ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಮಹಾರಾಷ್ಟ್ರದ ನಾಸಿಕ್‌ನ ಶ್ರೀ ಕಲಾರಾಮ ಮಂದಿರದಲ್ಲಿ ದರ್ಶನ ಪಡೆದು ಪೂಜೆ ನೆರವೇರಿಸಿದರು
ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು
Posted On:
12 JAN 2024 3:18PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಲಾ ರಾಮ ಮಂದಿರದಲ್ಲಿ ದರ್ಶನ ಪಡೆದು ಮತ್ತು ಪೂಜೆ ಸಲ್ಲಿಸಿದರು. ಶ್ರೀರಾಮ ಕುಂಡದಲ್ಲಿ ವಿಶೇಷ ಪೂಜೆ ಮಾಡಿದರು. ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಇಂದು ನಾಸಿಕ್‌ನಲ್ಲಿ ಸಂಪ್ರದಾಯ ಮತ್ತು ತಂತ್ರಜ್ಞಾನದ ಗಮನಾರ್ಹ ಸಂಗಮವಿತ್ತು. ಪ್ರಧಾನಮಂತ್ರಿಯವರು ರಾಮಾಯಣದ ಮಹಾಕಾವ್ಯದ ನಿರೂಪಣೆಯನ್ನು ಕೇಳಿದರು, ನಿರ್ದಿಷ್ಟವಾಗಿ 'ಯುದ್ಧ ಕಾಂಡ' ವಿಭಾಗವು ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗುವುದನ್ನು ಚಿತ್ರಿಸುತ್ತದೆ. ಇದನ್ನು ಮರಾಠಿಯಲ್ಲಿ ಪ್ರಸ್ತುತಪಡಿಸಲಾಯಿತು ಮತ್ತು ಪ್ರಧಾನಮಂತ್ರಿಯವರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಹಿಂದಿ ಅನುವಾದ ಆವೃತ್ತಿಯನ್ನು ಆಲಿಸಿದರು.
ಈ ಕುರಿತು ಪ್ರಧಾನ ಮಂತ್ರಿಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ನೀಡಿದ್ದಾರೆ.
“ನಾಸಿಕ್‌ನ ಶ್ರೀ ಕಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥಿಸಿದೆ. ದೈವಿಕ ವಾತಾವರಣದಲ್ಲಿ ಆತ್ಮೀಯ ಭಾವನೆ. ನಿಜವಾದ ವಿನಮ್ರ ಮತ್ತು ಆಧ್ಯಾತ್ಮಿಕ ಅನುಭವ ದೊರೆಯಿತು. ನನ್ನ ಸಹ ಭಾರತೀಯರ ಶಾಂತಿ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸಿದೆ.
"ನಾಸಿಕ್‌ನ ರಾಮಕುಂಡ್‌ನಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿದೆ."
“ಶ್ರೀ ಕಲಾರಾಮ್ ದೇವಸ್ಥಾನದಲ್ಲಿ, ಸಂತ ಏಕನಾಥ್ ಜಿ ಅವರು ಮರಾಠಿಯಲ್ಲಿ ಬರೆದ ಭಾವಾರ್ಥ ರಾಮಾಯಣದ ಶ್ಲೋಕಗಳನ್ನು ಕೇಳುವ ಅನುಭವ ದೊರೆಯಿತು. ಪ್ರಭು ಶ್ರೀರಾಮನ ವಿಜಯೋತ್ಸವದ ಅಯೋಧ್ಯೆಗೆ ಹಿಂದಿರುಗಿದ ಬಗ್ಗೆ ವಿವರಿಸಲಾಗಿದೆ. ಭಕ್ತಿ ಮತ್ತು ಇತಿಹಾಸವನ್ನು ಅನುರಣಿಸುವ ಈ ಪಠಣವು ಬಹಳ ವಿಶೇಷವಾದ ಅನುಭವ ನೀಡಿತು.
“ನಾಸಿಕ್‌ನಲ್ಲಿ ಸ್ವಾಮಿ ವಿವೇಕಾನಂದರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಆಲೋಚನೆಗಳು ಮತ್ತು ದೂರದೃಷ್ಟಿ ನಮ್ಮನ್ನು ಸದಾ ಪ್ರೇರೇಪಿಸುತ್ತದೆ" ಎಂದು ಪ್ರಧಾನಮಂತ್ರಿಗಳು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
***
(Release ID: 1995522)
Visitor Counter : 107
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Tamil
,
Telugu
,
Malayalam