ಚುನಾವಣಾ ಆಯೋಗ
ಲೋಕಸಭಾ ಚುನಾವಣೆ – 2024, ಕಡಿಮೆ ಮತದಾನವಾಗಿರುವ ಆಯ್ದ ಜಿಲ್ಲೆಗಳಲ್ಲಿ ಮತದಾರರ ಪ್ರಮಾಣ ಹೆಚ್ಚಿಸಲು ಕೇಂದ್ರ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಪುರಸಭೆ ಆಯುಕ್ತರು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ ‘ಕಡಿಮೆ ಮತದಾನ ಪ್ರದೇಶಗಳ ಸಮಾವೇಶ” ಆಯೋಜನೆ
ಉದ್ದೇಶಿತ ಮಧ್ಯಸ್ಥಿಕೆಗಳಿಗಾಗಿ 266 ನಗರ ಮತ್ತು ಗ್ರಾಮೀಣ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅನುಷ್ಠಾನ ಯೋಜನೆ ಸಿದ್ಧ
ಮತದಾನದಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಲು ಉತ್ತೇಜಿಸುವಂತೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಂದ ಪುರಸಭೆ ಆಯುಕ್ತರು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶನ
Posted On:
05 APR 2024 4:37PM by PIB Bengaluru
ಹಿಂದಿನ ಸಾಮಾನ್ಯ ಲೋಕಸಭಾ ಚುನಾವಣೆಗಳಲ್ಲಿ ಕಡಿಮೆ ಮತದಾನವಾದ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಭಾರತೀಯ ಚುನಾವಣಾ ಆಯೋಗ [ಇಸಿಐ] ತನ್ನ ಪ್ರಯತ್ನಗಳನ್ನು ತ್ವರಿಗೊಳಿಸಿದೆ. ನವದೆಹಲಿಯ ನಿರ್ವಾಚನ್ ಸದನ್ ನಲ್ಲಿ ಪ್ರಮುಖ ನಗರಗಳ ಪುರಸಭೆಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ[ಡಿಇಒಗಳು]ನ್ನೊಳಗೊಂಡ ಪ್ರದೇಶಗಳಲ್ಲಿ ‘ಕಡಿಮೆ ಮತದಾನ ಪ್ರದೇಶಗಳ ಸಮಾವೇಶ” ವನ್ನು ಇಡೀ ದಿನ ಆಯೋಜಿಸಲಾಗಿತ್ತು. ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶವು ಮತದಾರರ ತೊಡಗಿಸಿಕೊಳ್ಳುವಿಕೆ ಮತ್ತು ಗುರುತಿಸಲಾದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನದಲ್ಲಿ ಭಾಗವಹಿಸುವಿಕೆಯ ಮಾರ್ಗವನ್ನು ರೂಪಿಸಲು ಒಟ್ಟಾಗಿ ಚರ್ಚೆ ನಡೆಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರೊಂದಿಗೆ ಚುನಾವಣಾ ಆಯುಕ್ತರಾದ ಶ್ರೀ ಗ್ಯಾನೇಶ್ ಕುಮಾರ್ ಮತ್ತು ಶ್ರೀ ಸುಖ್ಬೀರ್ ಸಿಂಗ್ ಸಂಧು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಯೋಗದಿಂದ ಮತದಾರರ ನಿರಾಸಕ್ತಿ ಕುರಿತ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು.
11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಬಿಹಾರ, ಉತ್ತರ ಪ್ರದೇಶ, ದೆಹಲಿ ಎನ್.ಸಿ.ಟಿ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ, ಗುಜರಾತ್, ಪಂಜಾಬ್, ರಾಜಸ್ಥಾನ್, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ನಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಸರಾಸರಿ 67.40% ಕ್ಕಿಂತಲೂ ಕಡಿಮೆ ಮತದಾನವಾಗಿತ್ತು. 11 ರಾಜ್ಯಗಳ 50 ಗ್ರಾಮೀಣ ಲೋಕಸಭಾ ಕ್ಷೇತ್ರಗಳಲ್ಲಿ 2019 ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಮತದಾನ ದಾಖಲಾಗಿತ್ತು. ಅದರಲ್ಲಿ 40 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶ [22 ಪಿಸಿಗಳು] ಮತ್ತು ಬಿಹಾರ [18ಪಿಸಿಗಳು] ಸೇರಿವೆ. ಉತ್ತರ ಪ್ರದೇಶದ – 51 ಫಲ್ಫುರ್ ಪಿಸಿಯಲ್ಲಿ ಅತಿ ಕಡಿಮೆ 48.7% ರಷ್ಟು, ಬಿಹಾರದ ನಳಂದಾ -29 ರಲ್ಲಿ 48.79% ರಷ್ಟು ಮತದಾನವಾಗಿತ್ತು.
