ಹಣಕಾಸು ಸಚಿವಾಲಯ
azadi ka amrit mahotsav

ನಮ್ಮ ಯುವಕರು ಕ್ರೀಡೆಯಲ್ಲಿ ಹೊಸ ಆಯಾಮಕ್ಕೆ ಜಿಗಿಯುತ್ತಿರುವ ಬಗ್ಗೆ ದೇಶ ಹೆಮ್ಮೆ ಪಡುತ್ತದೆ: ಕೇಂದ್ರ ಹಣಕಾಸು ಸಚಿವರು


ಯುವಕರಿಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳ ಮೂಲಧನ ಸ್ಥಾಪಿಸಲು ಬಜೆಟ್ ಪ್ರಸ್ತಾಪಿಸಿದೆ

ತಂತ್ರಜ್ಞಾನ-ಪ್ರಿಯ ಯುವಕರಿಗೆ ಇದು ಸುವರ್ಣ ಯುಗವಾಗಲಿದೆ: ಶ್ರೀಮತಿ ನಿರ್ಮಲಾ ಸೀತಾರಾಮನ್

Posted On: 01 FEB 2024 12:42PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ, ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಲಾದ 2024-25ರ ಮಧ್ಯಂತರ ಬಜೆಟ್ ನಲ್ಲಿ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್' ಮಂತ್ರವನ್ನು ಎತ್ತಿ ಹಿಡಿದರು. ನಮ್ಮ ಯುವಕರು ಕ್ರೀಡೆಯಲ್ಲಿ ಹೊಸ ಆಯಾಮಕ್ಕೆ ಏರುತ್ತಿರುವ ಬಗ್ಗೆ ದೇಶ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು.

ಕ್ರೀಡೆಯಲ್ಲಿ ಯುವಕರು:

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸಾಧನೆಗಳನ್ನು ಎತ್ತಿ ತೋರಿಸಿದ ಅವರು, "ಏಷ್ಯನ್ ಗೇಮ್ಸ್ ಮತ್ತು 2023ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪಡೆದ ಅತ್ಯಧಿಕ ಪದಕಗಳ ಸಂಖ್ಯೆಯು ಯುವಕರಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು. ಕೇಂದ್ರ ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ, ಚೆಸ್ ಪ್ರತಿಭೆಯಾದ, ನಂಬರ್ ಒನ್ ಶ್ರೇಯಾಂಕಿತ ಆಟಗಾರನಾದ ನಮ್ಮ ಪ್ರಜ್ಞಾನಂದ ಅವರು 2023ರಲ್ಲಿ ಹಾಲಿ ವಿಶ್ವ ಚಾಂಪಿಯನ್ ಆದ ಮ್ಯಾಗ್ನಸ್ ಕಾರ್ಲ್ಸನ್ ರವರ ವಿರುದ್ಧ ಕಠಿಣ ಹೋರಾಟ ನಡೆಸಿದ್ದಾರೆ ಎಂದು ಹೇಳಿದರು. ಚೆಸ್ ನಲ್ಲಿ ಭಾರತದ ಯಶಸ್ಸಿನ ಬಗ್ಗೆ ಮಾತನಾಡಿದ ಅವರು, "2010 ರಲ್ಲಿದ್ದ 20ಕ್ಕೂ ಹೆಚ್ಚು ಚೆಸ್ ಗ್ರ್ಯಾಂಡ್ ಮಾಸ್ಟರ್ ಗಳಿಗೆ ಹೋಲಿಸಿದರೆ ಇಂದು ಭಾರತದಲ್ಲಿ 80ಕ್ಕೂ ಹೆಚ್ಚು ಚೆಸ್ ಗ್ರ್ಯಾಂಡ್ ಮಾಸ್ಟರ್ ಗಳಿದ್ದಾರೆ" ಎಂದು ಹೇಳಿದರು.

ತಂತ್ರಜ್ಞಾನ-ಪ್ರಿಯ ಯುವಕರಿಗೆ ಮೂಲಧನ:

ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಐವತ್ತು ವರ್ಷಗಳ ಬಡ್ಡಿರಹಿತ ಸಾಲದೊಂದಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಮೂಲಧನವನ್ನು ಸ್ಥಾಪಿಸುವುದಾಗಿ ಪ್ರಸ್ತಾಪ ಮಂಡಿಸಿದರು. ಈ ಮೂಲಧನವು ಕಡಿಮೆ ಅಥವಾ ಶೂನ್ಯ ಬಡ್ಡಿದರಗಳೊಂದಿಗೆ ದೀರ್ಘಾವಧಿಯ ಹಣಕಾಸು ಅಥವಾ ಮರುಹಣಕಾಸು ಸೌಲಭ್ಯವನ್ನು ಒದಗಿಸುತ್ತದೆ. ನಮ್ಮ ತಂತ್ರಜ್ಞಾನ-ಪ್ರಿಯ ಯುವಕರಿಗೆ ಇದು ಸುವರ್ಣ ಯುಗವಾಗಲಿದೆ. ನಮ್ಮ ಯುವಕರ ಶಕ್ತಿ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಕಾರ್ಯಕ್ರಮಗಳನ್ನು ರೂಪಿಸುವ ಅವಶ್ಯಕತೆಯಿದೆ ಎಂದು ಅವರು ತಿಳಿಸಿದರು. ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು ಈ ಮೂಲಧನವು ಖಾಸಗಿ ವಲಯದಲ್ಲಿ ಸನ್ ರೈಸ್ ಡೊಮೇನ್ ಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಗಮನಾರ್ಹವಾಗಿ ಪ್ರೋತ್ಸಾಹಿಸುವಲ್ಲಿ ಬಳಕೆಗೆ ಬರುತ್ತದೆ ಎಂದು ಒತ್ತಿ ಹೇಳಿದರು.

*****
 


(Release ID: 2001425) Visitor Counter : 103