ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಲತಾ ಮಂಗೇಶ್ಕರ್ ಹಾಡಿರುವ ಶ್ರೀರಾಮ ರಕ್ಷಾ ಶ್ಲೋಕವನ್ನು ಹಂಚಿಕೊಂಡ  ಪ್ರಧಾನಮಂತ್ರಿಗಳು 

Posted On: 17 JAN 2024 8:10AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲತಾ ಮಂಗೇಶ್ಕರ್ ಅವರು ಹಾಡಿರುವ "ಮಾತಾ ರಾಮೋ ಮತ್ಪಿತಾ ರಾಮಚಂದ್ರಃ" ಎಂಬ ಶ್ರೀರಾಮ ರಕ್ಷಾ ಶ್ಲೋಕವನ್ನು ಹಂಚಿಕೊಂಡಿದ್ದಾರೆ. 

ಇದು ಸುಪ್ರಸಿದ್ಧ ಗಾಯಕಿಯ ಧ್ವನಿ‌ ಮುದ್ರಣವಾದ ಕೊನೆಯ ಶ್ಲೋಕ ಆಗಿತ್ತು.

 ಈ ಬಗ್ಗೆ 'ಎಕ್ಸ್' ವೇದಿಕೆಯಲ್ಲಿ  ಪ್ರಧಾನ ಮಂತ್ರಿಗಳು ಸಂದೇಶ ಪೋಸ್ಟ್‌ ಮಾಡಿದ್ದಾರೆ;

“ದೇಶವು ಜನವರಿ 22ರ ಅವಿಸ್ಮರಣೀಯ ಸಂದರ್ಭವನ್ನು ಉತ್ಸಾಹದಿಂದ ಕಾಯುತ್ತಿರುವ ಹೊತ್ತಿನಲ್ಲಿ ನಮ್ಮೊಂದಿಗೆ ನಮ್ಮ‌ಪ್ರೀತಿಯ ಲತಾ ಅಕ್ಕನವರ ಅನುಪಸ್ಥಿತಿಯನ್ನು ನೆನಪಿಸಿಕೊಳ್ಳುತ್ತೇವೆ.

ಹಾಗಾಗಿ ಅವರು ಪ್ರಸ್ತುತಪಡಿಸಿರುವ ಗಾಯನವೊಂದು ಇಲ್ಲಿದೆ. 

ಇದು ಅವರ ಧ್ವನಿ ಮುದ್ರಣದ ಕೊನೆಯ ಶ್ಲೋಕ ಎಂದು ಅವರ ಕುಟುಂಬದವರು ನನಗೆ ತಿಳಿಸಿದ್ದಾರೆ. 

#ಶ್ರೀರಾಮಭಜನೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

***


(Release ID: 1996850) Visitor Counter : 102