ಪುರಸಭೆ ಆಯುಕ್ತರು ಮತ್ತು ಡಿಇಒಗಳನ್ನುದ್ದೇಶಿಸಿ ಮಾತನಾಡಿದ ಸಿಇಸಿ ಶ್ರೀ ರಾಜೀವ್ ಕುಮಾರ್, ಒಟ್ಟು 266 ಲೋಕಸಭಾ ಕ್ಷೇತ್ರಗಳಲ್ಲಿ [215 ಗ್ರಾಮೀಣ ಮತ್ತು 51 ನಗರ] ಕಡಿಮೆ ಮತದಾನವಾಗಿದೆ. ಇಂತಹ ಕಳವಳಕಾರಿ ಪರಿಸ್ಥಿತಿ ಇರುವ ಪುರಸಭೆ ಆಯುಕ್ತರು ಮತ್ತು ಡಿಇಒಗಳಿಗೆ ಉದ್ದೇಶಿತ ಮಾರ್ಗಗಳಲ್ಲಿ ಮತದಾರರನ್ನು ತಲುಪುವ ಹಾದಿಯನ್ನು ಕಂಡುಕೊಳ್ಳುವಂತೆ ನಿರ್ದೇಶನ ನೀಡಿದರು, ಇಂತಹ ಪ್ರದೇಶಗಳಲ್ಲಿ ಮತಗಟ್ಟೆಗಳಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿರುವವರ ಸೂಕ್ತ ನಿರ್ವಹಣೆ, ಕಿಷ್ಕಿಂಧೆಯಂತಹ ಪ್ರದೇಶಗಳಲ್ಲಿ ನೆರಳಿನಲ್ಲಿ ವಾಹನ ನಿಲುಗಡೆಗೆ, ಉದ್ದೇಶಿತ ಪ್ರಭಾವ ಮತ್ತು ಸಂಪರ್ಕ ಮತ್ತು ಕ್ಲಿಷ್ಟದಾಯಕ ಆರ್.ಡಬ್ಲ್ಯೂಎಗಳ ಪಾಲ್ಗೊಳ್ಳುವಿಕೆ, ಸ್ಥಳೀಯ ರಾಯಭಾರಿಗಳು ಮತ್ತು ಯುವ ಸಮೂಹದ ಪ್ರಭಾವಿಗಳು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವಂತೆ ಪ್ರೇರಣೆ ನೀಡುವಂತೆ ಮಾಡಬೇಕು.
ಮತಗಟ್ಟೆ ಹಂತದಲ್ಲಿ ಸೂಕ್ತ ಯೋಜನೆ ರೂಪಿಸಬೇಕು ಮತ್ತು ವರ್ತನೆಯಲ್ಲಿ ಬದಲಾವಣೆ ತರಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಂಸಿಗಳು ಮತ್ತು ಡಿಇಒಗಳಿಗೆ ಸೂಕ್ತ ಯೋಜನೆ ರೂಪಿಸಬೇಕು ಹಾಗೂ ಉದ್ದೇಶಿತ ಗುರಿ ನಿಗದಿ ಮಾಡಿ ಮಧ್ಯಸ್ಥಿಕೆ ಕ್ರಮಗಳನ್ನು ಜಾರಿಗೊಳಿಸುವಂತೆ ನಿರ್ದೇಶನ ಮಾಡುವಂತೆ ಕರೆ ನೀಡಿದರು. “ಒಂದು ಗಾತ್ರ ಎಲ್ಲರಿಗೂ ಸರಿ ಹೊಂದುತ್ತದೆ” ಎಂಬ ವಿಧಾನವು ಸೂಕ್ತ ಫಲಿತಾಂಶ ನೀಡುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಜನತೆ ಸ್ವಯಂ ಪ್ರೇರಿತರಾಗಿ ಮತದಾನ ಮಾಡುವಂತೆ ಆಂದೋಲನ ನಡೆಸಬೇಕು.
