ಪ್ರಕಟಣಾ ದಿನಾಂಕ:
26 JAN 2024 10:52PM by PIB Bengaluru
ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾರಿಷಸ್ ಪ್ರಧಾನ ಮಂತ್ರಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಆತ್ಮೀಯ ಶುಭಾಶಯ ಕೋರಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಧನ್ಯವಾದ ಸಲ್ಲಿಸಿದರು.
ಜುಗ್ನಾಥ್ ಅವರ ಪೋಸ್ಟ್ಗೆ ಪ್ರಧಾನಿ ಉತ್ತರಿಸಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಪ್ರಧಾನ ಮಂತ್ರಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರಿಗೆ ಧನ್ಯವಾದಗಳು. ಈ ವರ್ಷ ಮತ್ತು ಸದಾ ಕಾಲ ನಮ್ಮ ಸದೃಢವಾದ ದ್ವಿಪಕ್ಷೀಯ ಪಾಲುದಾರಿಕೆ ಮುಂದುವರೆಸುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.
***