ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ಪ್ರಸಾರ ಉದ್ಯಮದ ದೃಢ ರಕ್ಷಕ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್
"ವಿಕಸಿಸುತ್ತಿರುವ ತಾಂತ್ರಿಕ ಭೂಚೌಕಟ್ಟಿಗೆ ಹೊಂದಿಕೊಳ್ಳಲು ಪ್ರಸಾರ ಭಾರತಿ ಮಾಡುತ್ತಿರುವ ದಣಿವರಿಯದ ಪ್ರಯತ್ನಗಳು ಡಿಜಿಟಲ್ ಯುಗದಲ್ಲಿಯೂ ಪ್ರಸ್ತುತತೆ ಹೊಂದಿದೆ ಮತ್ತು ಪ್ರಭಾವಶಾಲಿಯಾಗಿ ಉಳಿದಿವೆ”
ದತ್ತಾಂಶ ಗೌಪ್ಯತೆ ಮತ್ತು ಅತಿ ಮಹತ್ವದ ಸೂಕ್ಷ್ಮ ಮಾಹಿತಿಯ ಭದ್ರತೆ, ಸೂಕ್ಷ್ಮ ಮಾಹಿತಿಯ ರಕ್ಷಣೆಗೆ ಆದ್ಯತೆ ನೀಡಬೇಕು ಮತ್ತು ನಮ್ಮ ಡಿಜಿಟಲ್ ಮೂಲಸೌಕರ್ಯದ ಸಮಗ್ರತೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು: ಶ್ರೀ ಠಾಕೂರ್
"ಉತ್ತಮ-ಗುಣಮಟ್ಟದ, ವೈಯಕ್ತಿಕಗೊಳಿಸಿದ ವಿಷಯಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ, ವಾಹಿನಿಗಳು (ಬ್ರಾಡ್‌ಕಾಸ್ಟರ್) ಮುಂದಿನ ಜನಾಂಗದ (ನೆಕ್ಸ್ಟ್ ಜನ್) ಪ್ರಸಾರದಂತಹ ನವೀನ ತಂತ್ರಜ್ಞಾನಗಳ ಆಯ್ಕೆ ಮಾಡಿಕೊಂಡು ಅವುಗಳನ್ನು ಅಳವಡಿಸಿಕೊಳ್ಳಬೇಕು"
ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹಂಚಿಕೊಳ್ಳುವ, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಪ್ರಸಾರ ಉದ್ಯಮದ ಭವಿಷ್ಯವನ್ನು ರೂಪಿಸುವ ಪಾಲುದಾರಿಕೆಗಳನ್ನು ರೂಪಿಸುವ ಈ ನಿರ್ಣಾಯಕ ಸಹಯೋಗಕ್ಕೆ ಪರಿಪೂರ್ಣ ವೇದಿಕೆಯಾಗಿ “ಬಿ.ಇ.ಎಸ್. ಎಕ್ಸ್‌ಪೋ” ಪ್ರದರ್ಶನ ಕಾರ್ಯನಿರ್ವಹಿಸುತ್ತಿದೆ
Posted On:
15 FEB 2024 5:02PM by PIB Bengaluru
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ನವದೆಹಲಿಯಲ್ಲಿ ಪ್ರಸಾರ ಮತ್ತು ಮಾಧ್ಯಮ ತಂತ್ರಜ್ಞಾನದ 28 ನೇ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಉದ್ಘಾಟನಾ ಅಧಿವೇಶನದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು, “ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ಪ್ರಸಾರ ಉದ್ಯಮದ ದೃಢವಾದ ರಕ್ಷಕವಾಗಿದೆ, ಬುದ್ಧಿವಂತಿಕೆ ಮತ್ತು ದೂರದೃಷ್ಟಿಯಿಂದ ಬದಲಾವಣೆಯ ಗಾಳಿಯ ಮೂಲಕ ಅದನ್ನು ಮುನ್ನಡೆಸುತ್ತಿದೆ. ಸಾರ್ವಜನಿಕ ಸೇವೆಯ ಪ್ರಸಾರವನ್ನು ಉತ್ತೇಜಿಸುವಲ್ಲಿ ಅದರ ಅಚಲವಾದ ಬದ್ಧತೆ, ಅಂತರ್ಗತ ನೀತಿಗಳು, ಮಾಧ್ಯಮ ಸಾಕ್ಷರತಾ ಉಪಕ್ರಮಗಳು ಹಾಗೂ ಪ್ರಸಾರ ಮತ್ತು ಮಾಧ್ಯಮ ಉದ್ಯಮದಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ವಿನ್ಯಾಸ ಮತ್ತು ಅವುಗಳ ಅನುಷ್ಠಾನದಲ್ಲಿ ಭಾರತದಲ್ಲಿ ವೈವಿದ್ಯಮಯ, ಅಂತರ್ಗತ ಮತ್ತು ಜವಾಬ್ದಾರಿ ಹಾಗೂ ಸ್ಥಿತಿಸ್ಥಾಪಕ ಪರಿಸರ ವ್ಯವಸ್ಥೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಡಿಪಾಯ ಹಾಕಿದೆ.
