿಕಾರಿಗಳು, 1.85 ಲಕ್ಷ ಮತಗಟ್ಟೆಗಳಲ್ಲಿ, 17.24 ಕೋಟಿ ಮತದಾರರನ್ನು  ಸ್ವಾಗತಿಸಲಿದ್ದಾರೆ
  3.  17.24 ಕೋಟಿ ಮತದಾರರಲ್ಲಿ 8.85 ಕೋಟಿ ಪುರುಷರು, 8.39 ಕೋಟಿ ಮಹಿಳೆಯರು ಸೇರಿದ್ದಾರೆ.
  4.  ಮೂರನೇ ಹಂತದಲ್ಲಿ 85+ ವರ್ಷ ವಯಸ್ಸಿನ 14.04 ಲಕ್ಷ, 100 ವರ್ಷಕ್ಕಿಂತ ಮೇಲ್ಪಟ್ಟ 39,599 ಮತದಾರರು ಮತ್ತು 15.66 ಲಕ್ಷ ಅಂಗವಿಕಲ ಮತದಾರರಿದ್ದು, ಅವರಿಗೆ ತಮ್ಮ ಮನೆಯಿಂದಲೇ ಮತ ಚಲಾಯಿಸುವ ಆಯ್ಕೆಯನ್ನು ನೀಡಲಾಗಿದೆ. ಐಚ್ಛಿಕ ʻಹೋಮ್ ವೋಟಿಂಗ್ʼ ಸೌಲಭ್ಯವು ಈಗಾಗಲೇ ಅಪಾರ ಮೆಚ್ಚುಗೆ ಮತ್ತು ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.
  5. 264 ವೀಕ್ಷಕರು (101 ಸಾಮಾನ್ಯ ವೀಕ್ಷಕರು, 54 ಪೊಲೀಸ್ ವೀಕ್ಷಕರು, 109 ವೆಚ್ಚ ವೀಕ್ಷಕರು) ಮತದಾನಕ್ಕೆ ಕೆಲವು ದಿನಗಳ ಮೊದಲು ಈಗಾಗಲೇ ತಮ್ಮ ಕ್ಷೇತ್ರಗಳನ್ನು ತಲುಪಿದ್ದಾರೆ. ಅವರು ಅತ್ಯಂತ ಸೂಕ್ಷ್ಮ ನಿಗಾ ವಹಿಸಲು ಆಯೋಗದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಹೆಚ್ಚುವರಿಯಾಗಿ, ಕೆಲವು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನು ನಿಯೋಜಿಸಲಾಗಿದೆ.
  1. ಮತದಾರರ ಯಾವುದೇ ರೀತಿಯ ಆಮಿಷಗಳನ್ನು ಕಟ್ಟುನಿಟ್ಟಾಗಿ ಮತ್ತು ತ್ವರಿತವಾಗಿ ನಿಭಾಯಿಸಲು ಒಟ್ಟು 4303 ಫ್ಲೈಯಿಂಗ್ ಸ್ಕ್ವಾಡ್‌ಗಳು, 5534 ಸ್ಥಿರ ಕಣ್ಗಾವಲು ತಂಡಗಳು, 1987 ವಿಡಿಯೋ ಕಣ್ಗಾವಲು ತಂಡಗಳು ಮತ್ತು 949 ವೀಡಿಯೊ ವೀಕ್ಷಣೆ ತಂಡಗಳು  ದಿನದ 24 ಗಂಟೆಯೂ ಕಣ್ಗಾವಲು ಇರಿಸುತ್ತವೆ.
  2. ಒಟ್ಟು 1041 ಅಂತರರಾಜ್ಯ ಮತ್ತು 275 ಅಂತರರಾಷ್ಟ್ರೀಯ ಗಡಿ ಚೆಕ್ ಪೋಸ್ಟ್‌ಗಳು ಮದ್ಯ, ಮಾದಕವಸ್ತುಗಳು, ನಗದು ಮತ್ತು ಉಚಿತ ವಸ್ತುಗಳ ಅಕ್ರಮ ಹರಿವಿನ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿವೆ. ಸಮುದ್ರ ಮತ್ತು ವಾಯು ಮಾರ್ಗಗಳಲ್ಲಿ ಕಟ್ಟುನಿಟ್ಟಾದ ಕಣ್ಗಾವಲು ಇಡಲಾಗಿದೆ.
  3. ವೃದ್ಧರು ಮತ್ತು ವಿಕಲಚೇತನರು ಸೇರಿದಂತೆ ಪ್ರತಿಯೊಬ್ಬ ಮತದಾರರು ಸುಲಭವಾಗಿ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ನೀರು, ಶೆಡ್, ಶೌಚಾಲಯಗಳು, ರ್ಯಾಂಪ್‌ಗಳು, ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ವಿದ್ಯುತ್ ನಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಶೇಷ ಕ್ರಮಗಳತ್ತ ಗಮನ ಹರಿಸಲಾಗಿದೆ.
  4. ಎಲ್ಲಾ ನೋಂದಾಯಿತ ಮತದಾರರಿಗೆ ಮತದಾರರ ಮಾಹಿತಿ ಚೀಟಿಗಳನ್ನು ವಿತರಿಸಲಾಗಿದೆ. ಈ ಚೀಟಿಗಳು ಮತದಾರರಿಗೆ ಅನುಕೂಲಕಾರಿಯಾಗಿ ವರ್ತಿಸುವುದಲ್ಲದೆ, ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಯೋಗದ ಆಹ್ವಾನವಾಗಿ ಕಾರ್ಯನಿರ್ವಹಿಸುತ್ತವೆ.
  1. ಮತದಾರರು ತಮ್ಮ ಮತದಾನ ಕೇಂದ್ರದ ವಿವರಗಳು ಮತ್ತು ಮತದಾನದ ದಿನಾಂಕವನ್ನು ಈ ಲಿಂಕ್ ಮೂಲಕ ಪರಿಶೀಲಿಸಬಹುದು https://electoralsearch.eci.gov.in/
  1. ಮತದಾನ ಕೇಂದ್ರಗಳಲ್ಲಿ ಗುರುತಿನ ಪರಿಶೀಲನೆಗಾಗಿ ಮತದಾರರ ಗುರುತಿನ ಚೀಟಿ (ಎಪಿಕ್) ಹೊರತುಪಡಿಸಿ 12 ಪರ್ಯಾಯ ದಾಖಲೆಗಳನ್ನು ಆಯೋಗ ಒದಗಿಸಿದೆ. ಮತದಾರನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದ್ದರೆ, ಈ ಯಾವುದೇ ದಾಖಲೆಗಳನ್ನು ತೋರಿಸುವ ಮೂಲಕ ಮತದಾನ ಮಾಡಬಹುದು. ಪರ್ಯಾಯ ಗುರುತಿನ ದಾಖಲೆಗಳ ಕುರಿತಾದ ಚುನಾವಣಾ ಆಯೋಗದ ಆದೇಶವನ್ನು ಈ ಲಿಂಕ್‌ನಲ್ಲಿ ನೋಡಬಹುದು:

https://www.eci.gov.in/eci-backend/public/api/download?

******



(Release ID: 2019846) Visitor Counter : 38