ಮತದಾರರ ನಿರಾಸಕ್ತಿ ತೊಡೆದುಹಾಕಲು ಇಸಿಐ ಮತ್ತು ಪಾಲುದಾರರು ಸಮಗ್ರ ಯೋಜನೆ ರೂಪಿಸುವತ್ತ ಕೇಂದ್ರೀಕರಿಸಬೇಕು. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಹಾಗೂ ಮತದಾನ ಪ್ರಮಾಣ ಹೆಚ್ಚಿಸಬೇಕು. ಮತಗಟ್ಟೆಗಳಲ್ಲಿ ಸರತಿ ಸಾಲಿನ ಬಗ್ಗೆ ಸೂಕ್ತ ನಿರ್ವಹಣೆ ಮಾಡುವ, ಬಹುಮಹಡಿ ಕಟ್ಟಡಗಳಲ್ಲಿ ಸೂಕ್ತ ಸೌಲಭ್ಯ ಮತ್ತು ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ [ಸ್ವೀಪ್] ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಬೇಕು.
ಈ ಉಪಕ್ರಮಗಳಿಗೆ ಪುರಸಭೆ ಆಯುಕ್ತರು ಮತ್ತು ಡಿಇಒಗಳು ಸೂಕ್ತ ರೀತಿಯಲ್ಲಿ ಕೊಡುಗೆ ನೀಡಬೇಕು. ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅಡ್ಡಿಯಾಗಿರುವ ನಿರ್ದಿಷ್ಟ ವಲಯಗಳನ್ನು ಗುರುತಿಸಲಾಗಿದೆ. ನಗರ ಕೇಂದ್ರೀತ ಮಧ್ಯಸ್ಥಿಗಳ ಬಗ್ಗೆ ಯೋಜನೆ ರೂಪಿಸಲಾಗಿದೆ ಹಾಗೂ ಆಯಾ ಕ್ಷೇತ್ರಗಳ ಅಗತ್ಯಗಳು ಮತ್ತು ಜನಸಂಖ್ಯೆ ಮತ್ತಿತರ ವಿಚಾರಗಳ ಕುರಿತಂತೆಯೂ ಸೂಚನೆ ನೀಡಲಾಗಿದೆ. ಈ ದೃಷ್ಟಿಕೋನದಲ್ಲಿ ಇಸಿಐ ಸ್ವೀಪ್ ಅಡಿ ಅಸಾಧಾರಣವಾದ ರೀತಿಯಲ್ಲಿ ಮತದಾರರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅವುಗಳೆಂದರೆ:
- ಅಗತ್ಯ ಚುನಾವಣಾ ಸಂದೇಶಗಳಿಂದ ಅಲಂಕರಿಸಲ್ಪಟ್ಟ ಸಾರ್ವಜನಿಕ ಸಾರಿಗೆ ಮತ್ತು ನೈರ್ಮಲ್ಯ ವಾಹನಗಳನ್ನು ಹೊರತರುವುದು.
- ವ್ಯಾಪಕ ಪ್ರಸರಣಕ್ಕಾಗಿ ಮತದಾರರ ಜಾಗೃತಿ ಸಂದೇಶಗಳನ್ನು ಸೇವಾ ರಸೀದಿಗಳಲ್ಲಿ ಸೇರಿಸುವುದು.
- ನಿವಾಸಿ ಕಲ್ಯಾಣ ಸಂಘಗಳು (ಆರ್.ಡಬ್ಲ್ಯುಎಗಳು) ಮತ್ತು ಮತದಾರರ ಜಾಗೃತಿ ವೇದಿಕೆಗಳೊಂದಿಗೆ ಸಹಯೋಗ.
- ಉದ್ಯಾನವನಗಳು, ಮಾರುಕಟ್ಟೆಗಳು ಮತ್ತು ಮಾಲ್‌ಗಳಂತಹ ಜನಪ್ರಿಯ ಸಾರ್ವಜನಿಕ ಸ್ಥಳಗಳಲ್ಲಿ ಮಾಹಿತಿಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವುದು.
- ಮ್ಯಾರಾಥಾನ್, ವಾಕಥಾನ್ ಗಳು ಮತ್ತು ಸೈಕ್ಲಥಾನ್ ಗಳಂತಹ ಕಾರ್ಯಕ್ರಮಗಳನ್ನು ಸಂಘಟಿಸಿ ಮತದಾರರಲ್ಲಿ ಮತದಾನ ಕುರಿತು ಕಿಚ್ಚು ಹೊತ್ತಿಸಬೇಕು.
- ಹೋರ್ಡಿಂಗ್ಸ್ ಗಳು, ಡಿಜಿಟಲ್ ವೇದಿಕೆಗಳು, ಕಿಯಾಸ್ಕ್ ಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ[ಸಿ.ಎಸ್.ಸಿಗಳು]ನ್ನು ಚುನಾವಣಾ ಜಾಗೃತಿ ಸಂದೇಶಗಳನ್ನು ಬಿತ್ತರಿಸಲು ಬಳಕೆ ಮಾಡಿಕೊಳ್ಳಬೇಕು.
- ಮತದಾರರ ಪ್ರಭಾವ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ತೊಡಗಿಕೊಳ್ಳುವಂತೆ ಮಾಡಬೇಕು.
ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಅಹ್ಮದಾಬಾದ್, ದೆಹಲಿ, ಮುಂಬೈ, ಪುಣೆ, ಥಾಣೆ, ನಾಗ್ಪುರ್, ಪಾಟ್ನಾ ಸಾಹೀಬ್, ಲಖನೌ ಮತ್ತು ಕಾನ್ಪುರ ಭಾಗದ ಪುರಸಭೆ ಆಯುಕ್ತರು, ಬಿಹಾರ ಹಾಗೂ ಉತ್ತರ ಪ್ರದೇಶದ ಜಿಲ್ಲಾ ಚುನಾವಣಾಧಿಕಾರಿಗಳು ಭಾಗವಹಿಸಿದ್ದರು. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ದೆಹಲಿಯ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ್, ತಮಿಳುನಾಡು, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ವರ್ಚುವಲ್ ಮೂಲಕ ಸಮಾವೇಶದಲ್ಲಿ ಭಾಗವಹಿಸಿದ್ದರು.
ಹಿನ್ನೆಲೆ:
ಅಂದಾಜು 297 ಅರ್ಹ ಮತದಾರರು 2019 ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ಪೂರ್ವಭಾವಿ ಕ್ರಮಗಳಿಗೆ ಕರೆ ನೀಡುವುದಕ್ಕೆ ಒತ್ತು ಕೊಡಬೇಕು. ಇದಲ್ಲದೆ, ವಿವಿಧ ರಾಜ್ಯಗಳಾದ್ಯಂತ ಇತ್ತೀಚಿನ ಚುನಾವಣೆಗಳು ಚುನಾವಣಾ ಪ್ರಕ್ರಿಯೆಯ ಕಡೆಗೆ ನಗರ ನಿರಾಸಕ್ತಿಯ ಪ್ರವೃತ್ತಿಯನ್ನು ಎತ್ತಿ ತೋರಿಸಿವೆ, ಇವು ಉದ್ದೇಶಿತ ಮಧ್ಯಸ್ಥಿಕೆಗಳು ಮತ್ತು ಸಹಯೋಗದ ಪ್ರಯತ್ನಗಳನ್ನು ಸಮರ್ಥಿಸುತ್ತವೆ.