ನಮ್ಮ ರಾಷ್ಟ್ರದ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಗುಣಮಟ್ಟದ ವಿಷಯವನ್ನು ಒದಗಿಸಲು ಸಾರ್ವಜನಿಕ ಸೇವಾ ಪ್ರಸಾರವನ್ನು ಬಲಪಡಿಸಲು ಸಚಿವರು ಕರೆ ನೀಡಿದರು. “ಭಾರತವು ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರೀಮಂತ ಚಿತ್ರಣವನ್ನು ಗುರುತಿಸಿ ಅದರ ವಿಶಿಷ್ಟ ಮಾರ್ಗವನ್ನು ಕೆತ್ತಬೇಕು. ನಮ್ಮ ರಾಷ್ಟ್ರದ ನಿರೂಪಣೆಯನ್ನು ರೂಪಿಸುವಲ್ಲಿ ಪ್ರಸಾರ ಭಾರತಿ ಪ್ರಮುಖ ಪಾತ್ರ ವಹಿಸಿದೆ” ಎಂದು ಅವರು ಹೇಳಿದರು. “ದೂರದರ್ಶನದ ಕಪ್ಪು-ಬಿಳುಪು ಪರದೆಗಳಿಂದ ಅದರ ಹೆಚ್.ಡಿ ಮತ್ತು ಈಗ 4ಕೆ ಡಿಜಿಟಲ್ ತಂತ್ರಜ್ಞಾನ ಪರಿವರ್ತನೆ, ಅನಲಾಗ್ ಮೀಡಿಯಂ ವೇವ್‌ನಿಂದ ಡಿ.ಆರ್.ಎಂ. ಮತ್ತು ಈಗ ದೂರದರ್ಶನ, ಆಕಾಶವಾಣಿಯ ಎಫ್.ಎಂ ಮತ್ತು ಆಲ್ ಇಂಡಿಯಾ ರೇಡಿಯೊದ ವೈವಿಧ್ಯಮಯ ಕಾರ್ಯಕ್ರಮಗಳು ತಿಳಿಸುತ್ತಿವೆ, ಜೊತೆಗೆ ಭಾರತೀಯರ ಪಾಲಿಗೆ ಸಾಕಷ್ಟು ಶಿಕ್ಷಣ ಮತ್ತು ಮನರಂಜನೆಯನ್ನು ನೀಡಿವೆ, ನೀಡುತ್ತಲಿವೆ. ಅನಲಾಗ್ ಯುಗದಿಂದ ಇಂದಿನ ಡೈನಾಮಿಕ್ ಡಿಜಿಟಲ್ ಲ್ಯಾಂಡ್‌ಸ್ಕೇಪ್‌ನವರೆಗೆ, ನಮ್ಮ ಪ್ರಸಾರಕರು ಸ್ಥಿತಿಸ್ಥಾಪಕತ್ವ, ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ಅಚಲವಾದ ಬದ್ಧತೆಯಿಂದ ಗುರುತಿಸಲ್ಪಟ್ಟ ಹಾದಿಯಲ್ಲಿ ಸಾಗಿ ಬಹದೂರ ಬಂದಿದ್ದಾರೆ" ಎಂದು ಅವರು ಹೇಳಿದರು.
“ತಾಂತ್ರಿಕ ಪ್ರಗತಿಯು ನೂತನ ಅವಕಾಶಗಳು ಮತ್ತು ಸವಾಲುಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ಬಹುಮುಖ ವೇದಿಕೆಗಳಲ್ಲಿ ಉತ್ತಮ-ಗುಣಮಟ್ಟದ, ವೈಯಕ್ತಿಕಗೊಳಿಸಿದ ವಿಷಯದ ಬೇಡಿಕೆ ಹೆಚ್ಚುತ್ತಿದೆ” ಎಂದು ಶ್ರೀ ಠಾಕೂರ್ ಹೇಳಿದರು. “ಆ ನಿಟ್ಟಿನಲ್ಲಿ, ಇತ್ತೀಚಿನ ಪೀಳಿಗೆಯ ಪ್ರಸಾರ ಸಾಧನಗಳನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ. ನಮ್ಮ ವೈಜ್ಞಾನಿಕ ಪ್ರತಿಭೆಯನ್ನು ಪೋಷಿಸುವ ಮತ್ತು ಉದ್ಯಮ ಮತ್ತು ಶೈಕ್ಷಣಿಕ ನಡುವೆ ಪಾಲುದಾರಿಕೆಯನ್ನು ಬೆಳೆಸುವ ಸ್ಥಳೀಯ ಸಂಶೋಧನೆ ಮತ್ತು ಅಭಿವೃದ್ಧಿ(ಆರ್ & ಡಿ)ಗಳಿಗೆ ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ಇಂದು ಸ್ವಾವಲಂಬಿ ಪ್ರಸಾರಕ್ಕಾಗಿ, ನಮ್ಮ ಕಾರ್ಯಗಳು ನಮ್ಮ ಕನಸಿನ ಯಶಸ್ಸನ್ನು ನಿರ್ಧರಿಸುತ್ತವೆ” ಎಂದು ಹೇಳಿದರು.
“ಹೊಸ ಡೈರೆಕ್ಟ್ ಟು ಮೊಬೈಲ್ (ಡಿ2ಎಂ) ತಂತ್ರಜ್ಞಾನಗಳು ದೂರದರ್ಶನಕ್ಕೆ ಅವಕಾಶವೂ ಹೌದು, ಸವಾಲೂ ಕೂಡಾ ಹೌದು ಎನ್ನಬಹುದು. ಮಾತ್ರವಲ್ಲದೆ, ಹ್ಯಾಂಡ್‌ಹೆಲ್ಡ್ ಸಾಧನಗಳಲ್ಲಿ- ಮೊಬೈಲ್ ಫೋನ್‌ಗಳು, ಪ್ಯಾಡ್‌ಗಳು ಇತ್ಯಾದಿಗಳಲ್ಲಿ ಎಲ್ಲಿಯಾದರೂ, ಯಾವುದೇ ಸಮಯದಲ್ಲಿ, ಅದೂ ಸಹ ಇತರ ಯಾವುದೇ ಅಗತ್ಯವಿಲ್ಲದೇ ಅತ್ಯಾಕರ್ಷಕ ವಿಷಯದ ಅವಕಾಶ-ಸಾಧ್ಯತೆಗಳನ್ನು ನೀಡುತ್ತವೆ. ಇಂಟರ್ನೆಟ್ ನ. ನೆಕ್ಸ್ಟ್ ಜನ್ ಪ್ರಸಾರದಂತಹ ನವೀನ ಪ್ರಸಾರದ ಆಯ್ಕೆಗಳನ್ನು ನಾವು ಅನ್ವೇಷಿಸಬೇಕು ಮತ್ತು ಅಳವಡಿಸಿಕೊಳ್ಳಬೇಕು ಅದು ನಮ್ಮ ಸಮಾಜದ ಎಲ್ಲಾ ಸ್ತರಗಳನ್ನು ಪೂರೈಸಲು ವ್ಯಾಪಕ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಬಳಕೆದಾರರ ಅನುಭವಕ್ಕೆ ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸಬೇಕು. ” ಎಂದು ಸಚಿವರು ಹೇಳಿದರು.
ಅವರು ಡೇಟಾ ಸುರಕ್ಷತೆಯ ಪ್ರಾಮುಖ್ಯತೆಯನ್ನು ಮತ್ತು ಹೆಚ್ಚುತ್ತಿರುವ ಅಂತರ್ ಸಂಪರ್ಕಿತ ಜಗತ್ತಿನ ಕುರಿತಾಗಿ ಮಾತನಾಡುತ್ತಾ, “ಡೇಟಾ ಗೌಪ್ಯತೆ ಮತ್ತು ಸೂಕ್ಷ್ಮ ಮಾಹಿತಿಯ ಸುರಕ್ಷತೆಯನ್ನು ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ. ಸ್ಥಳೀಯ ಸೈಬರ್-ಸುರಕ್ಷತಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಪ್ರಯತ್ನಗಳು ಜಾಗತಿಕ ಡೇಟಾ ಸಂರಕ್ಷಣಾ ನಿಯಮಗಳಿಗೆ ಅನುಗುಣವಾಗಿ ಡೇಟಾ ಸುರಕ್ಷತೆಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತವೆ. ಪ್ರಸಾರ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆಯನ್ನು ಹೆಚ್ಚಿಸಲು ತಂತ್ರಜ್ಞಾನದ ಶಕ್ತಿಯನ್ನು ನಾವು ಬಳಸಿಕೊಳ್ಳುವಂತೆ, ಸೂಕ್ಷ್ಮ ಮಾಹಿತಿಯ ರಕ್ಷಣೆಗೆ ನಾವು ಆದ್ಯತೆ ನೀಡುತ್ತೇವೆ. ನಮ್ಮ ಡಿಜಿಟಲ್ ಮೂಲಸೌಕರ್ಯದ ಸಮಗ್ರತೆಗೆ ಅಗತ್ಯವಾದ ಕ್ರಮಗಳನ್ನು ಎಂದೂ ಮರೆಯಬಾರದು.” ಎಂದು ಹೇಳಿದರು.
