ಪ್ರಧಾನ ಮಂತ್ರಿಯವರ ಕಛೇರಿ
2023 ಡಿಸೆಂಬರ್ 14ರಂದು ಪುಣೆಯ ಎಸ್‌ಪಿ ಕಾಲೇಜಿನಲ್ಲಿ ಓದುವ ಬಹುದೊಡ್ಡ ಚಟುವಟಿಕೆಯಲ್ಲಿ ಗಿನ್ನೆಸ್ ವಿಶ್ವ ದಾಖಲೆ; ಪ್ರಧಾನಿ ಶ್ಲಾಘನೆ
Posted On:
14 DEC 2023 4:48PM by PIB Bengaluru
ಪುಣೆಯ ಎಸ್‌ಪಿ ಕಾಲೇಜಿನಲ್ಲಿ 2023 ಡಿಸೆಂಬರ್ 14ರಂದು 3,066 ಪೋಷಕರು ತಮ್ಮ ಮಕ್ಕಳಿಗೆ ಓದಿ ಕಥೆ ಹೇಳಿದರು. ಈ ಸಮಾಜದಲ್ಲಿ ಓದುವ ಸಂಸ್ಕೃತಿ ಉತ್ತೇಜಿಸಲು ತಮ್ಮ ಮಕ್ಕಳಿಗಾಗಿ ಓದುವ ಬಹುದೊಡ್ಡ ಚಟುವಟಿಕೆ ನಡೆಸಿ, ಗಿನ್ನೆಸ್ ವಿಶ್ವ ದಾಖಲೆ ಮಾಡಿರುವುದನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ನ್ಯಾಷನಲ್ ಬುಕ್ ಟ್ರಸ್ಟ್ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್ ಅನ್ನು ಹಂಚಿಕೊಂಡಿರುವ ಪ್ರಧಾನ ಮಂತ್ರಿ;
"ಓದುವ ಸಂತೋಷವನ್ನು ಮಕ್ಕಳಿಗೆ ಹರಡಲು ಪೋಷಕರು ನಡೆಸಿರುವ ಪ್ರಯತ್ನ ಶ್ಲಾಘನೀಯ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು” ಎಂದಿದ್ದಾರೆ.
***
(Release ID: 1986592)
Visitor Counter : 71
Read this release in:
Assamese
,
Odia
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam