ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿಗಳು ಹಾಗೂ ಶ್ರೀ ಬಿಲ್‌ ಗೇಟ್ಸ್‌ ಭೇಟಿ

Posted On: 29 FEB 2024 11:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯಲ್ಲಿ ಶ್ರೀ ಬಿಲ್ ಗೇಟ್ಸ್ ಅವರನ್ನು ಭೇಟಿಯಾದರು. ಈ ವೇಳೆ ಮಾತನಾಡಿದ ಶ್ರೀ ಬಿಲ್ ಗೇಟ್ಸ್ ಅವರು, "ಸಾರ್ವಜನಿಕ ಒಳಿತಿಗಾಗಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ: ಡಿಪಿಐ- ಮಹಿಳಾ ಮುಂಚೂಣಿ ನೇತೃತ್ವದ ಅಭಿವೃದ್ಧಿ; ಕೃಷಿ, ಆರೋಗ್ಯ ಮತ್ತು ಹವಾಮಾನ ಹೊಂದಾಣಿಕೆಯಲ್ಲಿ ನಾವೀನ್ಯತೆ ಕುರಿತಂತೆ ಸಮಾಲೋಚಿಸಲಾಗಿದೆ," ಎಂದು ಹೇಳಿದರು.

ಪ್ರಧಾನ ಮೋದಿ ಅವರು ಮಾತನಾಡಿ, ನಮ್ಮ ಜಗತ್ತನ್ನು ಉತ್ತಮಗೊಳಿಸುವ ಮತ್ತು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಬಲೀಕರಣಕ್ಕೆ ಪೂರಕವಾದ ಕ್ಷೇತ್ರಗಳ ಕುರಿತು ಇಬ್ಬರೂ ಚರ್ಚಿಸಿದ್ದೇವೆ ಎಂದು ಹೇಳಿದರು.

ಶ್ರೀ ಬಿಲ್ ಗೇಟ್ಸ್ ಅವರ "ಎಕ್ಸ್‌" ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಗಳು, “ನಿಜಕ್ಕೂಇದೊಂದು ಅದ್ಭುತವಾದ ಸಭೆ! ನಮ್ಮ ಜಗತ್ತನ್ನು ಇನ್ನಷ್ಟು ಉತ್ತಮಗೊಳಿಸುವ ಹಾಗೂ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಬಲರನ್ನಾಗಿಸಲಯ ಸಂಬಂಧಪಟ್ಟ  ಕ್ಷೇತ್ರಗಳ ಬಗ್ಗೆ ಚರ್ಚಿಸಲು ಯಾವಾಗಲೂ ಸಂತೋಷವಾಗುತ್ತದೆ @ಬಿಲ್ ಗೇಟ್ಸ್‌,ʼʼ ಎಂದು ಹೇಳಿದ್ದಾರೆ.

***



(Release ID: 2011220) Visitor Counter : 30