2019 ರ ಸಾಮಾನ್ಯ ಚುನಾವಣೆಯಿಂದ ಲೋಕಸಭೆಗೆ ಅತಿ ಕಡಿಮೆ ಮತದಾನವನ್ನು ಹೊಂದಿರುವ 50 ಲೋಕಸಭಾ ಕ್ಷೇತ್ರಗಳಲ್ಲಿ, 17 ನಗರಗಳ ನಿರಾಸಕ್ತಿಯ ದುರದೃಷ್ಟಕರ ಪ್ರವೃತ್ತಿ ಪ್ರತಿಬಿಂಬಿಸುವ ಚಿತ್ರಣ ಮಹಾನಗರಗಳಲ್ಲಿ ಅಥವಾ ಪ್ರಮುಖ ನಗರಗಳಲ್ಲಿ ಕಂಡುಬಂದಿವೆ. ಕಳೆದ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಇದೇ ವಿಧಾನ ಕಂಡುಬಂದಿದೆ. ಗುಜರಾತ್ ರಾಜ್ಯ ಸಾಮಾನ್ಯ ವಿಧಾನಸಭೆ ಚುನಾವಣೆ 2022 ರಲ್ಲಿ, ಕೈಗಾರಿಕಾ ಸ್ಥಾಪನೆಗಳನ್ನು ಹೊಂದಿರುವ ಕಚ್ಛ್ ಜಿಲ್ಲೆಯ ಗಾಂಧಿಧಾಮ್ ವಿಧಾನಸಭಾ ಚುನಾವಣೆಯಲ್ಲಿ 48.14% ರಷ್ಟು ಕಡಿಮೆ ಮತದಾನ ದಾಖಲಾಗಿದೆ. 2017 ರಲ್ಲಿ ಕಳೆದ ಚುನಾವಣೆಗಿಂತ ಸುಮಾರು 6% ರಷ್ಟು ತೀವ್ರ ಕುಸಿತವನ್ನು ದಾಖಲಿಸಿದೆ. ಅದೇ ರೀತಿ, ಹಿಮಾಚಲ ಪ್ರದೇಶದ ಸಾಮಾನ್ಯ ಚುನಾವಣೆಯಿಂದ ಎಸ್.ಎಲ್.ಎ 2022 ರಲ್ಲಿ, ಶಿಮ್ಲಾ ಜಿಲ್ಲೆಯ (ರಾಜ್ಯ ರಾಜಧಾನಿ) ಶಿಮ್ಲಾದಲ್ಲಿ ರಾಜ್ಯದ ಸರಾಸರಿ ಮತದಾನ 75.78% ರ ವಿರುದ್ಧ 63.48% ರಷ್ಟು ಕಡಿಮೆ ಮತದಾನವನ್ನು ದಾಖಲಿಸಿದೆ. ಸೂರತ್‌ನ ನಗರ ವಿಧಾನಸಭಾ ಕ್ಷೇತ್ರಗಳಿಗಿಂತ ಎಲ್ಲಾ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚು ಮತ ಚಲಾಯಿಸಿರುವುದನ್ನು ಗಮನಿಸಲಾಗಿದೆ. ಅತ್ಯಧಿಕ ಗ್ರಾಮೀಣ ಭಾಗ ಹೊಂದಿರುವ ಸೂರತ್‌ನ ಕಡಿಮೆ ನಗರ ವಿಧಾನಸಭಾ ಕ್ಷೇತ್ರದಲ್ಲಿನ ವ್ಯತ್ಯಾಸವು 25% ನಷ್ಟಿದೆ. ಅದೇ ರೀತಿ, ಕರ್ನಾಟಕ 2023 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ, ಬೆಂಗಳೂರಿನ ಬೊಮ್ಮನಹಳ್ಳಿ (ಬೆಂಗಳೂರು ದಕ್ಷಿಣ) ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಸರಾಸರಿ ಮತದಾನ 73.84% ಗೆ ಹೋಲಿಸಿದರೆ 47.5% ನಷ್ಟು ಕಡಿಮೆ ಮತದಾನವನ್ನು ದಾಖಲಿಸಿದೆ.
2019 ರ ಸಾಮಾನ್ಯ ಲೋಕಸಭಾ ಚುನಾವಣೆಯಲ್ಲಿ 50 ಲೋಕಸಭಾ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾದ ಪಟ್ಟಿ
ಕ್ರಮ ಸಂಖೆಯ
|
ರಾಜ್ಯದ ಹೆಸರು
|
ಪಿಸಿ ಸಂಖ್ಯೆ .
