ಪ್ರಧಾನ ಮಂತ್ರಿಯವರ ಕಛೇರಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ T2 ಇಂಟೀರಿಯರ್‌ಗಾಗಿ ವಿಶ್ವ ವಿಶೇಷ ಬಹುಮಾನ ಪಡೆದಿದ್ದಕ್ಕೆ ಪ್ರಧಾನಿ ಅಭಿನಂದನೆ
Posted On:
23 DEC 2023 5:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಟರ್ಮಿನಲ್ 2 ವಿಮಾನ ನಿಲ್ದಾಣಗಳ ವಿಭಾಗದಲ್ಲಿ ಇಂಟೀರಿಯರ್ 2023ಗಾಗಿ ವಿಶೇಷ ಬಹುಮಾನಕ್ಕೆ ಭಾಜನರಾಗಿದ್ದಕ್ಕಾಗಿ ಅಭಿನಂದಿಸಿದರು.
ಪ್ರಧಾನಮಂತ್ರಿಗಳು ಕಳೆದ ವರ್ಷ ಟರ್ಮಿನಲ್ ಕಟ್ಟಡದ ಉದ್ಘಾಟನೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿಗಳು ಸಾಮಾಜಿಕ ಜಾಲತಾಣ X ನಲ್ಲಿ ಈ ಕುರಿತು ಸಂದೇಶ ನೀಡಿದ್ದಾರೆ.
"ಶ್ಲಾಘನೀಯ ಸಾಧನೆ! ಬೆಂಗಳೂರಿನ ಜನತೆಗೆ ಅಭಿನಂದನೆಗಳು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರೋಮಾಂಚಕ ನಗರ ಬೆಂಗಳೂರಿನ ಹೆಬ್ಬಾಗಿಲು ಮಾತ್ರವಲ್ಲದೆ ವಾಸ್ತುಶಿಲ್ಪದ ಶ್ರೀಮಂತ ವೈಭವವಾಗಿದೆ. ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಕಲಾತ್ಮಕ ಸೌಂದರ್ಯದೊಂದಿಗೆ ಸಂಯೋಜಿಸುವಲ್ಲಿ ದೇಶದ ಪ್ರತಿಭೆಯನ್ನು ಪ್ರತಿಬಿಂಬಿಸುತ್ತದೆ.
ಕಳೆದ ವರ್ಷ ಟರ್ಮಿನಲ್ ಕಟ್ಟಡದ ಉದ್ಘಾಟನೆಯ ಚಿತ್ರಗಳು ಇಲ್ಲಿವೆ" ಎಂದು ಸಂದೇಶ ನೀಡಿದ್ದಾರೆ.
***
(Release ID: 1991107)
Visitor Counter : 82
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam