ಪ್ರಧಾನ ಮಂತ್ರಿಯವರ ಕಛೇರಿ

ವಡೋದರಾದ ಹರ್ನಿ ಸರೋವರದಲ್ಲಿ ದೋಣಿ ಮುಳುಗಿ ಸಾವನ್ನಪ್ಪಿದವರಿಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಸಂತಾಪ ಪರಿಹಾರ ಘೋಷಿಸಿದರು

Posted On: 18 JAN 2024 7:50PM by PIB Bengaluru

ವಡೋದರದ ಹರ್ನಿ ಸರೋವರದಲ್ಲಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಸಂಭವಿಸಿದ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಮೃತರ ಸನಿಹದ ಸಂಬಂಧಿಕರಿಗೆ ಪಿ.ಎಂ.ಎನ್‌.ಆರ್‌. ನಿಧಿಯಿಂದ ರೂ.2 ಲಕ್ಷಗಳನ್ನು ಮತ್ತು ಗಾಯಾಳುಗಳಿಗೆ ರೂ.  50,000 ಪರಿಹಾರವಾಗಿ ನೀಡುವುದಾಗಿಯೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದರು.  

ಪ್ರಧಾನಮಂತ್ರಿ ಕಾರ್ಯಾಲಯವು ಎಕ್ಸ್ ಖಾತೆಯಲ್ಲಿ  ಈ ರೀತಿ ಸಂದೇಶ ತಿಳಿಸಿದೆ;

 "ವಡೋದರದ ಹರ್ನಿ ಸರೋವರದಲ್ಲಿ ದೋಣಿ ಮುಳುಗಿ ಸಂಭವಿಸಿದೆ ಜೀವಹಾನಿಯಿಂದ ನೊಂದಿದ್ದೇನೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ದುಃಖತಪ್ತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ.

ಮೃತರ ಸನಿಹದ ಸಂಬಂಧಿಕರಿಗೆ ಪಿ.ಎಂ.ಎನ್‌.ಆರ್‌. ನಿಧಿಯಿಂದ ಸಂತಾಪ ಪರಿಹಾರವಾಗಿ ರೂ.2 ಲಕ್ಷಗಳನ್ನು ಮತ್ತು ಗಾಯಾಳುಗಳಿಗೆ ರೂ.  50,000 ಪರಿಹಾರವಾಗಿ  ನೀಡಲಾಗುತ್ತದೆ : ಪ್ರಧಾನಮಂತ್ರಿ 

***



(Release ID: 1997748) Visitor Counter : 55