|
ಲೋಕಸಭಾ ಕ್ಷೇತ್ರದ ಹೆಸರು
|
ಪಿಸಿ ವಿಟಿಆರ್ (%)
|
ರಾಜ್ಯ ವಿಟಿಆರ್ (%)
|
1
|
ಜಮ್ಮು ಮತ್ತು ಕಾಶ್ಮೀರ
|
3
|
ಅನಂತನಾಗ್
|
8.98
|
44.97
|
2
|
ಜಮ್ಮು ಮತ್ತು ಕಾಶ್ಮೀರ
|
2
|
ಶ್ರೀನಗರ
|
14.43
|
44.97
|
3
|
ಜಮ್ಮು ಮತ್ತು ಕಾಶ್ಮೀರ
|
1
|
ಬಾರಾಮುಲ್ಲಾ
|
34.60
|
44.97
|
4
|
ತೆಲಂಗಾಣ
|
9
|
ಹೈದರಾಬಾದ್
|
44.84
|
62.77
|
5
|
ಮಹಾರಾಷ್ಟ್ರ
|
24
|
ಕಲ್ಯಾಣ್
|
45.31
|
61.02
|
6
|
ಬಿಹಾರ
|
30
|
ಪಾಟ್ನಾ ಸಾಹಿಬ್
|
45.80
|
57.33
|
7
|
ತೆಲಂಗಾಣ
|
8
|
ಸಿಕಂದ್ರಾಬಾದ್
|
46.50
|
62.77
|
8
|
ಉತ್ತರ ಪ್ರದೇಶ
|
51
|
ಫುಲ್ಪುರ್
|
48.70
|
59.21
|
9
|
ಬಿಹಾರ
|
29
|
ನಳಂದಾ
|
48.79
|
57.33
|
10
|
ಬಿಹಾರ
|
35
|
ಕರಕಟ್
|
49.09
|
57.33
|
11
|
ಮಹಾರಾಷ್ಟ್ರ
|
25
|
ಥಾಣೆ
|
49.39
|
61.02
|
12
|
ತೆಲಂಗಾಣ
|
7
|
ಮಲ್ಕಾಜಗಿರಿ
|
49.63
|
62.77
|
13
|
ಬಿಹಾರ
|
39
|
ನಾವಡ
|
49.73
|
57.33
|
14
|
ಮಹಾರಾಷ್ಟ್ರ
|
34
|
ಪುಣೆ
|
49.89
|
61.02
|
15
|
ಮಹಾರಾಷ್ಟ್ರ
|
31
|
ಮುಂಬೈ ದಕ್ಷಿಣ
|
51.59
|
61.02
|
16
|
ಉತ್ತರ ಪ್ರದೇಶ
|
43
|
ಕಾನ್ಪುರ
|
51.65
|
59.21
|
17
|
ಬಿಹಾರ
|
36
|
ಜಹಾನಾಬಾದ್
|
51.76
|
57.33
|
18
|
ಬಿಹಾರ
|
32
|
ಅರ್ರಾಹ್
|
51.81
|
57.33
|
19
|
ಉತ್ತರ ಪ್ರದೇಶ
|
52
|
ಅಲಹಾಬಾದ್
|
51.83
|
59.21
|
20
|
ಉತ್ತರ ಪ್ರದೇಶ
|
58
|
ಶ್ರಾವಸ್ತಿ
|
52.08
|
59.21
|
21
|
ಉತ್ತರ ಪ್ರದೇಶ
|
59
|
ಗೊಂಡ
|
52.20
|
59.21
|
22
|
ಉತ್ತರ ಪ್ರದೇಶ
|
60
|
ಡೊಮರಿಯಾಗಂಜ್
|
52.26
|
59.21
|
23
|
ಉತ್ತರಾಖಂಡ
|
3
|
ಅಲ್ಮೋರಾ
|
52.31
|
61.88
|
24
|
ಮಹಾರಾಷ್ಟ್ರ
|
23
|
ಭಿವಂಡಿ
|
53.20
|
61.02
|
25
|
ತೆಲಂಗಾಣ
|
10
|
ಚೇವೆಲ್ಲಾ
|
53.25
|
62.77
|
26
|
ಉತ್ತರ ಪ್ರದೇಶ
|
78
|
ಭದೋಹಿ
|
53.53
|
59.21
|
27
|
ಉತ್ತರ ಪ್ರದೇಶ
|
39
|
ಪ್ರತಾಪಗಢ
|
53.56
|
59.21
|
28
|
ಬಿಹಾರ
|
37
|
ಔರಂಗಾಬಾದ್
|
53.67
|
57.33
|
