ಉಪರಾಷ್ಟ್ರಪತಿಗಳ ಕಾರ್ಯಾಲಯ

ಪ್ರಧಾನಮಂತ್ರಿಯವರು ಉಪರಾಷ್ಟ್ರಪತಿಗಳಿಗೆ ಕರೆ ಮಾಡಿ, "ಪವಿತ್ರ ಸಂಸತ್ತಿನ ಆವರಣದಲ್ಲಿ  ಕೆಲವು ಸಂಸದರ ಹೀನಾಯ ವರ್ತನೆಗಳ ಬಗ್ಗೆ ತೀವ್ರ ದುಃಖವನ್ನು  ವ್ಯಕ್ತಪಡಿಸಿದ್ದಾರೆ"


“ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ನಾನೂ ಕೂಡ ಇಂತಹ ಅವಮಾನಕ್ಕೆ ಒಳಗಾಗಿದ್ದೇನೆ” – ಉಪರಾಷ್ಟ್ರಪತಿಗಳಿಗೆ 
ಪ್ರಧಾನಿ

ಭಾರತದ  ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಹೀಗಾಗುತ್ತಿರುವುದು ದುರದೃಷ್ಟಕರ.

"ಕೆಲವರ ಹೀನಾಯ ವರ್ತನೆಗಳು   ನನ್ನ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯಲು ಸಾಧ್ಯವಿಲ್ಲ" -  ಉಪರಾಷ್ಟ್ರಪತಿಗಳು

Posted On: 20 DEC 2023 10:40AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರಿಗೆ ಕರೆ ಮಾಡಿ, "ನಿನ್ನೆ ಕೆಲವು ಸಂಸದರು, ಅದರಲ್ಲೂ  ಸಂಸತ್ತಿನ ಪವಿತ್ರ ಆವರಣದಲ್ಲಿ “ಪ್ರದರ್ಶಿಸಿದ ಹೀನಾಯ ವರ್ತನೆ”ಗಳ   ಬಗ್ಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿದರು. 
 
ಸಂವಾದದ ವೇಳೆ, ಪ್ರಧಾನಮಂತ್ರಿಯವರು ಶ್ರೀ ಧನಕರ್ ಅವರಿಗೆ ಕಳೆದ ಇಪ್ಪತ್ತು ವರ್ಷಗಳಿಂದ ತಾವೂ   ಇಂತಹ ಅವಮಾನಗಳನ್ನು ಎದುರಿಸಿರುವುದಾಗಿ   ಹೇಳಿದರು. “ಆದರೆ ದೇಶದ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಹೀಗಾಗುತ್ತಿರುವುದು  ಅದರಲ್ಲೂ  ಸಂಸತ್ತಿನಲ್ಲಿ ಈ ರೀತಿ ಆಗಿರುವುದು ದುರದೃಷ್ಟಕರ’ ಎಂದರು.

 
"ಕೆಲವರ ಹೀನಾಯ ವರ್ತನೆಗಳು ನಾನು ನನ್ನ ಕರ್ತವ್ಯವನ್ನು ನಿರ್ವಹಿಸುವುದನ್ನು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳನ್ನು ಗೌರವಿಸುವುದನ್ನು ತಡೆಯಲು ಸಾಧ್ಯವಿಲ್ಲ" ಎಂದು ಉಪರಾಷ್ಟ್ರಪತಿಯವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು.

 ಸಾಂವಿಧಾನಿಕ ಮೌಲ್ಯಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಉಪರಾಷ್ಟ್ರಪತಿಯವರು, "ಯಾವುದೇ ಅವಮಾನಗಳು ನನ್ನ ಹಾದಿಯನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ಹೇಳಿದರು̤

*****

 



(Release ID: 1988637) Visitor Counter : 48