ಪರಿಸರದ ಬಗ್ಗೆ ನಮ್ಮ ಜವಾಬ್ದಾರಿಯನ್ನು ಸಭಿಕರಿಗೆ ನೆನಪಿಸಿದ ಸಚಿವರು, “ಪ್ರಸಾರ ಕಾರ್ಯಾಚರಣೆಗಳಲ್ಲಿ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಕೇವಲ ನೈತಿಕ ಅಗತ್ಯವಲ್ಲ, ಬದಲಾಗಿ ಕಾರ್ಯತಂತ್ರದ ಅಗತ್ಯವೂ ಆಗಿದೆ. ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಮೂಲಕ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ, ಎ.ಬಿ.ಯು.ನ "ಗ್ರೀನ್ ಬ್ರಾಡ್‌ಕಾಸ್ಟಿಂಗ್" ಯೋಜನೆಯಂತಹ ಜಾಗತಿಕ ಉಪಕ್ರಮಗಳನ್ನು ಅಳವಡಿಸಿಕೊಂಡು ನಾವು ಮುನ್ನಡೆಯಬೇಕು. ಸೌರಶಕ್ತಿ ಚಾಲಿತ ಪ್ರಸಾರ ಉಪಕರಣಗಳು ಮತ್ತು ಶಕ್ತಿ-ಸಮರ್ಥ ಸ್ಟುಡಿಯೋಗಳಲ್ಲಿನ ಭಾರತದ ಸಂಶೋಧನೆ ಮತ್ತು ಅಭಿವೃದ್ಧಿಯು ಸುಸ್ಥಿರ ಪ್ರಸಾರದಲ್ಲಿ ನಮ್ಮನ್ನು ನಾಯಕರನ್ನಾಗಿ ಮಾಡಲಿದೆ, ಇದು ಪರಿಸರ ಉಸ್ತುವಾರಿಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಪ್ರೇಕ್ಷಕರ ಅಭಿರುಚಿಯ ವಲಸೆ ಮತ್ತು ವೈಯಕ್ತಿಕಗೊಳಿಸಿದ ವಿಷಯದ ಬೇಡಿಕೆಯೊಂದಿಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ರೂಪಾಂತರಕ್ಕೆ ಒಳಗಾಗುತ್ತಿರುವ ಈ ಬದಲಾವಣೆಯನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ನಮ್ಮ ವಿಷಯ ರಚನೆಯ ತಂತ್ರಗಳು, ಇತ್ತೀಚಿನ ತಂತ್ರಜ್ಞಾನ ಅಳವಡಿಕೆ ಮತ್ತು ನಿಯಂತ್ರಕ ಚೌಕಟ್ಟುಗಳು ಈ ಕ್ರಿಯಾತ್ಮಕ ಪರಿಸರದಲ್ಲಿ ಪ್ರಸ್ತುತವಾಗಿ ಉಳಿಯಲು ತ್ವರಿತ ಗತಿಯಲ್ಲಿ ವಿಕಸನಗೊಳ್ಳುವ ಅಗತ್ಯವಿದೆ. ಎಂದು ಕೇಂದ್ರ ಸಚಿವ ಶ್ರೀ ಠಾಕೂರ್ ಅವರು ಹೇಳಿದರು.
ವಿಷಯ ನಿಯಂತ್ರಣವನ್ನು ಎಚ್ಚರಿಕೆಯಿಂದ ಪರಿಗಣಿಸುವ ಅಗತ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವೆ ಸಮತೋಲನವನ್ನು ಸಾಧಿಸುವುದು ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಅತಿಮುಖ್ಯವಾಗಿದೆ. ಜವಾಬ್ದಾರಿಯುತ ಮತ್ತು ನೈತಿಕ ವಿಷಯವನ್ನು ಖಾತ್ರಿಪಡಿಸುವ ಮೂಲಕ ಸಮಂಜಸವಾದ ಗಡಿಗಳಲ್ಲಿ ಸೃಜನಶೀಲ ಅಭಿವ್ಯಕ್ತಿ ಪ್ರವರ್ಧಮಾನಕ್ಕೆ ಬರುವ ವಾತಾವರಣವನ್ನು ನಾವು ಬೆಳೆಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹೇಳಿದರು.
