ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಕಸಿತ  ಭಾರತ ಸಂಕಲ್ಪ ಯಾತ್ರೆ


2.34 ಲಕ್ಷ ವಿಕಸಿತ  ಭಾರತ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಂಡವರ ಸಂಖ್ಯೆ 7.22 ಕೋಟಿ ದಾಟಿದೆ

ಶಿಬಿರಗಳಲ್ಲಿ 2.78 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್ ಗಳನ್ನು ನೀಡಲಾಗಿದೆ

3.85 ಕೋಟಿಗೂ ಹೆಚ್ಚು ಜನರ ಕ್ಷಯರೋಗ ತಪಾಸಣೆ ಮಾಡಲಾಗಿದೆ ಮತ್ತು 11.80 ಲಕ್ಷಕ್ಕೂ ಹೆಚ್ಚು ಜನರಿಗೆ  ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಕ್ಕಾಗಿ  ಸಲಹೆ ನೀಡಲಾಗಿದೆ 

42.30 ಲಕ್ಷಕ್ಕೂ ಹೆಚ್ಚು ಜನರನ್ನು ಕುಡಗೋಲು ಕಣ ರೋಗಕ್ಕೆ ತಪಾಸಣೆಗೊಳಪಡಿಸಲಾಗಿದೆ ಮತ್ತು ಸುಮಾರು 71,000 ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಸಲಹೆ ನೀಡಲಾಗಿದೆ

Posted On: 06 FEB 2024 12:00PM by PIB Bengaluru

ಪ್ರಸ್ತುತ ನಡೆಯುತ್ತಿರುವ ವಿಕ್ಷಸಿತ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ, ಇಲ್ಲಿಯವರೆಗೆ ಗ್ರಾಮ ಪಂಚಾಯತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಸಲಾದ 2,34,259 ಆರೋಗ್ಯ ಶಿಬಿರಗಳಲ್ಲಿ ಒಟ್ಟು 7,22,69,014 ಜನರು ಪಾಲ್ಗೊಂಡಿದ್ದಾರೆ.

ಆರೋಗ್ಯ ಶಿಬಿರಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ:

ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ  (ಎಬಿ-ಪಿಎಂಜೆಎವೈ - AB-PMJAY): ವಿಕ್ಷಸಿತ ಭಾರತ ಸಂಕಲ್ಪ ಯಾತ್ರೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಮುಖ ಯೋಜನೆಯಡಿ, ಆಯುಷ್ಮಾನ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಯುಷ್ಮಾನ್ ಕಾರ್ಡ್ ಗಳನ್ನು ನೀಡಲಾಗುತ್ತಿದೆ ಮತ್ತು ಫಲಾನುಭವಿಗಳಿಗೆ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ, 51,03,942 ಕಾರ್ಡ್ ಗಳನ್ನು ವಿತರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 2,78,86,460 ಕಾರ್ಡ್ಗಳನ್ನು ನೀಡಲಾಗಿದೆ.

ಕ್ಷಯರೋಗ (ಟಿಬಿ):  ಕ್ಷಯ ರೋಗದ ರೋಗಲಕ್ಷಣಗಳ ತಪಾಸಣೆಗಾಗಿ ರೋಗಿಗಳ ಕಫ ಪರೀಕ್ಷೆ ಮತ್ತು ಲಭ್ಯವಿರುವಲ್ಲಿ ಎನ್ ಎ ಎ ಟಿ ಯಂತ್ರಗಳನ್ನು ಬಳಸುವ ಮೂಲಕ ನಡೆಸಲಾಗುತ್ತದೆ.  ಕ್ಷಯ ರೋಗ ಇರುವ ಶಂಕಿತ ಪ್ರಕರಣಗಳನ್ನು ಉನ್ನತ ವೈದ್ಯಕೀಯ ಸೌಲಭ್ಯಗಳನ್ನು ಸಂಪರ್ಕಿಸಲು  ಸಲಹೆ ನೀಡಲಾಗುತ್ತಿದೆ.  82ನೇ ದಿನದ ಅಂತ್ಯದ ವೇಳೆಗೆ, 3,85,73,277 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 11,80,445 ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗಾಗಿ  ಸಲಹೆ ನೀಡಲಾಗಿದೆ .

ಪ್ರಧಾನ ಮಂತ್ರಿ ಕ್ತಯರೋಗ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಎ) ಅಡಿಯಲ್ಲಿ, ಕ್ತಯರೋಗದಿಂದ ಬಳಲುತ್ತಿರುವ ರೋಗಿಗಳಿಗೆ ನಿಕ್ಷಯ್ ಮಿತ್ರಾಸ್ ನಿಂದ ನೆರವು ಪಡೆಯಲು ಒಪ್ಪಿಗೆಯನ್ನು ತೆಗೆದುಕೊಳ್ಳಲಾಗುತ್ತಿದೆ. ʼನಿಕ್ಷಯ್ ಮಿತ್ರʼರಾಗಲು ಸಿದ್ಧರಿರುವ ಪಾಲ್ಗೊಳ್ಳುವವರಿಗೆ ಸ್ಥಳದಲ್ಲೇ ನೋಂದಣಿಯನ್ನು ಸಹ ಒದಗಿಸಲಾಗುತ್ತಿದೆ. ಪಿಎಂಟಿಬಿಎಂಎ (PMTBMBA) ಅಡಿಯಲ್ಲಿ ಒಟ್ಟು 4,17,894 ರೋಗಿಗಳು ಒಪ್ಪಿಗೆ ನೀಡಿದ್ದಾರೆ ಮತ್ತು 1,18,546 ಹೊಸ ನಿಕ್ಷಯ್ ಮಿತ್ರ ರನ್ನು ನೋಂದಾಯಿಸಲಾಗಿದೆ.