29
|
ಮಹಾರಾಷ್ಟ್ರ
|
29
|
ಮುಂಬೈ ಉತ್ತರ ಕೇಂದ್ರ
|
53.68
|
61.02
|
30
|
ಕರ್ನಾಟಕ
|
26
|
ಬೆಂಗಳೂರು ದಕ್ಷಿಣ
|
53.70
|
68.81
|
31
|
ಬಿಹಾರ
|
6
|
ಮಧುಬನಿ
|
53.81
|
57.33
|
32
|
ಬಿಹಾರ
|
19
|
ಮಹಾರಾಜಗಂಜ್
|
53.82
|
57.33
|
33
|
ಬಿಹಾರ
|
33
|
ಬಕ್ಸರ್
|
53.95
|
57.33
|
34
|
ಉತ್ತರ ಪ್ರದೇಶ
|
37
|
ಅಮೇಥಿ
|
54.08
|
59.21
|
35
|
ಉತ್ತರ ಪ್ರದೇಶ
|
62
|
ಸಂತ ಕಬೀರ್ ನಗರ
|
54.20
|
59.21
|
36
|
ಕರ್ನಾಟಕ
|
25
|
ಬೆಂಗಳೂರು ಕೇಂದ್ರ
|
54.32
|
68.81
|
37
|
ಉತ್ತರ ಪ್ರದೇಶ
|
72
|
ಬಲ್ಲಿಯಾ
|
54.35
|
59.21
|
38
|
ಮಹಾರಾಷ್ಟ್ರ
|
27
|
ಮುಂಬೈ ವಾಯುವ್ಯ
|
54.37
|
61.02
|
39
|
ಉತ್ತರ ಪ್ರದೇಶ
|
57
|
ಕೈಸರ್‌ಗಂಜ್
|
54.39
|
59.21
|
40
|
ಮಧ್ಯಪ್ರದೇಶ
|
2
|
ಭಿಂಡ್
|
54.53
|
71.20
|
41
|
ಉತ್ತರ ಪ್ರದೇಶ
|
50
|
ಕೌಶಾಂಬಿ
|
54.56
|
59.21
|
42
|
ಬಿಹಾರ
|
34
|
ಸಸಾರಾಮ್ (ಎಸ್.ಸಿ)
|
54.57
|
57.33
|
43
|
ಬಿಹಾರ
|
18
|
ಸಿವಾನ್
|
54.73
|
57.33
|
44
|
ಕರ್ನಾಟಕ
|
24
|
ಬೆಂಗಳೂರು ಉತ್ತರ
|
54.76
|
68.81
|
45
|
ಉತ್ತರ ಪ್ರದೇಶ
|
35
|
ಲಕ್ನೋ
|
54.78
|
59.21
|
46
|
ಉತ್ತರ ಪ್ರದೇಶ
|
68
|
ಲಾಲ್ಗಂಜ್
|
54.86
|
59.21
|
47
|
ಬಿಹಾರ
|
28
|
ಮುಂಗೇರ್
|
54.90
|
57.33
|
48
|
ಮಹಾರಾಷ್ಟ್ರ
|
10
|
ನಾಗ್ಪುರ
|
54.94
|
61.02
|
49
|
ಉತ್ತರಾಖಂಡ
|
2
|
ಗರ್ವಾಲ್
|
55.17
|
61.88
|
50
|
ರಾಜಸ್ಥಾನ
|
10
|
ಕರೌಲಿ-ಧೋಲ್ಪುರ್
|
55.18
|
66.34
|
ಗಮನಿಸಿ: ಬಣ್ಣದ ಹಿನ್ನೆಲೆ ಹೊಂದಿರುವ ಸಾಲುಗಳಿಗೆ ಅನುಗುಣವಾದ ಲೋಕಸಭಾ ಕ್ಷೇತ್ರಗಳನ್ನು ಮೆಟ್ರೋ ಅಥವಾ ಪ್ರಮುಖ ನಗರಗಳ ಪಿಸಿಗಳೆಂದು ಗುರುತಿಸಲಾಗುತ್ತದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಈ ಸವಾಲುಗಳನ್ನು ನಿವಾರಿಸಲು ಇಸಿಐ ಸೂಕ್ತವಾದ ಉಪಕ್ರಮಗಳನ್ನು ಕೈಗೊಂಡಿದ್ದು, ಮತದಾರರನ್ನು ತೊಡಗಿಸಿಕೊಳ್ಳುವ ಮತ್ತು ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿದೆ.
