ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಗ್ರ್ಯಾಮೀಸ್ ನಲ್ಲಿ “ಅತ್ಯುತ್ತಮ ಜಾಗತಿಕ ಸಂಗೀತ’’ ಪ್ರಶಸ್ತಿಯನ್ನು ಪಡೆದ ಉಸ್ತಾದ್ ಝಾಕೀರ್ ಹುಸೇನ್‌ ಮತ್ತಿತರರನ್ನು ಅಭಿನಂದಿಸಿದ ಪ್ರಧಾನಿ

प्रविष्टि तिथि: 05 FEB 2024 2:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗ್ರ್ಯಾಮೀಸ್ ನಲ್ಲಿ “ಅತ್ಯುತ್ತಮ ಜಾಗತಿಕ ಸಂಗೀತ’’ ಪ್ರಶಸ್ತಿಯನ್ನು ಪಡೆದ ಸಂಗೀತಗಾರರಾದ ಉಸ್ತಾದ್ ಝಾಕೀರ್ ಹುಸೇನ್‌, ರಾಕೇಶ್ ಚೌರಾಸಿಯಾ, ಶಂಕರ್ ಮಹದೇವನ್, ಸೆಲ್ವಗಣೇಶ್ ವಿ ಮತ್ತು ಗಣೇಶ್ ರಾಜಗೋಪಾಲನ್ ಮತ್ತಿತರರನ್ನು ಇಂದು  ಅಭಿನಂದಿಸಿದ್ದಾರೆ.  

ಅವರ ಫ್ಯೂಷನ್ ಸಂಗೀತ ತಂಡವು ಬ್ಯಾಂಡ್ 'ಶಕ್ತಿ'ಯು ಅತ್ಯಂತ ಪ್ರತಿಷ್ಠಿತ 'ದಿ ಮೊಮೆಂಟ್’ ಪ್ರಶಸ್ತಿಯನ್ನು ಗೆದ್ದಿದೆ.

ಅವರ ಅಸಾಧಾರಣ ಪ್ರತಿಭೆ ಮತ್ತು ಸಂಗೀತದ ಮೇಲಿನ ಶ್ರದ್ಧೆಯು ವಿಶ್ವಾದ್ಯಂತ ಹೃದಯಗಳನ್ನು ಗೆದ್ದಿದೆ, ಇದು ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ.

“ಗ್ರ್ಯಾಮಿಸ್‌ನಲ್ಲಿ ನಿಮ್ಮ ಅದ್ಭುತ ಯಶಸ್ಸಿಗಾಗಿ ಝಾಕೀರ್ ಹುಸೇನ್, ರಾಕೇಶ್ ಚೌರಾಸಿಯಾ, ಶಂಕರ್ ಮಹಾದೇವನ್, ಸೆಲ್ವಗಣೇಶ್ ವಿ ಮತ್ತು ಗಣೇಶ್ ರಾಜಗೋಪಾಲನ್ ಅವರಿಗೆ ಅಭಿನಂದನೆಗಳು. ನಿಮ್ಮ ಅಸಾಧಾರಣ ಪ್ರತಿಭೆ ಮತ್ತು ಸಂಗೀತದೆಡೆಗಿನ ಬದ್ಧತೆ ವಿಶ್ವದಾದ್ಯಂತ ಹೃದಯಗಳನ್ನು ಗೆದ್ದಿದೆ. ಅದಕ್ಕಾಗಿ ಭಾರತವು ಹೆಮ್ಮೆಪಡುತ್ತದೆ ! ಈ ಸಾಧನೆಗಳು ನೀವು ಹಾಕುವ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಇದು ಹೊಸ ಪೀಳಿಗೆಯ ಕಲಾವಿದರಿಗೆ ದೊಡ್ಡ ಕನಸು ಕಾಣಲು ಮತ್ತು ಸಂಗೀತದಲ್ಲಿ ಉತ್ತಮ ಸಾಧನೆ ಮಾಡಲು ಸ್ಪೂರ್ತಿ ನೀಡುತ್ತದೆ."

***


(रिलीज़ आईडी: 2002640) आगंतुक पटल : 144
इस विज्ञप्ति को इन भाषाओं में पढ़ें: Tamil , English , Urdu , Marathi , हिन्दी , Bengali , Bengali-TR , Manipuri , Assamese , Punjabi , Gujarati , Odia , Telugu , Malayalam