ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಳೆದ 9 ವರ್ಷಗಳಲ್ಲಿ  24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಪಾರಾಗಿರುವುದಾಗಿ ನೀತಿ ಆಯೋಗದ ವರದಿಯಲ್ಲಿ ತಿಳಿಸಿದ್ದನ್ನು  ಉಲ್ಲೇಖಿಸುತ್ತಾ,  ಪ್ರತಿಯೊಬ್ಬ ಭಾರತೀಯನ ಸಮೃದ್ಧ ಭವಿಷ್ಯದ ಕಡೆಗೆ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

Posted On: 15 JAN 2024 7:41PM by PIB Bengaluru

ಸರ್ವತೋಮುಖ ಅಭಿವೃದ್ಧಿಯತ್ತ ಕೆಲಸ ಮಾಡುವುದನ್ನು ಮುಂದುವರಿಸಲು ಮತ್ತು ಪ್ರತಿಯೊಬ್ಬ ಭಾರತೀಯನ ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುನರುಚ್ಚರಿಸಿದರು.

ಬಹು ಆಯಾಮದ ಬಡತನದ ಕುರಿತು ಇಂದು ನೀತಿ ಆಯೋಗ್ ಬಿಡುಗಡೆ ಮಾಡಿದ ಚರ್ಚಾ ಪ್ರಬಂಧದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದರು.  

ನೀತಿ ಆಯೋಗದ ವರದಿಯು ಹೇಳುತ್ತದೆ, 2005-06 ರಿಂದ ನಂತರದ ವರ್ಷಗಳಲ್ಲಿ, ಭಾರತವು #ಎಂಪಿಐ ನಲ್ಲಿ 2013-14 ರಲ್ಲಿದ್ದ 29.17% ರಿಂದ 2022-23 ರಲ್ಲಿ 11.28% ಗೆ ಗಮನಾರ್ಹ ಕುಸಿತವನ್ನು ದಾಖಲಿಸಿದೆ, ಇದು ಒಟ್ಟಾರೆಯಾಗಿ 17.89% ರಷ್ಟು ಕಡಿಮೆಯಾಗಿದೆ.  ಇದರ ಪರಿಣಾಮವಾಗಿ ಕಳೆದ 9 ವರ್ಷಗಳಲ್ಲಿ 24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಪಾರಾಗಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

"ತುಂಬಾ ಉತ್ತೇಜನಕಾರಿಯಾಗಿದೆ, ಒಳಗೊಳ್ಳುವ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುವ ಕಡೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಆರ್ಥಿಕತೆಗಯು ಪರಿವರ್ತಕ ಬದಲಾವಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ನಾವು ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಪ್ರತಿಯೊಬ್ಬ ಭಾರತೀಯನ ಸಮಗ್ರ ಹಾಗೂ ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ."

***********


(Release ID: 1996457) Visitor Counter : 78