ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ ಮೊದಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ 2023 ಉದ್ಘಾಟನೆ
Posted On:
10 DEC 2023 6:48PM by PIB Bengaluru
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ನವದೆಹಲಿಯಲ್ಲಿ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ 2023 ಅನ್ನು ಉದ್ಘಾಟಿಸಲಿದ್ದಾರೆ.
ಡಿಸೆಂಬರ್ 10 ರಿಂದ 17 ರವರೆಗೆ ನವದೆಹಲಿಯ ಮೂರು ಸ್ಥಳಗಳಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಸೇವಾ ಕ್ರೀಡಾ ಮಂಡಳಿಯಿಂದ 1400 ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದಾರೆ.
ಉದ್ಘಾಟನಾ ಸಮಾರಂಭವು ಇಂದಿರಾಗಾಂಧಿ ಕ್ರೀಡಾ ಸಂಕೀರ್ಣದಲ್ಲಿರುವ ಕೆಡಿ ಜಾಧವ್ ಒಳಾಂಗಣ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ದೆಹಲಿ ಪೊಲೀಸ್ ಬ್ಯಾಂಡ್ ಭವ್ಯವಾದ ಪ್ರದರ್ಶನವನ್ನು ನೀಡಲಿದೆ. ನಂತರ 'ಮಿಟ್ಟಿ ಮೇ ಮಿಲ್ ಜಾವಾ' ಮತ್ತು 'ವಂದೇ ಮಾತರಂ' ನಲ್ಲಿ ಪ್ರದರ್ಶನ ನೀಡುವ 'ವೀ ಆರ್ ಒನ್' ಎಂಬ ನೃತ್ಯ ಪ್ರದರ್ಶನ ಇರಲಿದೆ.
ಕ್ರೀಡಾ ಗೀತೆಯ ಟ್ರ್ಯಾಕ್ ಉದ್ಘಾಟನಾ ಸಮಾರಂಭದಲ್ಲಿ 'ಪ್ಯಾರಾ ಗೇಮ್ಸ್‌ನ ವಿಕಾಸ' ವಿಷಯದ ಮೇಲೆ ಎಲ್‌ಇಡಿ ಪ್ರದರ್ಶನವು ಪ್ರೇಕ್ಷಕರನ್ನು ಆಕರ್ಷಿಸಲಿದೆ. ಉದ್ಘಾಟನಾ ಸಮಾರಂಭಕ್ಕಾಗಿ SAI ಅಧಿಕಾರಿಗಳು ವಿಶೇಷ ಪ್ರದರ್ಶನವನ್ನು ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವು 'ಯುನೈಟೆಡ್ ಬೈ ಸ್ಪೋರ್ಟ್ಸ್' ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳಲಿದೆ ಮತ್ತು ಭಾಗವಹಿಸುವ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿಶೇಷ ಸಂದೇಶ ನೀಡಲಿದ್ದಾರೆ.
ಎಲ್ಲಾ ಪ್ಯಾರಾ ಅಥ್ಲೀಟ್‌ಗಳನ್ನು ಸಬಲೀಕರಣಗೊಳಿಸಲು ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಮತ್ತೊಂದು ಉಪಕ್ರಮವಾಗಿದೆ. ವಿಕಲಾಂಗರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಪ್ರಮುಖ ಯೋಜನೆಗಳನ್ನು ಆರಂಭಿಸಿದೆ. ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅನ್ನು ಮೂರು ಸ್ಥಳಗಳಲ್ಲಿ ಆಯೋಜಿಸಲಾಗಿದೆ - ಇಂದಿರಾ ಗಾಂಧಿ ಸ್ಟೇಡಿಯಂ, ಜವಾಹರ್ ಲಾಲ್ ನೆಹರು ಸ್ಟೇಡಿಯಂ ಮತ್ತು ಕರ್ಣಿ ಸಿಂಗ್ ಶೂಟಿಂಗ್ ರೇಂಜ್. ಅಥ್ಲೆಟಿಕ್ಸ್, ಶೂಟಿಂಗ್, ಆರ್ಚರಿ, ಫುಟ್‌ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ವೇಟ್‌ಲಿಫ್ಟಿಂಗ್ - ಏಳು ಪ್ಯಾರಾ ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿದೆ. ಶೀತಲ್ ದೇವಿ, ಭಾವಿನಾ ಪಟೇಲ್, ಅಶೋಕ್, ಪ್ರಮೋದ್ ಭಗತ್ ಸೇರಿದಂತೆ ಭಾರತದ ಕೆಲವು ಪ್ರಮುಖ ಅಂತಾರಾಷ್ಟ್ರೀಯ ಪ್ಯಾರಾ ಸ್ಟಾರ್‌ಗಳು ಭಾಗವಹಿಸಲಿದ್ದಾರೆ.
ಖೇಲೋ ಇಂಡಿಯಾ ಯೂತ್ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಅಗಾಧ ಯಶಸ್ಸಿನ ನಂತರ ಇದೀಗ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಆಯೋಜಿಸಲಾಗುತ್ತಿದ್ದು, ಪ್ರಥಮ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಆಯೋಜಿಸುತ್ತಿರುವ ಬಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಸಂಭ್ರಮದ ವಾತಾವರಣವಿದೆ. ಈ ವಾರ ಕ್ರೀಡಾ ಹಬ್ಬಿ ಇರುವುದರಿಂದ ಒಳಗೊಳ್ಳುವಿಕೆಯ ಸಂಕೇತ ಮತ್ತು ಘನತೆಯನ್ನು ಎತ್ತಿ ತೋರಿಸಲಿದೆ.
*****
(Release ID: 1984872)
Visitor Counter : 82