ಹಣಕಾಸು ಸಚಿವಾಲಯ
azadi ka amrit mahotsav

ಹದಿನಾರನೇ ಹಣಕಾಸು ಆಯೋಗಕ್ಕೆ ಸದಸ್ಯರನ್ನು ನೇಮಿಸಿದ ಕೇಂದ್ರ ಸರ್ಕಾರ

प्रविष्टि तिथि: 31 JAN 2024 10:12AM by PIB Bengaluru

ಹದಿನಾರನೇ ಹಣಕಾಸು ಆಯೋಗವನ್ನು ನೀತಿ ಆಯೋಗದ ಮಾಜಿ ಉಪಾಧ್ಯಕ್ಷರಾದ ಶ್ರೀ ಅರವಿಂದ್ ಪನಗಾರಿಯಾ ಅವರು ಅಧ್ಯಕ್ಷರಾಗಿ ದಿನಾಂಕ 31.12.2023 ರಂದು ರಚಿಸಲಾಯಿತು.

ಈಗ ಭಾರತದ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಆಯೋಗಕ್ಕೆ ಈ ಕೆಳಗಿನ ಸದಸ್ಯರನ್ನು ನೇಮಿಸಲಾಗಿದೆ.

1.

ಶ್ರೀ. ಅಜಯ್ ನಾರಾಯಣ್ ಝಾ, 15 ನೇ ಹಣಕಾಸು ಆಯೋಗದ ಮಾಜಿ ಸದಸ್ಯ ಮತ್ತು ವೆಚ್ಚದ ಮಾಜಿ ಕಾರ್ಯದರ್ಶಿ

ಪೂರ್ಣ ಸಮಯದ ಸದಸ್ಯ

2.

ಶ್ರೀಮತಿ ಅನ್ನಿ ಜಾರ್ಜ್ ಮ್ಯಾಥ್ಯೂ, ಮಾಜಿ ವಿಶೇಷ ಕಾರ್ಯದರ್ಶಿ, ವೆಚ್ಚ

ಪೂರ್ಣ ಸಮಯದ ಸದಸ್ಯ

3.

ನಿರಂಜನ್ ರಾಜಾಧ್ಯಾಕ್ಷ, ಡಾ.ಕಾರ್ಯನಿರ್ವಾಹಕ ನಿರ್ದೇಶಕ, ಅರ್ಥಾ ಗ್ಲೋಬಲ್

ಪೂರ್ಣ ಸಮಯದ ಸದಸ್ಯ

4.

ಸೌಮ್ಯ ಕಾಂತಿ ಘೋಷ್, ಡಾ.ಗ್ರೂಪ್ ಚೀಫ್ ಎಕನಾಮಿಕ್ ಅಡ್ವೈಸರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಅರೆಕಾಲಿಕ ಸದಸ್ಯ

ಆಯೋಗದ ಉಲ್ಲೇಖದ ನಿಯಮಗಳನ್ನು 31.12.2023 ರಂದು ಪ್ರಕಟಿಸಲಾಗಿದೆ.

ಹದಿನಾರನೇ ಹಣಕಾಸು ಆಯೋಗವು ತನ್ನ ಶಿಫಾರಸುಗಳನ್ನು ಅಕ್ಟೋಬರ್, 31, 2025 ರೊಳಗೆ ಪೂರೈಕೆ ಮಾಡುವಂತೆ ವಿನಂತಿಸಲಾಗಿದೆ ಹಾಗೂ  ಹದಿನಾರನೇ ಹಣಕಾಸು ಆಯೋಗವು 1ನೇ ಏಪ್ರಿಲ್, 2026 ರಿಂದ ಪ್ರಾರಂಭವಾಗುವ 5 ವರ್ಷಗಳ ಅವಧಿಯನ್ನು ಒಳಗೊಂಡಿದೆ.

(CLICK HERE FOR NOTIFICATION)

****


(रिलीज़ आईडी: 2000889) आगंतुक पटल : 369
इस विज्ञप्ति को इन भाषाओं में पढ़ें: Telugu , English , Urdu , हिन्दी , Marathi , Bengali-TR , Manipuri , Punjabi , Gujarati , Tamil