ಸಂಪುಟ
azadi ka amrit mahotsav

16ನೇ ಹಣಕಾಸು ಆಯೋಗಕ್ಕೆ ಹುದ್ದೆಗಳ ಸೃಷ್ಟಿಗೆ ಸಚಿವ ಸಂಪುಟ ಅನುಮೋದನೆ

Posted On: 18 JAN 2024 12:54PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 16ನೇ ಹಣಕಾಸು ಆಯೋಗಕ್ಕೆ ಜಂಟಿ ಕಾರ್ಯದರ್ಶಿ ಹಂತದ ಮೂರು ಹುದ್ದೆಗಳನ್ನು ಅಂದರೆ ಎರಡು ಜಂಟಿ ಕಾರ್ಯದರ್ಶಿ ಮತ್ತು ಆರ್ಥಿಕ ಸಲಹೆಗಾರರ ಒಂದು ಹುದ್ದೆಯನ್ನು ರಚನೆ ಮಾಡಲು ಅನುಮೋದನೆ ನೀಡಿದೆ. ಡಿಸೆಂಬರ್ 31, 2023 ರ ಅಧಿಸೂಚನೆಯ ಪ್ರಕಾರ ಸಂವಿಧಾನದ 280ನೇ ವಿಧಿಯ ಅನುಸಾರ ಹುದ್ದೆಗಳನ್ನು ರಚಿಸಲಾಗಿದೆ.

ಹೊಸದಾಗಿ ರಚಿಸಲಾದ ಹುದ್ದೆಗಳು ಹಣಕಾಸು ಆಯೋಗಕ್ಕೆ ಅದರ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡಲಿದೆ. ನಿಯೋಜಿತ ಹುದ್ದೆಗಳ ಪ್ರಕಾರ ಆಯೋಗದ ಇತರ ಎಲ್ಲಾ ಹುದ್ದೆಗಳನ್ನು ಈಗಾಗಲೇ ರಚಿಸಲಾಗಿದೆ

****


(Release ID: 1997281) Visitor Counter : 130