ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಮತದಾರರ ದಿನದ ಸಂದರ್ಭದಲ್ಲಿ ಶುಭಾಶಯ ಕೋರಿದ ಪ್ರಧಾನಮಂತ್ರಿ  

Posted On: 25 JAN 2024 9:44AM by PIB Bengaluru

ರಾಷ್ಟ್ರೀಯ ಮತದಾರರ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯಗಳನ್ನು ಕೋರಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್  ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು, ಇದು ನಮ್ಮ ವೈವಿದ್ಯಮಯ ಪ್ರಜಾಪ್ರಭುತ್ವವನ್ನು ಆಚರಿಸುವ ಸಂದರ್ಭವಾಗಿದೆ ಮತ್ತು ಜನರು ಈಗಾಗಲೇ ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಅವರನ್ನು ಉತ್ತೇಜಿಸುವ ದಿನವಾಗಿದೆ.

ಬೆಳಿಗ್ಗೆ 11 ಗಂಟೆಗೆ, ನೂತನ ಮತದಾರರ ಸಮ್ಮೇಳನ (ನವ್ ಮತ್ ದಾತಾ  ಸಮ್ಮೇಳನ್ ) ಅನ್ನು ಉದ್ದೇಶಿಸಿ ಭಾಷಣ ಮಾಡಲಿದ್ದೇನೆ, ಈ ಸಮ್ಮೇಳನವು ಭಾರತದಾದ್ಯಂತ ಮೊದಲ ಬಾರಿಗೆ ಮತದಾನ ಮಾಡುವವರನ್ನು ಒಟ್ಟುಗೂಡಿಸುತ್ತದೆ.


(Release ID: 1999777) Visitor Counter : 102