ಚುನಾವಣಾ ಆಯೋಗ
azadi ka amrit mahotsav

ಐಎಎಸ್ ಮತ್ತು ಐಪಿಎಸ್ ನ್ನು ನೀಡದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು (DMs) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು(SPs) ವರ್ಗಾವಣೆ ಮಾಡಿರುವ ಚುನಾವಣಾ ಆಯೋಗ; ಗುಜರಾತ್, ಪಂಜಾಬ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 8 ನಾನ್-ಕೇಡರ್ ಎಸ್‌ಪಿಗಳು/ಎಸ್‌ಎಸ್‌ಪಿಗಳು ಮತ್ತು 5 ನಾನ್-ಕೇಡರ್ ಡಿಎಂಗಳ ವರ್ಗಾವಣೆ

ಪ್ರಮುಖ ರಾಜಕಾರಣಿಗಳ ಸಂಬಂಧಿಕರು ಡಿಎಂ/ಎಸ್‌ಪಿ ಹುದ್ದೆಗಳನ್ನು ಹೊಂದಿರುವವರ ವರ್ಗಾವಣೆ; ಎಸ್‌ಎಸ್‌ಪಿ ಬಟಿಂಡಾ (ಪಂಜಾಬ್) ಮತ್ತು ಎಸ್‌ಪಿ ಸೋನಿತ್‌ಪುರ (ಅಸ್ಸಾಂ) ಅವರ ವರ್ಗಾವಣೆ

Posted On: 21 MAR 2024 4:36PM by PIB Bengaluru

ಪಿಐಬಿ ದೆಹಲಿ ಮಾರ್ಚ್ 21: 2024 ರ ಲೋಕಸಭಾ ಚುನಾವಣೆಗಳನ್ನು ನ್ಯಾಯಯುತವಾಗಿ ನಡೆಸುವ ತನ್ನ ಬದ್ಧತೆಯನ್ನು ಮುಂದಿಟ್ಟುಕೊಂಡು, ಭಾರತೀಯ ಚುನಾವಣಾ ಆಯೋಗವು (ECI) ಇಂದು ಗುಜರಾತ್, ಪಂಜಾಬ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಮತ್ತು ಸೂಪರಿಂಟೆಂಡೆಂಟ್ ಆಫ್ ಪೊಲೀಸ್(SP) ಆಗಿ ನಾಯಕತ್ವ ಸ್ಥಾನಗಳಲ್ಲಿ ನಿಯೋಜಿಸಲಾದ ನಾನ್-ಕೇಡರ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಡಿಎಂ ಮತ್ತು ಎಸ್‌ಪಿ ಹುದ್ದೆಗಳನ್ನು ಕ್ರಮವಾಗಿ ಭಾರತೀಯ ಆಡಳಿತ ಮತ್ತು ಭಾರತೀಯ ಪೊಲೀಸ್ ಸೇವೆಯ ಅಧಿಕಾರ ಸಮಾನಕ್ಕೆ ಸೇರಿಸಲಾಗಿದೆ. 

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖ್ಬೀರ್ ಸಿಂಗ್ ಸಂಧು ಅವರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ವರ್ಗಾವಣೆಗೊಳ್ಳಲಿರುವ ಅಧಿಕಾರಿಗಳು:

1. ಗುಜರಾತ್ - ಛೋಟಾ ಉದಯಪುರ ಮತ್ತು ಅಹಮದಾಬಾದ್ ಗ್ರಾಮಾಂತರ ಜಿಲ್ಲೆಗಳ ಎಸ್ಪಿ

2. ಪಂಜಾಬ್ - ಪಠಾಣ್‌ಕೋಟ್, ಫಾಜಿಲ್ಕಾ, ಜಲಂಧರ್ ಗ್ರಾಮಾಂತರ ಮತ್ತು ಮಲೇರ್‌ಕೋಟ್ಲಾ ಜಿಲ್ಲೆಗಳ ಎಸ್‌ಎಸ್‌ಪಿ

3. ಒಡಿಶಾ - ಧೆಂಕನಾಲ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ದಿಯೋಗರ್ ಮತ್ತು ಕಟಕ್ ಗ್ರಾಮಾಂತರ ಜಿಲ್ಲೆಗಳ ಸೂಪರಿಂಟೆಂಡೆಂಟ್ ಆಫ್ ಪೊಲೀಸರು. 

4. ಪಶ್ಚಿಮ ಬಂಗಾಳ - ಪುರ್ಬಾ ಮೇದಿನಿಪುರ್, ಜಾರ್ಗ್ರಾಮ್, ಪುರ್ಬಾ ಬರ್ಧಮಾನ್ ಮತ್ತು ಬಿರ್ಭುಮ್ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು

ಇದಕ್ಕೆ ಹೆಚ್ಚುವರಿಯಾಗಿ, ಚುನಾಯಿತ ರಾಜಕೀಯ ಪ್ರತಿನಿಧಿಗಳೊಂದಿಗೆ ಕುಟುಂಬ ಸಂಬಂಧ ಅಥವಾ ರಕ್ತ ಸಂಬಂಧ ಹೊಂದಿರುವ ದೃಷ್ಟಿಯಿಂದ ಪಂಜಾಬ್‌ನ ಎಸ್‌ಎಸ್‌ಪಿ ಬಟಿಂಡಾ ಮತ್ತು ಅಸ್ಸಾಂನ ಎಸ್‌ಪಿ ಸೋನಿತ್‌ಪುರ ಅವರನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ. ಆಡಳಿತ ಪಕ್ಷಪಾತ ಅಥವಾ ರಾಜಿ ಮಾಡಿಕೊಳ್ಳುವ ಸಾಧ್ಯತೆಯ ಆತಂಕವನ್ನು ಹೋಗಲಾಡಿಸಿ ಚುನಾವಣೆಯಲ್ಲಿ ನ್ಯಾಯಯುತ ಪಾರದರ್ಶಕತೆ ತರಲು ಪೂರ್ವಭಾವಿ ಕ್ರಮವಾಗಿ ಈ ಎರಡು ಜಿಲ್ಲೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಚುನಾವಣಾ ಆಯೋಗದ ನಿರ್ದೇಶನದ ಅಡಿಯಲ್ಲಿ, ಎಲ್ಲಾ ಆಯಾ ರಾಜ್ಯ ಸರ್ಕಾರಗಳು ತಕ್ಷಣದಿಂದ ಜಾರಿಗೆ ಬರುವಂತೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್‌ಪಿ/ಎಸ್‌ಎಸ್‌ಪಿ ಅವರ ಪ್ರಸ್ತುತ ಹುದ್ದೆಯಿಂದ ನಾನ್-ಎನ್ ಕಾಡರ್ ಅಧಿಕಾರಿಗಳನ್ನು ತ್ವರಿತವಾಗಿ ವರ್ಗಾಯಿಸಲು ಮತ್ತು ಆಯೋಗಕ್ಕೆ ಅನುಸರಣೆ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

*****


(Release ID: 2016023) Visitor Counter : 125