ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 20 JAN 2024 7:05PM by PIB Bengaluru

ತಮಿಳುನಾಡಿನ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಾರ್ಥನೆ ಸಲ್ಲಿಸಿದರು.

ಮಹಾನ್ ಶ್ರೀ ಕಂಬನ್ ಮೊದಲು ಸಾರ್ವಜನಿಕವಾಗಿ ತನ್ನ ರಾಮಾಯಣವನ್ನು ಪ್ರಸ್ತುತಪಡಿಸಿದ ದೇವಾಲಯದಲ್ಲಿ ಅವರು “ಕಂಬ ರಾಮಾಯಣ”ದ ಶ್ಲೋಕಗಳನ್ನು ಆಲಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶವನ್ನು ಹಂಚಿಕೊಂಡಿದ್ದಾರೆ; 

"ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಬಹಳ ಗೌರವವಿದೆ. ಈ ದೇವಾಲಯದೊಂದಿಗಿನ ಪ್ರಭು ಶ್ರೀರಾಮನ ಸಂಬಂಧವು ದೀರ್ಘಕಾಲದದ್ದಾಗಿದೆ. ಪ್ರಭು ಶ್ರೀರಾಮನು ಪೂಜಿಸಿದ ದೇವರಿಂದ ಆಶೀರ್ವಾದ ಪಡೆದಿದ್ದೇನೆ ಎಂದು ನಾನು ಭಾವಿಸುತ್ತೇನೆ."


  ಪ್ರಧಾನಮಂತ್ರಿಯವರು ದೇವಸ್ಥಾನದಲ್ಲಿ “ಕಂಬ ರಾಮಾಯಣ”ದ ಶ್ಲೋಕಗಳನ್ನು ಆಲಿಸಿದರು.

"ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಂಬ ರಾಮಾಯಣದ ಶ್ಲೋಕಗಳನ್ನು ಕೇಳುವುದು ನನ್ನ ಜೀವನದುದ್ದಕ್ಕೂ ನಾನು ಪಾಲಿಸುವ ಅನುಭವವಾಗಿದೆ. ಮಹಾನ್ ಶ್ರೀ ಕಂಬನ್ ತನ್ನ ರಾಮಾಯಣವನ್ನು ಮೊದಲು ಸಾರ್ವಜನಿಕವಾಗಿ ಪ್ರಸ್ತುತಪಡಿಸಿದ ದೇವಾಲಯ ಇದಾಗಿದೆ ಎಂಬುದು ಹೆಚ್ಚು ಮಹತ್ವಪೂರ್ಣವಾಗಿದೆ. @narendramodi "

***


 
 (Release ID: 1998573) Visitor Counter : 52