ನಿಕ್ಷಯ್ ಪೋಶಣ್ ಯೋಜನೆ  (ಎನ್ ಪಿ ವೈ- NPY) ಅಡಿಯಲ್ಲಿ, ನೇರ ಲಾಭ ವರ್ಗಾವಣೆ ಮೂಲಕ ಕ್ತಯರೋಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಬಾಕಿ ಇರುವ ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ, ಖಾತೆಗಳಿಗೆ ಆಧಾರ್  ಜೋಡಿಸಲಾಗುತ್ತಿದೆ. ಅಂತಹ 87,129 ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಾಗಿದೆ.

ಕುಡಗೋಲು ಕಣ ರೋಗ (Sickle Cell Disease): ಪ್ರಧಾನ ಬುಡಕಟ್ಟು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ, ಕುಡಗೋಲು ಕಣ ರೋಗ  ತಪಾಸಣೆಗಾಗಿ ಪಾಯಿಂಟ್ ಆಫ್ ಕೇರ್ (PoC) ಪರೀಕ್ಷೆಗಳ ಮೂಲಕ ಅಥವಾ ಸೊಲ್ಯುಬಿಲಿಟಿ ಮೂಲಕ ಕುಡಗೋಲು ಕಣ ರೋಗ (SCD) ಪತ್ತೆಗಾಗಿ ಅರ್ಹ ಜನರ (40 ವರ್ಷ ವಯಸ್ಸಿನವರೆಗೆ) ತಪಾಸಣೆಯನ್ನು ಮಾಡಲಾಗುತ್ತಿದೆ.   ಪರೀಕ್ಷೆಯಿಂದ ಪತ್ತ ಹಚ್ಚಲಾದ ಪ್ರಕರಣಗಳನ್ನು ನಿರ್ವಹಣೆಗಾಗಿ ಉನ್ನತ ಕೇಂದ್ರಗಳಿಗೆ  ಸಲಹೆ ನೀಡಲಾಗುತ್ತಿದೆ. ಇದುವರೆಗೆ ಒಟ್ಟು 42,30,770 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 70,995 ಜನರ ರೋಗ ಪತ್ತೆಯಾಗಿದೆ ಎಂದು ಕಂಡುಬಂದಿದ್ದು, ಹೆಚ್ಚಿನ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಸಂಪರ್ಕಿಸಲು ಸಲಹೆ ನೀಡಲಾಗಿದೆ. 

ಸಾಂಕ್ರಾಮಿಕವಲ್ಲದ ರೋಗಗಳು (ಎನ್ ಸಿ ಡಿ ಗಳು): ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಅರ್ಹ ಜನಸಂಖ್ಯೆಯ (30 ವರ್ಷ ಮತ್ತು ಮೇಲ್ಪಟ್ಟ)  ತಪಾಸಣೆ ಮಾಡಲಾಗುತ್ತಿದೆ ಮತ್ತು ದೃಢಪಟ್ಟಿದೆ ಎಂದು ಶಂಕಿಸಲಾದ ಪ್ರಕರಣಗಳನ್ನು ಉನ್ನತ ಕೇಂದ್ರಗಳಿಗೆ ಸಂಪರ್ಕಿಸಲು ಸಲಹೆ ನೀಡಲಾಗುತ್ತಿದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕಾಗಿ ಸುಮಾರು 5,40,90,000 ಜನರನ್ನು ಪರೀಕ್ಷಿಸಲಾಗಿದೆ. 20,20,900 ಕ್ಕೂ ಹೆಚ್ಚು ಜನರಿಗೆ  ಅಧಿಕ ರಕ್ತದೊತ್ತಡವಿರುವುದು ದೃಢಪಟ್ಟಿದೆ ಮತ್ತು 14,31,100 ಕ್ಕಿಂತ ಹೆಚ್ಚು ಮಧುಮೇಹಿಗಳಾಗಿರುವ ಅನುಮಾನವಿದೆ   ಮತ್ತು 30,50,100 ಕ್ಕೂ ಹೆಚ್ಚು ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ  ಸಂಪರ್ಕಿಸಲು ಸಲಹೆ ನೀಡಲಾಗಿದೆ. 

ಬೆಳಗಾವಿ, ಕರ್ನಾಟಕ

ದುರ್ಗ್, ಛತ್ತೀಸ್ ಗಢ

ಗೊಡ್ಡಾ, ಜಾರ್ಖಂಡ್

ಹಿನ್ನೆಲೆ:

ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಗೌರವಾನ್ವಿತ ಪ್ರಧಾನ ಮಂತ್ರಿಯವರು ನವೆಂಬರ್ 15 ರಂದು ಜಾರ್ಖಂಡ್ ನ ಖುಂಟಿಯಿಂದ ರಾಷ್ಟ್ರದಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು  ತಲುಪಿಸಲು ಪ್ರಾರಂಭಿಸಿದರು. ವಿಕಸಿತ ಭಾರತ ಸಂಕಲ್ಪ ಯಾತ್ರೆಯಡಿಯಲ್ಲಿ  ಸ್ಥಳದಲ್ಲಿಯೇ ಸೇವೆಗಳ ಭಾಗವಾಗಿ, ಗ್ರಾಮ ಪಂಚಾಯತಿಗಳಲ್ಲಿ ಐಇಸಿ ವ್ಯಾನ್ ನಿಲುಗಡೆಯ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

****



(Release ID: 2003029) Visitor Counter : 59