- ಮತದಾರರ ಪ್ರಮಾಣ ಹೆಚ್ಚಿಸುವ ಯೋಜನೆ [ಟಿಐಪಿ]ಯನ್ನು ಮತಗಟ್ಟೆಗಳ ಮಧ್ಯಸ್ಥಿಕೆಯೊಂದಿಗೆ ಗುರಿ ನಿಗದಿಪಡಿಸುವುದು.
- ವೈವಿಧ್ಯಮಯ ಜನಸಂಖ್ಯಾ ಗುಂಪುಗಳನ್ನು ಹೊಂದಿರುವ ಮತದಾನ ಕೇಂದ್ರಗಳಿಗೆ ಜಿಲ್ಲೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳನ್ನು ರೂಪಿಸುವುದು
- ಮತದಾನದ ಪ್ರಮಾಣ ಹೆಚ್ಚಿಸಲು ಪಾಲುದಾರರ ಸಹಭಾಗಿತ್ವವನ್ನು ಮತ್ತು ಜಾಗೃತಿ ಪ್ರಯತ್ನಗಳನ್ನು ವಿಸ್ತರಿಸುವುದು
- ಕಾರ್ಯತಂತ್ರದ ಪಾಲುದಾರಿಕೆಗಳ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಚುನಾವಣಾ ಸಾಕ್ಷರತೆಯನ್ನು ಔಪಚಾರಿಕಗೊಳಿಸುವುದು.
- ಯುವ ಮತದಾರರಿಗೆ ಸ್ಫೂರ್ತಿ ನೀಡಲು ರಾಷ್ಟ್ರೀಯ ಪ್ರಾಮುಖ್ಯತೆಯ ವ್ಯಕ್ತಿಗಳನ್ನು ತೊಡಗಿಸಿಕೊಳ್ಳುವುದು
- #ಮೇರಾ ಪೆಹಲಾ ಓಟ್ ದೇಶ್ ಕಿ ಲಿಯೆ, ಎಂಬ ಮಾದರಿಯಲ್ಲಿ ಗುರಿ ನಿಗದಿಪಡಿಸುವುದು ಮತ್ತು ಬಹುಮಾಧ್ಯಮ ಅಭಿಯಾನಗಳನ್ನು ಆರಂಭಿಸುವುದು
- ಪರಿಷ್ಕರಿಸಿದ ಮತದಾರರ ಪಟ್ಟಿ ಮತ್ತು ಮತದಾನ ಕೇಂದ್ರಗಳಲ್ಲಿ ಪ್ರವೇಶ ಸ್ನೇಹಿ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳುವುದು.
- ಪಾರದರ್ಶಕತೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮಾಹಿತಿ ತಂತ್ರಜ್ಞಾನ ಆಪ್ ಗಳಿಗೆ ಉತ್ತೇಜನ ನೀಡುವುದು
- ಚುನಾವಣೆ ನಡೆಸಲು ಚುನಾವಣಾಧಿಕಾರಿಗಳಿಗೆ ಅವಿರತವಾಗಿ ತರಬೇತಿ ನೀಡುವುದು
ಭಾರತೀಯ ಚುನಾವಣಾ ಆಯೋಗವು ನಾಗರಿಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಮತದಾರರ ಭಾಗವಹಿಸುವಿಕೆಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವ ಜೊತೆಗೆ ಉಜ್ವಲ ಪ್ರಜಾಪ್ರಭುತ್ವವನ್ನು ಬೆಳೆಸಲು ಬದ್ಧವಾಗಿದೆ.
******
(Release ID: 2017310)
Visitor Counter : 240
Read this release in:
Tamil
,
Marathi
,
Telugu
,
Malayalam
,
English
,
Urdu
,
Hindi
,
Nepali
,
Assamese
,
Punjabi
,
Gujarati
,
Odia