ಎಕ್ಸ್‌ಪೋದ ಈ ಆವೃತ್ತಿಯ ಕುರಿತು ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, “ಬಿ.ಇ.ಎಸ್. ಎಕ್ಸ್‌ಪೋ” ಪ್ರದರ್ಶನವು ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹಂಚಿಕೊಳ್ಳುವ, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಪ್ರಸಾರ ಉದ್ಯಮದ ಭವಿಷ್ಯವನ್ನು ರೂಪಿಸುವ , ಪಾಲುದಾರಿಕೆಗಳನ್ನು ರೂಪಿಸುವ ಈ ನಿರ್ಣಾಯಕ ಸಹಯೋಗಗಳಿಗೆ ಪರಿಪೂರ್ಣ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದರು.
“ಗ್ರಾಹಕರ ಹಿತಾಸಕ್ತಿ ಮತ್ತು ಮಾಧ್ಯಮ ಪಾರದರ್ಶಕತೆಯನ್ನು ರಕ್ಷಿಸುವ ಅಗತ್ಯವನ್ನು ಸಚಿವಾಲಯವು ಉತ್ತಮ ರೀತಿಯಲ್ಲಿ ಅರಿತುಕೊಂಡಿದೆ ಮತ್ತು ಅದರ ಪ್ರಕಾರ ಸಮಾಲೋಚನೆಗಾಗಿ ಕರಡು ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ 2023 ಅನ್ನು ಹೊರತಂದಿದೆ” ಎಂದು ಐ & ಬಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಹೇಳಿದರು.
“ಪ್ರಸಾರ ಕ್ಷೇತ್ರವು ಬೆಳವಣಿಗೆಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ” ಎಂದು ಟ್ರಾಯ್‌ನ ಅಧ್ಯಕ್ಷ ಶ್ರೀ ಅನಿಲ್ ಕುಮಾರ್ ಲಹೋಟಿ ಅವರು ಹೇಳಿದರು.
ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರವನ್ನು ವಿಶೇಷವಾಗಿ ಡಿಜಿಟಲ್ ಮಾಧ್ಯಮವನ್ನು ಈಗ ಬಳಸಿಕೊಳ್ಳುವ ವಿಧಾನಗಳನ್ನು ಪ್ರಸಾರ ಭಾರತಿಯ ಸಿಇಒ ಶ್ರೀ ಗೌರವ್ ದ್ವಿವೇದಿ ಅವರು ವಿವರಿಸಿದರು. “ವೀಕ್ಷಕರು ಈಗ ಹೆಚ್ಚು ವಿಶಾಲವಾದ ಆಯ್ಕೆಗಳನ್ನು ಹೊಂದಿರುವುದರಿಂದ ಇದು ಉತ್ತಮ ವಿಷಯದ ಅಗತ್ಯವನ್ನು ಹೆಚ್ಚಿಸಿದೆ” ಎಂದು ಅವರು ಹೇಳಿದರು. ಡಿ2ಎಂ ಮತ್ತು ಪ್ರಾದೇಶಿಕ (ಟೆರೆಸ್ಟ್ರಿಯಲ್) ಪ್ರಸರಣದ ಅಗತ್ಯತೆಗಳನ್ನು ಪೂರೈಸಲು ಸಾರ್ವಜನಿಕ ಸೇವಾ ಪ್ರಸಾರಕ್ಕಾಗಿ ಸ್ಪೆಕ್ಟ್ರಮ್ ಅನ್ನು ಸಂರಕ್ಷಿಸುವ ಅಗತ್ಯವನ್ನು ಅವರು ವಿವರಿಸಿದರು. ಡಿ2ಎಂ ನಂತಹ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದರಿಂದ ಮಾಧ್ಯಮಗಳು ಎದುರಿಸುತ್ತಿರುವ ನೂತನ ಸವಾಲು ಹಾಗೂ ಅವಕಾಶಗಳ ಕುರಿತಾಗಿ ಬಿಇಎಸ್ ಅಧ್ಯಕ್ಷರಾದ ಶ್ರೀ ಸುನಿಲ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ವಿವರಿಸಿದರು.
******
(Release ID: 2006401)
Visitor Counter : 74
Read this release in:
Khasi
,
English
,
Urdu
,
Marathi
,
Hindi
,
Assamese
,
Bengali-TR
,
Gujarati
,
Odia
,
Tamil
,
Telugu
,
Malayalam