ಪ್ರಧಾನ ಮಂತ್ರಿಯವರ ಕಛೇರಿ
ಎಕ್ಸ್ಪೊಸ್ಯಾಟ್ ಉಪಗ್ರಹದ ಯಶಸ್ವಿ ಉಡಾವಣೆ ಬಗ್ಗೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದ್ದಾರೆ
प्रविष्टि तिथि:
01 JAN 2024 2:03PM by PIB Bengaluru
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಎಕ್ಸ್ ಪೋಸ್ಯಾಟ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ಎತ್ತರಕ್ಕೆ ಕೊಂಡೊಯ್ದ ಇಸ್ರೋ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಸಮುದಾಯವನ್ನು ಅವರು ಅಭಿನಂದಿಸಿದರು.
ಪ್ರಧಾನ ಮಂತ್ರಿಯವರು ತಮ್ಮ ಎಕ್ಸ್ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ:
" ನಮ್ಮ ವಿಜ್ಞಾನಿಗಳಿಂದಾಗಿ 2024ಕ್ಕೆ ಉತ್ತಮ ಆರಂಭ! ಈ ಉಡಾವಣೆ ಬಾಹ್ಯಾಕಾಶ ಕ್ಷೇತ್ರಕ್ಕೆ ಅದ್ಭುತ ಸುದ್ದಿಯಾಗಿದೆ ಮತ್ತು ಈ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಭಾರತವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇಸ್ರೋ ನಲ್ಲಿರುವ ನಮ್ಮ ವಿಜ್ಞಾನಿಗಳು ಮತ್ತು ಇಡೀ ಬಾಹ್ಯಾಕಾಶ ಸಮುದಾಯಕ್ಕೆ ಅಭಿನಂದನೆಗಳು."
(रिलीज़ आईडी: 1992165)
आगंतुक पटल : 203
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Bengali-TR
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam