ಹಣಕಾಸು ಸಚಿವಾಲಯ
ಸೌಲಭ್ಯಗಳು ಮತ್ತು ಸೇವೆಗಳ ಗುಣಮಟ್ಟ ಸ್ಥಾಪನೆಯ ಆಧಾರದ ಮೇಲೆ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಪಟ್ಟಿಮಾಡುವ ಶ್ರೇಯಾಂಕ ಚೌಕಟ್ಟು ರೂಪಿಸಲು ಕ್ರಮ ; ಕೇಂದ್ರ ಹಣಕಾಸು ಸಚಿವರು
ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ರಾಜ್ಯಗಳಿಗೆ ದೀರ್ಘಕಾಲೀನ ಬಡ್ಡಿರಹಿತ ಸಾಲ ಒದಗಿಸಲು ಕ್ರಮ.
ನಮ್ಮ ದ್ವೀಪಗಳು, ಲಕ್ಷ ದ್ವೀಪ ಒಳಗೊಂಡಂತೆ ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲ ಸೌಕರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ
Posted On:
01 FEB 2024 12:46PM by PIB Bengaluru
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2024 – 25ನೇ ಸಾಲಿನ ಬಜೆಟ್ ಮಂಡಿಸಿದ್ದು, ಬರುವ 2047 ರ ವೇಳೆಗೆ ವಿಕಸಿತ ಭಾರತದ ಗುರಿ ಸಾಧನೆಗೆ ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ಧಾರೆ.
ಪ್ರಮುಖ ಪ್ರವಾಸಿ ಕೇಂದ್ರಗಳು
ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ಅಭಿವೃದ್ಧಿಗೆ ಉತ್ತೇಜನ ನೀಡಲಿದ್ದು, ಇಂತಹ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿ ಸೂಕ್ತ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಪರಸ್ಪರ ಹಂಚಿಕೆ ಆಧಾರದ ಮೇಲೆ ಇಂತಹ ಪ್ರವಾಸಿ ಕೇಂದ್ರಗಳ ಅಭ್ಯುದಯಕ್ಕೆ ರಾಜ್ಯಗಳಿಗೆ ದೀರ್ಘಕಾಲೀನ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲಾಗುವುದು. ಸೌಲಭ್ಯಗಳು ಮತ್ತು ಸೇವೆಗಳ ಗುಣಮಟ್ಟ ಸ್ಥಾಪನೆಯ ಆಧಾರದ ಮೇಲೆ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಪಟ್ಟಿಮಾಡುವ ಶ್ರೇಯಾಂಕ ಚೌಕಟ್ಟು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದೇಶೀಯ ಪ್ರವಾಸೋದ್ಯಮ
ಮಧ್ಯಮ ವರ್ಗದ ಜನತೆ ಕೂಡ ಪ್ರವಾಸ ಮತ್ತು ಪರೀಶೋಧನೆಯಲ್ಲಿ ತೊಡಗುತ್ತಿದೆ ಮತ್ತು ಸ್ಥಳೀಯ ಉದ್ಯಮಶೀಲತೆಗೆ ಪ್ರವಾಸೋದ್ಯಮ, ಅದರಲ್ಲೂ ವಿಶೇಷವಾಗಿ ಧಾರ್ಮಿಕ ಪ್ರವಾಸೋದ್ಯಮದಲ್ಲಿ ವ್ಯಾಪಕ ಅವಕಾಶಗಳಿವೆ ಎಂದರು.
ದೇಶೀಯ ಪ್ರವಾಸೋದ್ಯಮ, ಬಂದರು ಸಂಪರ್ಕ ಯೋಜನೆಗಳು, ಪ್ರವಾಸೋದ್ಯಮ ಮೂಲ ಸೌಕರ್ಯ ಮತ್ತು ದ್ವೀಪಗಳು, ಲಕ್ಷ ದ್ವೀಪ ಒಳಗೊಂಡಂತೆ ದೇಶೀಯ ಪ್ರವಾಸೋದ್ಯಮದತ್ತ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಇದರಿಂದ ಉದ್ಯೋಗಾವಕಾಶಗಳ ಸೃಜನಶೀಲತೆಗೆ ಅವಕಾಶವಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.
ಭಾರತ ವೈವಿಧ್ಯತೆಯ ದೇಶವಾಗಿದ್ದು, ದೇಶೀಯ ಪ್ರವಾಸೋದ್ಯದಲ್ಲಿ ಜಾಗತಿಕ ಮನ್ನಣೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಇತ್ತೀಚೆಗೆ ಜಿ20 ಶೃಂಗ ಸಭೆಗಳನ್ನು 60 ಕಡೆಗಳಲ್ಲಿ ಮಾಡಿದ್ದು, ಇವೆಲ್ಲವೂ ಜಾಗತಿಕ ಪ್ರೇಕ್ಷಕರ ಗಮನ ಸೆಳೆದಿವೆ. ವ್ಯಾಪಾರ ಮತ್ತು ಸಮ್ಮೇಳನ ಪ್ರವಾಸೋದ್ಯಮ ದೇಶದ ಆರ್ಥಿಕತೆಯನ್ನು ಬಲಪಡಿಸಲಿದೆ ಎಂದು ಹೇಳಿದರು.
****
(Release ID: 2001328)
Visitor Counter : 123
Read this release in:
English
,
Urdu
,
Marathi
,
Hindi
,
Assamese
,
Punjabi
,
Gujarati
,
Odia
,
Tamil
,
Telugu
,
Malayalam