ಸಂಪುಟ
ಭಾರತದಿಂದ ಭೂತಾನ್ ಗೆ ಪೆಟ್ರೋಲಿಯಂ, ತೈಲ, ಲೂಬ್ರಿಕೆಂಟ್ ಗಳು (ಪಿಒಎಲ್) ಮತ್ತು ಸಂಬಂಧಿತ ಉತ್ಪನ್ನಗಳ ಸಾಮಾನ್ಯ ಪೂರೈಕೆಗಾಗಿ ಭಾರತ ಮತ್ತು ಭೂತಾನ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ
Posted On:
13 MAR 2024 3:24PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದಿಂದ ಭೂತಾನ್ ಗೆ ಪೆಟ್ರೋಲಿಯಂ, ತೈಲ, ಲೂಬ್ರಿಕೆಂಟ್ ಗಳು (ಪಿಒಎಲ್) ಮತ್ತು ಸಂಬಂಧಿತ ಉತ್ಪನ್ನಗಳ ಸಾಮಾನ್ಯ ಪೂರೈಕೆ ಕುರಿತಂತೆ ಭಾರತ ಸರ್ಕಾರ ಮತ್ತು ಭೂತಾನ್ ರಾಯಲ್ ಸರ್ಕಾರದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಯಾವುದೇ ಲಿಂಗ, ವರ್ಗ ಅಥವಾ ಆದಾಯ ಪಕ್ಷಪಾತವನ್ನು ಲೆಕ್ಕಿಸದೆ, ವಿಶೇಷವಾಗಿ ಹೈಡ್ರೋಕಾರ್ಬನ್ ವಲಯದ ಕ್ಷೇತ್ರದಲ್ಲಿ ಭೂತಾನ್ ನೊಂದಿಗೆ ಸುಧಾರಿತ ಆರ್ಥಿಕ ಮತ್ತು ವಾಣಿಜ್ಯ ಸಂಪರ್ಕಗಳೊಂದಿಗೆ ಭಾರತ ಮತ್ತು ಅದರ ನಾಗರಿಕರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಇದು ಹೊಂದಿದೆ.
ಪ್ರಯೋಜನ:
ಈ ತಿಳಿವಳಿಕೆ ಒಪ್ಪಂದವು ಹೈಡ್ರೋಕಾರ್ಬನ್ ವಲಯದಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುತ್ತದೆ ಮತ್ತು ಭೂತಾನ್ ಗೆ ಪೆಟ್ರೋಲಿಯಂ ಉತ್ಪನ್ನಗಳ ಸುರಕ್ಷಿತ ಮತ್ತು ದೀರ್ಘಕಾಲೀನ ಪೂರೈಕೆಯನ್ನು ಖಚಿತಪಡಿಸುತ್ತದೆ.
ಏಕೆಂದರೆ, ಆತ್ಮನಿರ್ಭರ ಭಾರತವನ್ನು ಸಾಕಾರಗೊಳಿಸುವಲ್ಲಿ ರಫ್ತು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಸ್ವಾವಲಂಬಿ ಭಾರತಕ್ಕೆ ಒತ್ತು ನೀಡಲಿದೆ.
ಈ ತಿಳಿವಳಿಕೆ ಒಪ್ಪಂದವು ಭಾರತದ ನೆರೆಹೊರೆಯವರ ಮೊದಲ ನೀತಿಯಲ್ಲಿ ಇಂಧನ ಸೇತುವೆಯಾಗಿ ವ್ಯೂಹಾತ್ಮಕವಾಗಿ ಹೊಂದಿಕೊಳ್ಳುತ್ತದೆ.
***
(Release ID: 2015574)
Visitor Counter : 67
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam