ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಒಎನ್ ಜಿಸಿ ಸಂಸ್ಥೆಯ ಸಮಗ್ರ ಸಾಗರ ಬದುಕುಳಿಯುವ ತರಬೇತಿ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

Posted On: 06 FEB 2024 2:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೋವಾದಲ್ಲಿ ಒಎನ್ ಜಿಸಿ ಸಂಸ್ಥೆಯ ಸಮಗ್ರ ಸಾಗರ ಬದುಕುಳಿಯುವ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ನೀರಿನೊಳಗಿನಿಂದ ಪಾರಾಗುವ  ವ್ಯಾಯಾಮಗಳ ಬಗ್ಗೆ ಸಂಕ್ಷಿಪ್ತ ವಿವರಣೆ ಮತ್ತು ತರಬೇತಿ ಕೇಂದ್ರದ ಪ್ರಾತ್ಯಕ್ಷಿಕೆಗೂ ಶ್ರೀ ಮೋದಿ ಅವರು  ಸಾಕ್ಷಿಯಾದರು.

ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:

"ಗೋವಾದಲ್ಲಿ ಒಎನ್ ಜಿಸಿಯ ಸಾಗರದಲ್ಲಿ ಬದುಕುಳಿಯುವ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲು ಸಂತೋಷವಾಗಿದೆ. ಈ ಅತ್ಯಾಧುನಿಕ ಕೇಂದ್ರವು ಸಾಗರದಲ್ಲಿ ಬದುಕುಳಿಯುವ ತರಬೇತಿ ಪರಿಸರ ವ್ಯವಸ್ಥೆಯಲ್ಲಿ ತನ್ನದೇ ಛಾಪು ಮೂಡಿಸುವಲ್ಲಿ ಭಾರತಕ್ಕೆ ಒಂದು ಮಹತ್ವದ ಸಂದರ್ಭವಾಗಿದೆ. ಕಠಿಣ ಮತ್ತು ತೀವ್ರವಾದ ತುರ್ತು ಪ್ರತಿಕ್ರಿಯಾ ತರಬೇತಿಯನ್ನು ನೀಡುವುದರಿಂದ, ಇದು ಸಕಾಲದಲ್ಲಿ  ಅನೇಕ ಜೀವಗಳನ್ನು ಉಳಿಸುವುದನ್ನು ಖಚಿತಪಡಿಸುತ್ತದೆ.” ಎಂದವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರೊಂದಿಗೆ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಪೆಟ್ರೋಲಿಯಂ, ತೈಲ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತಿತರರು  ಇದ್ದರು.

ಒಎನ್ ಜಿಸಿ ಸಮುದ್ರ ಸರ್ವೈವಲ್  (ಬದುಕುಳಿಯುವ) ಸೆಂಟರ್

ಒಎನ್ ಜಿಸಿ ಸಮುದ್ರ ಸರ್ವೈವಲ್ (ಜೀವ ರಕ್ಷಣಾ )  ಸೆಂಟರ್ ನ್ನು  ಭಾರತೀಯ ಸಾಗರ ಬದುಕುಳಿಯುವ/ಜೀವ ರಕ್ಷಣಾ ತರಬೇತಿ ಪರಿಸರ ವ್ಯವಸ್ಥೆಯನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಮುನ್ನಡೆಸಲು ಒಂದು ರೀತಿಯ ಸಮಗ್ರ ಸಾಗರ ಬದುಕುಳಿಯುವ/ಜೀವ ರಕ್ಷಣಾ  ತರಬೇತಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ವಾರ್ಷಿಕವಾಗಿ 10,000-15,000 ಸಿಬ್ಬಂದಿಗೆ ತರಬೇತಿ ನೀಡುವ ನಿರೀಕ್ಷೆಯಿದೆ. ಸಿಮ್ಯುಲೇಟೆಡ್ ಮತ್ತು ನಿಯಂತ್ರಿತ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿನ ವ್ಯಾಯಾಮಗಳು ತರಬೇತಿ ಪಡೆಯುವವರ ಸಾಗರ ಬದುಕುಳಿಯುವ/ಜೀವ ರಕ್ಷಣಾ ಕೌಶಲ್ಯಗಳನ್ನು ಹೆಚ್ಚಿಸುತ್ತವೆ ಮತ್ತು ಇದರಿಂದಾಗಿ ನೈಜ  ಜೀವನದ ವಿಪತ್ತುಗಳಿಂದಲೂ  ಸುರಕ್ಷಿತವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

*****

 


(Release ID: 2003025) Visitor Counter : 89