ಪ್ರಧಾನ ಮಂತ್ರಿಯವರ ಕಛೇರಿ
ಚಂದ್ರನ ಮೇಲೆ ಸುಸೂತ್ರವಾಗಿ ನೌಕೆ ಇಳಿಸಿರುವುದಕ್ಕೆ ಜಪಾನ್ ಗೆ ಪ್ರಧಾನಿ ಅಭಿನಂದನೆ
प्रविष्टि तिथि:
20 JAN 2024 11:00PM by PIB Bengaluru
ಚಂದ್ರನ ಮೇಲೆ ಜಾಕ್ಸಾ (ಜೆ.ಎ.ಎಕ್ಸ್.ಎ.)ವು ಮೊದಲ ಬಾರಿಗೆ ಸುಸೂತ್ರವಾಗಿ ಬಾಹ್ಯಾಕಾಶ ನೌಕೆಯನ್ನು ಇಳಿಸಿರುವುದಕ್ಕಾಗಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.
ಬಾಹ್ಯಾಕಾಶ ಅನ್ವೇಷಣೆಯಲ್ಲಿ ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ (ಜಾಕ್ಸಾ) ದೊಂದಿಗೆ ಸಹಕರಿಸುವ ಅವಕಾಶವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಜಪಾನ್ ಮೊದಲ ಸಾಫ್ಟ್ ಮೂನ್ ಲ್ಯಾಂಡಿಂಗ್ ಸಾಧಿಸಿದ್ದಕ್ಕಾಗಿ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಜಾಕ್ಸಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಇಸ್ರೋ ಮತ್ತು ಜಾಕ್ಸಾ ನಡುವೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ನಮ್ಮ ಸಹಕಾರವನ್ನು ಭಾರತ ಎದುರು ನೋಡುತ್ತಿದೆ.” ಎಂದವರು ಹೇಳಿದ್ದಾರೆ.
***
(रिलीज़ आईडी: 1998575)
आगंतुक पटल : 125
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam